/newsfirstlive-kannada/media/post_attachments/wp-content/uploads/2024/05/Virat-Kohli-RCB.jpg)
- ಐಪಿಎಲ್ ಅಭಿಯಾನಕ್ಕೆ ಆರ್ಸಿಬಿ ಭರ್ಜರಿ ತಯಾರಿ
- ಡಿಕೆ ಉತ್ತರಾಧಿಕಾರಿಯಾಗಿ ಜಿತೇಶ್ ಶರ್ಮಾ ಎಂಟ್ರಿ
- 11 ಕೋಟಿ ನೀಡಿ ಜಿತೇಶ್ ಶರ್ಮಾ ಖರೀದಿಸಿದ ಆರ್ಸಿಬಿ
ವಿರಾಟ್ ಕೊಹ್ಲಿ ಆರ್​ಸಿಬಿ ತಂಡಕ್ಕೆ ಮತ್ತೆ ಕ್ಯಾಪ್ಟನ್ ಆಗುತ್ತಾರೆ ಅಂತಾ ಚರ್ಚೆ ಆಗಿತ್ತು. ಕೊನೆಯಲ್ಲಿ ಫ್ರಾಂಚೈಸಿ ರಜತ್ ಪಾಟಿದಾರ್​ಗೆ ನಾಯಕತ್ವ ಪಟ್ಟ ಕಟ್ಟಿದೆ. ಬೆನ್ನಲ್ಲೇ ಯಾಕೆ ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಇನ್ನೂ ಇದೆ. ಇದೀಗ ಆರ್​ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ, ಕೊಹ್ಲಿ ಕ್ಯಾಪ್ಟನ್ ಆಗದಿರುವ ಬಗ್ಗೆ ಮಾತನ್ನಾಡಿದ್ದಾರೆ.
ರಜತ್ ಪಾಟೀದಾರ್ ಆರ್​ಸಿಬಿ ಕ್ಯಾಪ್ಟನ್ ಆಗುತ್ತಾರೆ ಅಂತಾ ಎಲ್ಲರಿಗೂ ಗೊತ್ತಾದಾಗಲೇ ನನಗೂ ಗೊತ್ತಾಯ್ತು. ಕೆಲವು ವಿಚಾರಗಳು ಅದರಲ್ಲಿ ಭಾಗಿಯಾದಗ ಮಾತ್ರ ಅರ್ಥ ಆಗುತ್ತವೆ. ವಿರಾಟ್ ಭಾಯ್, ಕ್ಯಾಪ್ಟನ್ ಆಗಲು ಬಯಸಲಿಲ್ಲ. ಅವರು ಯಾಕೆ ಕ್ಯಾಪ್ಟನ್ ಆಗಲು ಇಷ್ಟಪಟ್ಟಿಲ್ಲ ಅಂತಾ ನಂಗೆ ಗೊತ್ತಿಲ್ಲ. ತಂಡದ ಮ್ಯಾನೇಜ್ಮೆಂಟ್​ನಲ್ಲಿ ನಾನಿಲ್ಲ. ಇದ್ದಿದ್ದರೆ ಹೇಳುತ್ತಿದ್ದೆ. ಕಳೆದ ಎರಡ್ಮೂರು ವರ್ಷಗಳಿಂದ ಅವರು ನಾಯಕತ್ವವನ್ನು ನಿಭಾಯಿಸಿಲ್ಲ. ಹೀಗಾಗಿ ಕ್ಯಾಪ್ಟನ್ಸಿ ಜವಾಬ್ದಾರಿ ಒಪ್ಪಿಕೊಳ್ಳಲು ನಿರಾಕರಿಸಿರಬಹುದು. ನನ್ನ ಪ್ರಕಾರ ರಜತ್ ಪಾಟೀದಾರ್ ಒಳ್ಳೆಯ ಆಯ್ಕೆ
ರಜತ್ ಪಾಟೀದಾರ್ ಕ್ಯಾಪ್ಟನ್ಸಿಗೆ ಅರ್ಹರಿದ್ದಾರೆ. ಆರ್​ಸಿಬಿಯಲ್ಲಿ ಹಲವು ವರ್ಷಗಳಿಂದ ಆಡ್ತಿದ್ದಾರೆ. ನಾನು ರಜತ್ ಜೊತೆ ತುಂಬಾ ಕ್ರಿಕೆಟ್ ಆಡಿದ್ದೇನೆ. ಕ್ಯಾಪ್ಟನ್ಸಿ ವಿಚಾರದಲ್ಲಿ ರಜತ್​​ಗೆ ಬೆಂಬಲ ನೀಡುತ್ತೇನೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ನಿವೃತ್ತಿ ಹಿನ್ನೆಲೆಯಲ್ಲಿ ಆರ್​ಸಿಬಿ DK ಉತ್ತರಾಧಿಕಾರಿಯಾಗಿ ಜಿತೇಶ್ ಶರ್ಮಾರನ್ನು ಕರೆದುಕೊಂಡು ಬಂದಿದೆ. ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾಗೆ ಬರೋಬ್ಬರಿ 11 ಕೋಟಿ ರೂಪಾಯಿ ನೀಡಿದೆ. ಕಳೆದ ಐಪಿಎಲ್ ಸೀಸನ್​ನಲ್ಲಿ ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು.
ಇದನ್ನೂ ಓದಿ: Masters League T20 ಗೆದ್ದ ಸಚಿನ್ ನೇತೃತ್ವದ ಇಂಡಿಯಾ ಮಾಸ್ಟರ್ಸ್.. 1 ಕೋಟಿ ರೂಪಾಯಿ ಬಹುಮಾನ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್