ಕೊಹ್ಲಿ ಔಟ್ ಆಗ್ತಿದ್ದಂತೆ ಜೇಟ್ಲಿ ಸ್ಟೇಡಿಯಂ ಫುಲ್​ ಖಾಲಿ ಖಾಲಿ.. ವಿರಾಟ್ ಕ್ಲೀನ್ ಬೋಲ್ಡ್​, ಫ್ಯಾನ್ಸ್ ಬೇಸರ

author-image
Bheemappa
Updated On
ಕೊಹ್ಲಿ ಔಟ್ ಆಗ್ತಿದ್ದಂತೆ ಜೇಟ್ಲಿ ಸ್ಟೇಡಿಯಂ ಫುಲ್​ ಖಾಲಿ ಖಾಲಿ.. ವಿರಾಟ್ ಕ್ಲೀನ್ ಬೋಲ್ಡ್​, ಫ್ಯಾನ್ಸ್ ಬೇಸರ
Advertisment
  • ಕಿಂಗ್ ಬ್ಯಾಟಿಂಗ್​​ಗಾಗಿ ನಿನ್ನೆಯಿಂದಲೂ ಕಾದು ಕುಳಿದ್ದ ಜನರು
  • ಕೆಲವೇ ರನ್​ಗೆ ಔಟ್ ಆಗ್ತಿದ್ದಂತೆ ಜಾಗ ಖಾಲಿ ಮಾಡಿದ ಫ್ಯಾನ್ಸ್
  • ವಿರಾಟ್​ ಬ್ಯಾಟಿಂಗ್​ ನೋಡಲು ಆಗಮಿಸಿದ್ದ ಅಭಿಮಾನಿಗಳು

ರಣಜಿ ಟ್ರೋಫಿಯಲ್ಲಿ ಹಲವು ವರ್ಷಗಳ ಬಳಿಕ ಬ್ಯಾಟಿಂಗ್​ ಮಾಡುತ್ತಿರುವ ವಿರಾಟ್ ಕೊಹ್ಲಿ ಅವರು ತವರಿನ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿದ್ದಾರೆ. ದೊಡ್ಡ ಇನ್ನಿಂಗ್ಸ್ ಕಟ್ಟಬಹುದೆಂದು ಕನಸು ಕಂಡಿದ್ದ ಫ್ಯಾನ್ಸ್​ಗೆ ಇದೀಗ ಸಿಡಿಲು ಬಡಿದಂತೆ ಆಗಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರೈಲ್ವೇಸ್ ತಂಡದ ವಿರುದ್ಧ ದೆಹಲಿ ತಂಡ ಬ್ಯಾಟಿಂಗ್ ಮಾಡುತ್ತಿದೆ. ದೆಹಲಿ ತಂಡದ ಪರ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದಾರೆ. ಆಸ್ಟ್ರೇಲಿಯಾದ ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರ ರಣಜಿ ಪಂದ್ಯದಲ್ಲೂ ಕೊಹ್ಲಿ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ. ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ದೆಹಲಿಯ ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಕೇವಲ 6 ರನ್​ಗಳಿಗೆ ಔಟ್ ಆಗಿದ್ದಾರೆ.

4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಆಗಮಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳ ಕೇಕೇ, ಸಿಳ್ಳೆ, ಚಪ್ಪಾಳೆ ದೊಡ್ಡ ಮಟ್ಟದಲ್ಲಿ ಇತ್ತು. ಬ್ಯಾಟಿಂಗ್ ಮೂಲಕ ವಿರಾಟ್ ರಂಜಿಸಬಹುದು ಎಂದು ಫ್ಯಾನ್ಸ್ ಭಾವಿಸಿದ್ದರು. ನಿನ್ನೆಯಿಂದಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಕಾಯ್ದುಕೊಂಡಿದ್ದ ಫ್ಯಾನ್ಸ್​ಗೆ ನಿರಾಸೆಯಾಗಿದೆ. ಕೊಹ್ಲಿ ಬ್ಯಾಟಿಂಗ್​​ಗೆ ಬರುತ್ತಾರೆಂದು ನಿನ್ನೆಯಿಂದಲೂ ಸ್ಟೇಡಿಯಂ ಜನರಿಂದ ತುಂಬಿ ತುಳುಕುತ್ತಿತ್ತು. ಆದರೆ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಕೇವಲ 6 ರನ್​ ಗಳಿಸಿ ಔಟ್ ಆಗಿದ್ದರಿಂದ ಅಭಿಮಾನಿಗಳು ನಿರಾಸೆಯಿಂದ ಸ್ಟೇಡಿಯಂ ಖಾಲಿ ಮಾಡಿದ್ದಾರೆ.

publive-image

ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ‘Q’.. ವಿರಾಟ್​ ಕೊಹ್ಲಿ ನೋಡಲು ಸ್ಟೇಡಿಯಂಗೆ ಬಂದ ಯುವಕರಿಗೆ ಬಿಗ್ ಶಾಕ್

ರೈಲ್ವೇಸ್​ ಪರ ಬೌಲರ್ ಹಿಮಾಂಶು ಸಂಘ್ವಾನ್ ಅವರ ಬೌಲಿಂಗ್​ನಲ್ಲಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಕ್ಲೀನ್ ಬೋಲ್ಡ್​ ಆಗಿದ್ದಾರೆ. ಕೊಹ್ಲಿ ಔಟ್ ಆಗುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಎದ್ದು ಹೊರಡುತ್ತಿದ್ದರು. ಸಾಕಷ್ಟು ಭರವಸೆ ಹೊತ್ತು ಬಂದಿದ್ದವರು ಕೊಹ್ಲಿ ಬ್ಯಾಟಿಂಗ್​ನಿಂದ ಬೇಸರ ವ್ಯಕ್ತಪಡಿಸಿದರು. ಇದರಿಂದ ಸ್ಟೇಡಿಯಂ ಸದ್ಯಕ್ಕೆ ಖಾಲಿ ಖಾಲಿ ಆಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿದ್ದ ದೆಹಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ಮಾಡಿದ್ದ ರೈಲ್ವೇಸ್ 241 ರನ್​ಗಳಿಗೆ ಆಲೌಟ್ ಆಗಿತ್ತು. ಇದಾದ ಮೇಲೆ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದೆಹಲಿ ಸದ್ಯಕ್ಕೆ ಕೊಹ್ಲಿ ಸೇರಿ 4 ವಿಕೆಟ್​ ಕಳೆದುಕೊಂಡು 168 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ. ಇದಾದ ಮೇಲೆ ಇನ್ನು ಸೆಕೆಂಡ್ ಇನ್ನಿಂಗ್ಸ್ ಬಾಕಿ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment