newsfirstkannada.com

ಹೊಸ ಬಾಂಬ್​ ಹಾಕಿದ ಗವಾಸ್ಕರ್​, RCB ಫ್ಯಾನ್ಸ್​​​ಗೆ ಬೇಸರ.. ಕೊಹ್ಲಿ IPL ಆಡೋದು ಡೌಟ್..! ​

Share :

Published February 28, 2024 at 11:37am

    ಕೊಹ್ಲಿ ಭಾರತಕ್ಕೆ ಬರೋದ್ಯಾವಾಗ..? IPL ಆಡ್ತಾರಾ.?

    42 ದಿನದ ಹಿಂದೆ ಬೆಂಗಳೂರಲ್ಲಿ ಕಣಕ್ಕಿಳಿದಿದ್ದ ವಿರಾಟ್​

    T20 ವಿಶ್ವಕಪ್​ ದೃಷ್ಟಿಯಿಂದ IPL ಡು ಆರ್​​ ಡೈ ಕಣ

ಇಷ್ಟು ದಿನ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ಸರಣಿಯಿಂದ ದಿಢೀರ್​ ಹೊರಗುಳಿದಿದ್ದೇಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಬಿಡದೇ ಕಾಡಿತ್ತು. ಆ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಾಗಿದೆ. 2ನೇ ಮಗುವಿಗೆ ತಂದೆಯಾಗಿರೋ ವಿರಾಟ್​ ಕೊಹ್ಲಿ ಸದ್ಯ ಫುಲ್​ ಖುಷ್​ ಆಗಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಮಾತ್ರ ಪ್ರಶ್ನೆಯೊಂದು ಹಾಗೇ ಉಳಿದಿದೆ.

ವಿರಾಟ್​ ಕೊಹ್ಲಿ ಇಂಗ್ಲೆಂಡ್​ ಟೆಸ್ಟ್​ ಸರಣಿ ತೊರೆದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡೇ ಇರಲಿಲ್ಲ. ತಿಂಗಳುಗಳ ಬಳಿಕ ಮೊದಲ ಬಾರಿ ಕೊಹ್ಲಿ ಲಂಡನ್​ ರೆಸ್ಟೋರೆಂಟ್​​ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್​ನ ರೆಸ್ಟೋರೆಂಟ್​ನಲ್ಲಿ ಮಗಳು ವಮಿಕಾ ಜೊತೆಗೆ ಕೊಹ್ಲಿ ಇರೋ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದ್ರೊಂದಿಗೆ ಕೊಹ್ಲಿ ಇನ್ನೂ ಲಂಡನ್​ನಲ್ಲೇ ಉಳಿದಿರೋದು ಕನ್​ಫರ್ಮ್​ ಆಗಿದೆ.

ಲಂಡನ್​ನಲ್ಲೇ ಬೀಡುಬಿಟ್ಟ ವಿರಾಟ್​ ಕೊಹ್ಲಿ..!
YES.. ಅಭಿಮಾನಿಗಳ ಮನದಲ್ಲಿ ಸದ್ಯ ಕಾಡ್ತಿರೋ ಮಿಲಿಯನ್​ ಡಾಲರ್​​ ಪ್ರಶ್ನೆಯಿದು. 17ನೇ ಸೀಸನ್​​ನ ಐಪಿಎಲ್​ ಟೂರ್ನಿಯ ಶೆಡ್ಯೂಲ್​ ಅನೌನ್ಸ್​ ಆಗಿದೆ. ಈ ಸೀಸನ್​ನ ಮೊದಲ ಪಂದ್ಯದಲ್ಲೇ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು, ಚೈನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಕಾದಾಡಲಿದೆ. ಆದ್ರೆ, ಐಪಿಎಲ್​ ಬಂತು ಅನ್ನೋ ಖುಷಿಗಿಂತ ಆರ್​​ಸಿಬಿ ಅಭಿಮಾನಿಗಳಲ್ಲಿ ಆತಂಕವೇ ಹೆಚ್ಚಾಗಿದೆ. ಇನ್ನೂ ಭಾರತಕ್ಕೆ ವಾಪಾಸ್ಸಾಗದ ಕಿಂಗ್​ ಕೊಹ್ಲಿ ಐಪಿಎಲ್​ ಆಡ್ತಾರಾ.? ಇಲ್ವಾ.? ಅನ್ನೋ ಪ್ರಶ್ನೆ ಕಾಡ್ತಿದೆ.

ಹೊಸ ಬಾಂಬ್​ ಹಾಕಿದ ಗವಾಸ್ಕರ್​, ಫ್ಯಾನ್ಸ್​​​ಗೆ ಬೇಸರ..!
ವಿರಾಟ್​ ಕೊಹ್ಲಿ ಐಪಿಎಲ್​ ಆಡ್ತಾರೋ.. ಇಲ್ವೋ..? ಅನ್ನೋ ಪ್ರಶ್ನೆಗೆ ಫ್ಯಾನ್ಸ್ ಉತ್ತರದ ಹುಡುಕಾಟದಲ್ಲಿದ್ದಾಗಲೇ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​​ ಹೊಸ ಬಾಂಬ್​ ಹಾಕಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದ ಕೊಹ್ಲಿ, ಐಪಿಎಲ್​ ಆಡೋದು ಅನುಮಾನವೇ ಎಂದು ಲೆಜೆಂಡ್​ ಗವಾಸ್ಕರ್​​ ಓಪನ್​ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ.

‘ಐಪಿಎಲ್​ನಿಂದಲೂ ಹೊರಗುಳಿಯಬಹುದು’
‘ವಿರಾಟ್​ ಕೊಹ್ಲಿ ಐಪಿಎಲ್​​ ಆಡ್ತಾರಾ..? ಕೆಲ ಕಾರಣಗಳಿಂದಾಗಿ ಸದ್ಯ ಅವರು ಆಡ್ತಾ ಇಲ್ಲ. ಹೀಗಾಗಿ ಐಪಿಎಲ್ ಟೂರ್ನಿಯಿಂದಲೂ ಅವರು ಹೊರಗುಳಿಯಬಹುದು’ –ಸುನಿಲ್​ ಗವಾಸ್ಕರ್​​, ಮಾಜಿ ಕ್ರಿಕೆಟಿಗ

ಫೆಬ್ರವರಿ 15ರಂದು ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ 2ನೇ ಮಗುವನ್ನ ಸ್ವಾಗತಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಇಂಗ್ಲೆಂಡ್​ನಲ್ಲೇ ಕೊಹ್ಲಿ – ಅನುಷ್ಕಾ ಉಳಿದಿದ್ದಾರೆ. ಐಪಿಎಲ್​ ಟೂರ್ನಿಗೆ 3 ವಾರಗಳಷ್ಟೇ ಬಾಕಿ ಉಳಿದಿದ್ದು, ಚಿಕ್ಕ ಮಗುವಿನೊಂದಿಗೆ ವಿರುಷ್ಕಾ ಜೋಡಿ ಭಾರತಕ್ಕೆ ವಾಪಾಸ್​​ ಟ್ರಾವೆಲ್​ ಮಾಡೋದು ಅನುಮಾನವೇ ಆಗಿದೆ. ಅನುಷ್ಕಾ ಒಬ್ಬರನ್ನೇ ಬಿಟ್ಟು ಕೊಹ್ಲಿ ಒಬ್ಬರೇ ಭಾರತಕ್ಕೆ ವಾಪಾಸ್ಸಾಗೋ ಸಾಧ್ಯತೆಯೂ ಕಡಿಮೆಯಿದೆ.

ಜನವರಿ 17ರಂದು ಕೊನೆಯ ಬಾರಿ ಆಡಿದ್ದ ಕೊಹ್ಲಿ.!
ಜನವರಿ 17ರಂದು ಅಂದ್ರೆ, ಇಂದಿಗೆ 42 ದಿನಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್​ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಪಂದ್ಯವನದನಾಡಿದ್ರು, ಅದೇ ಕೊನೆ.. ಆ ಬಳಿಕ ವಿರಾಟ್​ ಕೊಹ್ಲಿ ಮತ್ತೆ ಮೈದಾನಕ್ಕಿಳಿದಿಲ್ಲ. ಹೀಗಾಗಿ ಐಪಿಎಲ್​ಗೂ ಮುನ್ನ ಕೊಹ್ಲಿಗೆ ಕನಿಷ್ಟ 1 ವಾರದ ಅಭ್ಯಾಸವಾದ ಅಗತ್ಯತೆಯಂತೂ ಇದೆ. ಮಾರ್ಚ್​​ 10ರ ಬಳಿಕ ಆರ್​​ಸಿಬಿ ಕ್ಯಾಂಪ್​ ಆಯೋಜಿಸೋ ಲೆಕ್ಕಾಚಾರದಲ್ಲಿದೆ. ಆದ್ರೆ, ಕೊಹ್ಲಿ ಪ್ರಾಕ್ಟಿಸ್​ ಕ್ಯಾಂಪ್​ಗೆ ಬರೋದು ಅನುಮಾನವೇ.!

T20 ವಿಶ್ವಕಪ್​ ದೃಷ್ಟಿಯಿಂದ IPL ಡು ಆರ್​​ ಡೈ ಕಣ.!
ಕಳೆದ ಟಿ20 ವಿಶ್ವಕಪ್​ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಕೊನೆಯ ಬಾರಿ ಟೀಮ್​ ಇಂಡಿಯಾ ಪರ ಪಂದ್ಯವನ್ನಾಡಿದ್ದ ಕೊಹ್ಲಿ, ಆ ಬಳಿಕ ಟಿ20 ಸೆಟಪ್​ನಿಂದ ದೂರ ಉಳಿದಿದ್ರು. ಒಂದೂವರೆ ವರ್ಷದ ಬಳಿಕ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ಕಮ್​ಬ್ಯಾಕ್​ ಮಾಡಿದ್ರೂ, ಆಡಿದ್ದು 2 ಪಂದ್ಯದಲ್ಲಿ ಮಾತ್ರ. ಅಲ್ಲೂ ಉತ್ತಮ ಪರ್ಫಾಮೆನ್ಸ್​​ ನೀಡುವಲ್ಲಿ ಫೇಲ್​ ಆಗಿದ್ದಾರೆ. ಇನ್ನೊಂದೆಡೆ ಯುವ ಆಟಗಾರರು ಸಾಲಿಡ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಹೀಗಾಗಿ ಕೊಹ್ಲಿ ಪಾಲಿಗೆ ಐಪಿಎಲ್​ ಡು ಆರ್​​ ಡೈ ಕಣವಾಗಿದೆ.

ಜೂನ್​ನಲ್ಲಿ ನಡೆಯೋ ವಿಶ್ವಕಪ್​ ಟೂರ್ನಿಯ ದೃಷ್ಟಿಯಿಂದ ವಿರಾಟ್​ ಕೊಹ್ಲಿ ಪಾಲಿಗೆ ಐಪಿಎಲ್​ ಟೂರ್ನಿ ಅಗ್ನಿ ಪರೀಕ್ಷೆಯ ಕಣವಾಗಿದೆ. ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿದ್ರೆ, ವಿಶ್ವಕಪ್​ ಟೂರ್ನಿಗೂ ಮುನ್ನ ಭಾರತ ತಂಡದ ಬಲವೂ ಹೆಚ್ಚಲಿದೆ. ಆದ್ರೆ, ಸದ್ಯ ಕೊಹ್ಲಿ ಐಪಿಎಲ್​ ಆಡ್ತಾರಾ ಅನ್ನೋದೆ ಆರ್​​ಸಿಬಿ ತಂಡ ಹಾಗೂ ಫ್ಯಾನ್ಸ್​ ಪಾಲಿಗೆ ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೊಸ ಬಾಂಬ್​ ಹಾಕಿದ ಗವಾಸ್ಕರ್​, RCB ಫ್ಯಾನ್ಸ್​​​ಗೆ ಬೇಸರ.. ಕೊಹ್ಲಿ IPL ಆಡೋದು ಡೌಟ್..! ​

https://newsfirstlive.com/wp-content/uploads/2024/02/Kohli_RCB.jpg

Load More