/newsfirstlive-kannada/media/post_attachments/wp-content/uploads/2025/05/KOHLI-17.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯ ಮಳೆಯಿಂದ ರದ್ದು ಆಯಿತು. ಟಾಸ್ ಹಾಕುವುದಕ್ಕೂ ಅವಕಾಶ ಕೊಡದ ವರುಣರಾಯ ಪಂದ್ಯವನ್ನು ಆಡದಂತೆ ಮಾಡಿದ. ಈ ಪಂದ್ಯ ನೋಡಲೆಂದು ಬಂದಿದ್ದ ಸಾವಿರಾರು ಅಭಿಮಾನಿಗಳನ್ನು ನೋಡಿ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಭಾರತದ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಅಂತಿಮ ಪಂದ್ಯ ಇಲ್ಲದೇ ಟೆಸ್ಟ್ಗೆ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಇದರಿಂದ ಕೊಹ್ಲಿಗೆ ಗೌರವಯುತವಾದ ವಿದಾಯ ಸಿಕ್ಕಿರಲಿಲ್ಲ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಗೌರವ ಸೂಚಿಸಬೇಕು ಎಂದು ಆರ್ಸಿಬಿ ಅಭಿಮಾನಿಗಳು ಪಂದ್ಯಕ್ಕೂ ಮೊದಲೇ ಪ್ಲಾನ್ ಮಾಡಿ ವೈಟ್ ಜೆರ್ಸಿ ಧರಿಸಿಕೊಂಡು ಬಂದಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸೂಚಿಸಲು ಬಿಳಿ ಜೆರ್ಸಿ ಧರಿಸಿಕೊಂಡು ಆಗಮಿಸಿದ್ದರು. ಟೆಸ್ಟ್ನಲ್ಲೂ ಕೊಹ್ಲಿಯನ್ನು ನಾವು ಎಷ್ಟು ಅಭಿಮಾನದಿಂದ ಕಾಣುತ್ತಿದ್ದೇವು ಎನ್ನುವುದನ್ನು ಫ್ಯಾನ್ಸ್ ಸಾರಿ ಹೇಳಿದರು. ಮೈದಾನವೆಲ್ಲ ಶ್ವೇತಮಯ ಆಗಿತ್ತು.
ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಯಿಂದ ಪಾದಯಾತ್ರೆ.. ಕೇದಾರನಾಥ ತಲುಪಿದ 70 ವರ್ಷದ ವೃದ್ಧ
ಎಂ ಚಿನ್ನಸ್ವಾಮಿ ಸ್ಟೇಡಿಯಂ ಯಾವಾಗಲೂ ಆರ್ಸಿಬಿ ಪಂದ್ಯ ಇದ್ದಾಗ ಕೆಂಪು ಬಣ್ಣದಿಂದಲೇ ಕಲವರಿಸುತ್ತಿತ್ತು. ಆದರೆ ವಿರಾಟ್ ಕೊಹ್ಲಿಗೆ ವಿಶೇಷವಾದ ಗೌರವ ಸೂಚಿಸಲೆಂದು ಆರ್ಸಿಬಿ ಅಭಿಮಾನಿಗಳು ಎಲ್ಲ ಬಿಳಿ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದರು. ಯಾವ ಕಡೆ ನೋಡಿದರು ವೈಟ್ ಜೆರ್ಸಿಯೇ ಕಾಣುತ್ತಿತ್ತು. ಇದನ್ನು ಡೆಸ್ಸಿಂಗ್ ರೂಮ್ನಿಂದಲೇ ನೋಡಿದ ವಿರಾಟ್ ಕೊಹ್ಲಿ ಅವರು ಭಾವುಕವಾದಂತೆ ಕಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ