IPL ಟ್ರೋಫಿಗಾಗಿ ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ.. ಕಿಂಗ್ ಕೊಹ್ಲಿ ಭಾವನಾತ್ಮಕ ಪೋಸ್ಟ್!​

author-image
Bheemappa
Updated On
IPL ಟ್ರೋಫಿಗಾಗಿ ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ.. ಕಿಂಗ್ ಕೊಹ್ಲಿ ಭಾವನಾತ್ಮಕ ಪೋಸ್ಟ್!​
Advertisment
  • ಟ್ರೋಫಿ ಕುರಿತು ಭಾವನಾತ್ಮಕವಾಗಿ ಹೇಳಿರುವ ವಿರಾಟ್
  • ಆರ್​ಸಿಬಿ ತಂಡಕ್ಕೆ ವಿರಾಟ್​ ಯಾವಾಗಲು ಬ್ಯಾಟಿಂಗ್ ಬಲ
  • ಫೈನಲ್​ನಲ್ಲಿ 3 ಬೌಂಡರಿಗಳಿಂದ 43 ರನ್​ ಬಾರಿಸಿದ್ದ ಕೊಹ್ಲಿ

ಐಪಿಎಲ್ ಕಪ್ ಆರ್​ಸಿಬಿಯ​ ಕೈ ಸೇರಿದೆ, 18 ವರ್ಷಗಳ ಕಾಯುವಿಕೆಗೆ ಕೊನೆಯಾಗಿದೆ. ಕರ್ನಾಟಕದ ಹಳ್ಳಿಗಳಿಂದ ದೆಹಲಿವರೆಗೆ ವಿರಾಟ್​ ಪರ್ವ ಮಾರ್ದನಿಸಿದೆ. ಅಭಿಮಾನದ ಸಂಭ್ರಮಕ್ಕೆ ಕಿಂಗ್​ ಕೊಹ್ಲಿ ಕಣ್ಣೀರು ಹಾಕಿದ್ದು ಎಲ್ಲರನ್ನೂ ಭಾವುಕರನ್ನಾಗಿಸಿದೆ. 18 ವರ್ಷಗಳಲ್ಲಿ ಆರ್​ಸಿಬಿಯ ಮೊದಲ ಜಯಭೇರಿ ಬಗ್ಗೆ ವಿರಾಟ್​ ಕೊಹ್ಲಿ ಅವರು ತಮ್ಮ ಇನ್​ಸ್ಟಾದಲ್ಲಿ ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

publive-image

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕನಸನ್ನು ನನಸು ಮಾಡಿದೆ. ಈ ಅತ್ಯದ್ಭುತವಾದ ಸೀಸನ್​ ಅನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಕಳೆದ 2.5 ತಿಂಗಳುಗಳಿಂದ ಈ ಟೂರ್ನಿಯನ್ನು ಎಲ್ಲರೂ ಆನಂದಿಸಿದ್ದೇವೆ. ಸೀಸನ್​ಗಳು ಕಳೆಯುತ್ತ ಬಂದರೂ ಆರ್​ಸಿಬಿ ಅಭಿಮಾನಿಗಳು ನಮ್ಮ ಕೈಬಿಟ್ಟಿರಲಿಲ್ಲ. ಈ ಹಿಂದೆ ಆಗಿರುವಂತ ಟೀಕೆ, ನಿರಾಶೆಗಳಿಗೆ ಈ ಒಂದು ಟ್ರೋಫಿ ಸಾಕು ಎಂದು ವಿರಾಟ್​ ಹೇಳಿದ್ದಾರೆ.

ಮೈದಾನದಲ್ಲಿ ಆಡುವಾಗ ತಂಡದ ಆಟಗಾರರು ಪ್ರತಿ ಹೆಜ್ಜೆ ಹೆಜ್ಜೆಗೂ, ಇಂಚು ಇಂಚಿಗೂ ಶ್ರಮ ಹಾಕಿದ್ದಾರೆ. ಐಪಿಎಲ್ ಟ್ರೋಫಿ ನನ್ನನ್ನು 18 ವರ್ಷಗಳ ಕಾಲ ಕಾಯುವಂತೆ ಮಾಡಿತು. ನಿನ್ನನ್ನು ಮೇಲೆತ್ತಲು ನಾನು ಹಾಗೂ ನನ್ನ ಸ್ನೇಹಿತರು ಇಷ್ಟು ವರ್ಷ ಕಾಯಬೇಕಾಯಿತು. ಆದರೂ ಕೊನೆಗೆ ಕಾದಿದ್ದು ಸಂಪೂರ್ಣವಾಗಿ ಸಾರ್ಥಕವಾಯಿತು. ಲವ್ ಯು ಟ್ರೋಫಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ವಿರಾಟ್​ ಕೊಹ್ಲಿ ಅವರು ತಮ್ಮ ಮನದಾಳವನ್ನು ಬರೆದಿಕೊಂಡಿದ್ದಾರೆ.

ಇದನ್ನೂ ಓದಿ:ಫಿಲ್ ಸಾಲ್ಟ್​ ಅವರ ಗೆಳತಿಗೆ ಗಂಡು ಮಗು ಜನಿಸಿತಾ.. SALT Jr ರೆಡ್​ ಟೀಶರ್ಟ್ ಏನಿದು..? ​

publive-image

ಆರ್​ಸಿಬಿ ವಿಜಯ ಸಾಧಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ, ಸಿನಿಮಾ ನಟ, ನಟಿಯರು, ನಿರ್ದೇಶಕರು, ಉದ್ಯಮಿಗಳು ಸೇರಿದಂತೆ ಅಭಿಮಾನಿಗಳು ಕೂಡ ಆರ್​ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment