newsfirstkannada.com

RCB ಫ್ಯಾನ್ಸ್​​ಗೆ ಆಘಾತದ ಸುದ್ದಿ​.. ಟೆಸ್ಟ್​ ಸರಣಿ ಮಾತ್ರವಲ್ಲ, IPL​ ಟೂರ್ನಿಗೂ ವಿರಾಟ್​ ಕೊಹ್ಲಿ ಅನುಮಾನ.?

Share :

Published February 13, 2024 at 11:03am

Update February 13, 2024 at 11:04am

    ಮೊದಲ ಬಾರಿ ಟೆಸ್ಟ್​ ಸರಣಿಗೆ ಕೊಹ್ಲಿ ಅಲಭ್ಯ.!

    ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ ಯಾವಾಗ.?

    3 ತಿಂಗಳು, 6 ಸರಣಿ , ಕೊಹ್ಲಿ ಆಡಿದ್ದು 4 ಪಂದ್ಯ.!

ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ ಯಾವಾಗ?. ಭಾರತೀಯ ಕ್ರಿಕೆಟ್​ ಅಭಿಮಾನಿಗಳನ್ನ ಬಿಡದೇ ಕಾಡ್ತಿರೋ ಪ್ರಶ್ನೆಯಿದು. ಕಿಂಗ್​ ಕೊಹ್ಲಿಯ ಕಮ್​ಬ್ಯಾಕ್​ ವಿಚಾರದಲ್ಲಿ ಸದ್ಯಕ್ಕಂತೂ ಸ್ಪಷ್ಟತೆ ಸಿಕ್ಕಿಲ್ಲ. ಆದರ ನಡುವೆ ಮತ್ತೊಂದು ಶಾಕಿಂಗ್​ ಸುದ್ದಿ ಹೊರ ಬಿದ್ದಿದೆ. ಏನದು ಹೊಸ ಸುದ್ದಿ.? ಇಲ್ಲಿದೆ ಡಿಟೇಲ್ಸ್​​!.

ಇಂಗ್ಲೆಂಡ್​ ಎದುರಿನ ಮೊದಲ 2 ಟೆಸ್ಟ್​ನಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ, ಇದೀಗ ಉಳಿದ 3 ಪಂದ್ಯಗಳಿಂದಲೂ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ. ವೈಯಕ್ತಿಕ ಕಾರಣ ನೀಡಿ ವಿರಾಟ್​​ ಕೊಹ್ಲಿ ರಜೆ ಕೇಳಿದ್ರೆ, ಬಿಸಿಸಿಐ & ಟೀಮ್​ ಮ್ಯಾನೇಜ್​ಮೆಂಟ್​​ ಇದಕ್ಕೆ ಒಪ್ಪಿಗೆ ನೀಡಿದೆ. ಇಷ್ಟೇ ಅಲ್ಲ. ಕೊಹ್ಲಿಗೆ ನಮ್ಮ ಬೆಂಬಲ ಇದೆ ಅಂತಲೂ ಬಿಸಿಸಿಐ ತನ್ನ ಸ್ಟೇಟ್​ಮೆಂಟ್​ನಲ್ಲಿ ಹೇಳಿಕೊಂಡಿದೆ. ಆದ್ರೆ, ಆ ವೈಯಕ್ತಿಕ ಕಾರಣ ಏನು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಕರಿಯರ್​ನಲ್ಲೇ ಮೊದಲ ಬಾರಿ ಟೆಸ್ಟ್​ ಸರಣಿಗೆ ಕೊಹ್ಲಿ ಅಲಭ್ಯ.!

2011ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ವಿರಾಟ್​ ಕೊಹ್ಲಿ, ಮೊದಲ ವೆಸ್ಟ್​ ಇಂಡೀಸ್​​​ ಪ್ರವಾಸದಲ್ಲಿ ಕಳಪೆ ಪರ್ಫಾಮೆನ್ಸ್​​​ ನೀಡಿದ್ರು. ಹೀಗಾಗಿ ಇಂಗ್ಲೆಂಡ್​ ಪ್ರವಾಸದಿಂದ ಕೊಹ್ಲಿಯನ್ನ ಡ್ರಾಪ್​ ಮಾಡಲಾಗಿತ್ತು. ಅದೇ ಕೊನೆ ಅದಾದ ಬಳಿಕ ನಡೆದ ಎಲ್ಲಾ ಟೆಸ್ಟ್​​ ಸರಣಿಗಳಲ್ಲಿ ಕೊಹ್ಲಿ ಟೀಮ್​ ಇಂಡಿಯಾ ಭಾಗವಾಗಿದ್ರು. ಆದರೆ, ಇದೇ ಮೊದಲ ಬಾರಿಗೆ ಕೊಹ್ಲಿ ಟೆಸ್ಟ್​ ಸರಣಿಯಿಂದಲೇ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ.

ಅಂದು ತಂದೆ ಸಾವಿನ ನಡುವೆಯೂ ಮೈದಾನಕ್ಕಿಳಿದು ಹೋರಾಟ.!

ವಿರಾಟ್​​ ಕೊಹ್ಲಿ ಟೆಸ್ಟ್​ ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ದೇಶ ಮೊದಲಾ.? ಕುಟುಂಬ ಮೊದಲಾ.? ಎಂಬ ಚರ್ಚೆ ನಡೀತಾಯಿದೆ. ಅಂದು, ತಂದೆ ತೀರಿಕೊಂಡ ಸಂದರ್ಭದಲ್ಲೂ ಬಂದು ಬ್ಯಾಟಿಂಗ್​ ನಡೆಸಿದ್ದ ಕೊಹ್ಲಿಯ ಕ್ರಿಕೆಟ್​ ಪ್ರೇಮ, ಡೆಡಿಕೇಷನ್​ ಅನ್ನ ಅನುಮಾನಿಸೋಕೆ ಸಾಧ್ಯವೇ ಇಲ್ಲ. ಆದ್ರೂ, ಈ ಬಾರಿ ಕೊಹ್ಲಿ ಕೂಡ ಮೌನಕ್ಕೆ ಜಾರಿದ್ದು, ಈ ಮೌನವೇ ಫ್ಯಾಮಿಲಿ ಫಸ್ಟ್​ ಅನ್ನೋ ಉತ್ತರವನ್ನ ನೀಡ್ತಿದೆ.

ಐಪಿಎಲ್​ ಟೂರ್ನಿಗೂ ವಿರಾಟ್​ ಕೊಹ್ಲಿ ಅನುಮಾನ.?

ಯೆಸ್​.. ಅಂದು ತಂದೆಯ ಸಾವಿನ ನಡೆವೆಯೂ ಪಂದ್ಯವನ್ನಾಡಿದ್ದ ಕೊಹ್ಲಿ, ಇದೀಗ ಲಾಂಗ್​ ಬ್ರೇಕ್​ ಪಡೆದಿದ್ದಾರೆ. ಇದನ್ನ ನೋಡಿದ ಮೇಲೆ ಕೊಹ್ಲಿ ಯಾವುದೋ ಗಂಭೀರ ಸಮಸ್ಯೆಯಲ್ಲಿದ್ದಾರೆ ಅನ್ನೋದು ಎಲ್ಲರ ಊಹೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಕೊಹ್ಲಿ ಮುಂಬರೋ ಐಪಿಎಲ್​ ಟೂರ್ನಿಯಿಂದಲೂ ಹೊರಗುಳಿಯೋ ನಿರ್ಧಾರ ಮಾಡೋ ಸಾಧ್ಯತೆಯಿದೆ. ಒಂದು ವೇಳೆ ಐಪಿಎಲ್​ ಆಡಿದ್ರೂ, ಆರಂಭಿಕ ಕೆಲ ಪಂದ್ಯಗಳನ್ನ ಆಡೋದು ಅನುಮಾನ ಎನ್ನಲಾಗ್ತಿದೆ.

ಮಗುವಾದ ಬಳಿಕ ‘ಫ್ಯಾಮಿಲಿ ಫಸ್ಟ್​​’ ಎಂದ ವಿರಾಟ್​​ ಕೊಹ್ಲಿ.!

ವಿರಾಟ್​ ಕೊಹ್ಲಿ ಕರಿಯರ್​​ನಲ್ಲಿ ಪಂದ್ಯಗಳನ್ನ ತಪ್ಪಿಸಿಕೊಂಡಿದ್ದು ತೀರಾ ಕಮ್ಮಿ. ತಮ್ಮ ವಿವಾಹದ ಸಂದರ್ಭದಲ್ಲಿ ಶ್ರೀಲಂಕಾ ಎದುರಿನ ವೈಟ್​ಬಾಲ್​ ಸರಣಿಗಳಿಂದ ಹೊರಗುಳಿದ್ರೂ ಕೂಡ, ನಾನು ಮುಂಬರೋ ಸೌತ್​ ಆಫ್ರಿಕಾ ಪ್ರವಾಸಕ್ಕೆ ಈ ಬ್ರೇಕ್​ನಲ್ಲಿ ಅಭ್ಯಾಸ ನಡೆಸ್ತೇನೆ ಎಂದಿದ್ರು. ಇಂತಾ ಕೊಹ್ಲಿ ಮಗುವಾದ ಬಳಿಕ ಬದಲಾದ್ರು. ಮಗಳು ವಮಿಕಾ ಹುಟ್ಟಿನ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ಅರ್ಧಕ್ಕೆ ವಾಪಾಸ್ಸಾಗಿದ್ರು. ಆ ಬಳಿಕ ಆಗಾಗ ಬ್ರೇಕ್​ ತೆಗೆದುಕೊಂಡಿದ್ರು. ಇದೀಗ 2ನೇ ಮಗುವಿನ ಸುದ್ದಿ ಸದ್ದು ಮಾಡ್ತಿದೆ. ಕಾಕತಾಳೀಯ ಎಂಬಂತೆ 2023ರ ವಿಶ್ವಕಪ್​ ಬಳಿಕ ಹಲ ಪಂದ್ಯಗಳಿಂದ ದೂರ ಉಳಿದಿದ್ದಾರೆ.

ಅಫ್ಘಾನಿಸ್ತಾನ ಎದುರಿನ ಮೊದಲ T20 ಪಂದ್ಯ

2023ರ ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ 5 ಪಂದ್ಯಗಳಿಂದ ಹೊರಗುಳಿದ ಕೊಹ್ಲಿ, ಸೌತ್​ ಆಫ್ರಿಕಾ ಪ್ರವಾಸದ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ರು. ಆ ನಂತರದ ಅಪ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ಕೊಹ್ಲಿ, ಇದೀಗ ಇಂಗ್ಲೆಂಡ್​ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿಯಿಂದಲೂ ಹೊರಗುಳಿದಿದ್ದಾರೆ.

3 ತಿಂಗಳು, 6 ಸರಣಿ , ಕೊಹ್ಲಿ ಆಡಿದ್ದು ಕೇವಲ 4 ಪಂದ್ಯ.!

ಕಳೆದ 3 ತಿಂಗಳಲ್ಲಿ ಟೀಮ್​ ಇಂಡಿಯಾ ಒಟ್ಟು 18 ಪಂದ್ಯಗಳನ್ನಾಡಿದ್ದು, ಒಟ್ಟು 6 ಸರಣಿಗಳನ್ನ ಆಡಿದೆ. ಈ ಪೈಕಿ ಕೊಹ್ಲಿ ಆಡಿರೋದು 4 ಪಂದ್ಯಗಳನ್ನ ಮಾತ್ರ. ಇದೀಗ ಐಪಿಎಲ್​ಗೂ ಕೊಹ್ಲಿ ಅಲಭ್ಯ ಅನ್ನೋ ಸುದ್ದಿ ಹೊರಬಿದ್ದಿದೆ. ಇದೆಲ್ಲವನ್ನ ನೋಡಿದ್ರೆ ಕೊಹ್ಲಿ ಯಾವುದೋ ಗಂಭೀರ ಸಮಸ್ಯೆಯಲ್ಲಿದ್ದಾರೆ ಅನ್ನೋದಂತೂ ಸ್ಪಷ್ಟವಾಗ್ತಿದೆ. ಆ ಸಮಸ್ಯೆಯಿಂದ ಸುಧಾರಿಸಿಕೊಂಡು ಕೊಹ್ಲಿ ಆದಷ್ಟು ಬೇಗ ಹೊರಬರಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಫ್ಯಾನ್ಸ್​​ಗೆ ಆಘಾತದ ಸುದ್ದಿ​.. ಟೆಸ್ಟ್​ ಸರಣಿ ಮಾತ್ರವಲ್ಲ, IPL​ ಟೂರ್ನಿಗೂ ವಿರಾಟ್​ ಕೊಹ್ಲಿ ಅನುಮಾನ.?

https://newsfirstlive.com/wp-content/uploads/2024/02/Kohli-1.jpg

Load More