ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?

author-image
Ganesh
Updated On
ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?
Advertisment
  • ವಿರಾಟ್ ಕೊಹ್ಲಿ ಫಿಟ್‌ನೆಸ್ ದಿನಚರಿಗೂ ಹೆಸರುವಾಸಿ
  • ಕೊಹ್ಲಿ ತಿನ್ನುವ ಚಾಕೊಲೇಟ್​ನ ವಿಶೇಷತೆ ಏನು ಗೊತ್ತಾ?
  • ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ

ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಆಟವೊಂದೇ ಅಲ್ಲ, ಫಿಟ್‌ನೆಸ್ ದಿನಚರಿಗೂ ಹೆಸರುವಾಸಿ. ಪಂದ್ಯದ ಸಮಯದಲ್ಲಿ ಕೊಹ್ಲಿ ಆಗಾಗ ಚಾಕೊಲೇಟ್ ತಿನ್ನುತ್ತಿರೋದನ್ನು ನೀವು ಗಮನಿಸಬಹುದು..

ಯಾವ ಚಾಕೊಲೇಟ್ ತಿನ್ನುತ್ತಾರೆ..?

ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಜೆಲ್ಲಿ ರೂಪದಲ್ಲಿರುತ್ತದೆ. ಹೆಚ್ಚಾಗಿದೆ ಅವರು Energy chocolate bar ತಿನ್ನುತ್ತಾರೆ.. ಇದರಿಂದ ಅವರಿಗೆ ತುಂಬಾ ಲಾಭವಾಗುತ್ತದೆ. ಕೊಹ್ಲಿಯ ಈ ಚಾಕೊಲೇಟ್ ಕಂಪನಿ ಲಂಡನ್​​​ ಮೂಲದ್ದಾಗಿದೆ. ಈ ಚಾಕೊಲೇಟ್ ಆರು ಪ್ಯಾಕ್‌ಗಳಲ್ಲಿ ಬರುತ್ತದೆ. ಭಾರತದಲ್ಲಿ ಅದರ ಬೆಲೆ 5000 ರೂಪಾಯಿ. ಕೊಹ್ಲಿ ಒಮ್ಮೆ ಐಪಿಎಲ್​ನಲ್ಲಿ ಚಾಕೊಲೇಟ್ ತಿನ್ನುತ್ತಿರೋದನ್ನು ನೋಡಲಾಗಿತ್ತು.

ಇದನ್ನೂ ಓದಿ: ಇನ್ಮೇಲೆ ಈ ನಟಿಯರದ್ದೇ ದರ್ಬಾರ್; ಮಹಾನಟಿ ಸೀಸನ್​ 2ಗೆ ಯಾರೆಲ್ಲಾ ಆಯ್ಕೆ?

publive-image

ಅದರ ವಿಡಿಯೋ ತುಂಬಾ ವೈರಲ್ ಆಗಿತ್ತು. ಪಂದ್ಯದ ಸಮಯದಲ್ಲಿ ಕೊಹ್ಲಿ ಏನು ತಿನ್ನುತ್ತಿದ್ದಾರೆ ಅಂತಾ ಅನೇಕರು ಪ್ರಶ್ನೆಗಳನ್ನು ಕೇಳಿದ್ದರು. ಈ ಚಾಕೊಲೇಟ್​ನ ವಿಶೇಷತೆ ಏನೆಂದರೆ ಇದರಲ್ಲಿ ಕಾರ್ಬೋಹೈಡ್ರೇಟ್​ಗಳು ಮತ್ತು ಕೆಫೀನ್ ಇರುತ್ತವೆ. ಇದು ದೀರ್ಘ ಚಟುವಟಿಕೆಯ ನಂತರ ದೇಹದ ಆಯಾಸ ನಿವಾರಿಸುತ್ತದೆ ಎಂದು ಹೇಳಲಾಗಿದೆ..

publive-image

ಪಂದ್ಯದ ಸಮಯದಲ್ಲಿ ಸುಸ್ತು ಆದಾಗಲೆಲ್ಲ ಚಾಕೊಲೇಟ್ ತಿನ್ನುತ್ತಾರೆ. ಇದರಿಂದ ಅವರಿಗೆ ಬೇಗ ಚೇತರಿಸಿಕೊಳ್ಳಲು ಸಹಾಯ ಆಗುತ್ತದೆ. ಮಾಹಿತಿ ಪ್ರಕಾರ, ಈ ಚಾಕೊಲೇಟ್ 100 ಗ್ರಾಂ ತೂಕ ಹೊಂದಿದೆ. ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಲಭ್ಯವಿದೆ. ಕೆಲವರು ಇದನ್ನ ಒಂದು ರೀತಿಯ ಔಷಧ ಎಂದು ಹೇಳುತ್ತಾರೆ. ಹಿಂದೊಮ್ಮೆ ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿ ಡಾರ್ಕ್ ಚಾಕೊಲೇಟ್ ಇಷ್ಟಪಡುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಮಹಾ ಮಳೆಗೆ ಮನೆ ಕುಸಿತ.. ಸ್ಥಳದಲ್ಲೇ ಪ್ರಾಣಬಿಟ್ಟ ಮೊಮ್ಮಗ, ಅಜ್ಜಿ ಸ್ಥಿತಿ ಗಂಭೀರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment