ಟೀಂ ಇಂಡಿಯಾದ ನಿರೀಕ್ಷೆಯ ಭಾರ ಈ ಆಟಗಾರನ ಮೇಲೆ.. ಬಿಗ್ ಪ್ಲೇಯರ್, ಬಿಗ್ ಡ್ರೀಮ್​​..!

author-image
Ganesh
Updated On
ಬೂಮ್ರಾ ಯಶಸ್ಸಿನ ಹಿಂದೆ ಇರೋದು ರೋಹಿತ್ ಶರ್ಮಾನಾ, ವಿರಾಟ್​ ಕೊಹ್ಲಿನಾ..?
Advertisment
  • ಪಟ್ಟದ ಮೇಲೆ ಕಣ್ಣು.. ಚರಿತ್ರೆ ಸೃಷ್ಟಿಗೆ ಕಿಂಗ್ ರೆಡಿ..!
  • ಎದುರಾಳಿಗಳಿಗೆ ನಿದ್ದೆಯಲ್ಲೂ ಕಾಡ್ತಿದೆ ಕೊಹ್ಲಿ ಭಯ
  • ವಿರಾಟ್​​ ಕೊಹ್ಲಿ ಕಿಂಗ್ ಆಫ್​ ಐಸಿಸಿ ಈವೆಂಟ್ಸ್​..!

ವಿಶ್ವ ಕ್ರಿಕೆಟ್​ಗೆ ವಿರಾಟ್​ ಕೊಹ್ಲಿಯೇ ಕಿಂಗ್​. ಸಣ್ಣ ಪುಟ್ಟ ಸೀರಿಸ್​ ಬಿಟ್​ ಬಿಡಿ. ಪ್ರತಿಷ್ಟೆಯ ಐಸಿಸಿ ಬಿಗ್ ಟೂರ್ನಮೆಂಟ್​ಗಳಿಗೂ ವಿರಾಟ್ ಕೊಹ್ಲಿಯೇ ಸಾಮ್ರಾಟ. ಬಿಗ್​ ಟೂರ್ನಿಗಳು ಅಂತಾ ಬಂದ್ರೆ ಎಲ್ಲಾ ಆಟಗಾರರು ಪ್ರೆಶರ್​ಗೆ ಒಳಗಾಗ್ತಾರೆ. ಕೊಹ್ಲಿ ಒತ್ತಡಕ್ಕೆ ಒಳಗಾಗೋ ಸೀನೆ ಇಲ್ಲ. ಬ್ಯಾಟ್​ ಹಿಡಿದು ಬಂದ್ರೆ ಎದುರಾಳಿಗಳ ಧ್ವಂಸ ಪಕ್ಕಾ.

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ದುಬೈನಲ್ಲಿ ಸಮರಾಭ್ಯಾಸ ನಡೆಸ್ತಿರುವ ಟೀಮ್ ಇಂಡಿಯಾ, 12 ವರ್ಷದ ಬಳಿಕ ಚಾಂಪಿಯನ್ಸ್​ ಟ್ರೋಫಿ ಕಿರೀಟಕ್ಕೆ ಮುತ್ತಿಡುವ ಕನಸು ಕಾಣ್ತಿದೆ. ಮಿನಿ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ ಆಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾಗೆ ಕಿಂಗ್ ವಿರಾಟ್​ ಕೊಹ್ಲಿಯೇ ಆಧಾರ.

ಇದನ್ನೂ ಓದಿ: ಹಾಲಿನ ದರ ಮತ್ತಷ್ಟು ಏರಿಕೆ ಆತಂಕ; KMF ಎಷ್ಟು ರೂಪಾಯಿ ಹೆಚ್ಚಿಸಲು ಹೊರಟಿದೆ ಗೊತ್ತಾ?

publive-image

ಬಿಗ್ ಡ್ರೀಮ್​​..!

ನಾಳೆಯಿಂದ ಮಿನಿ ಕ್ರಿಕೆಟ್​ ಫೆಸ್ಟಿವಲ್​​​ ಶುರುವಾಗಲಿದ್ದು, ಈ ಬಿಗ್ ಟೂರ್ನಮೆಂಟ್​ಗೆ ಬಿಗ್ ಪ್ಲೇಯರ್ ವಿರಾಟ್​, ಬಿಗ್ ಡ್ರೀಮ್​ನೊಂದಿಗೆ ಸಜ್ಜಾಗಿ ನಿಂತಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಪಟ್ಟದ ಮೇಲೆ ಕಣ್ಣಿಟ್ಟಿರುವ ವಿರಾಟ್​, ಹೊಸ ಚರಿತ್ರೆ ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ.ಎದುರಾಳಿ ತಂಡಗಳಿಗೆ ವಿರಾಟ್ ಕೊಹ್ಲಿಯದ್ದೇ ಭಯ ಕಾಡ್ತಿದೆ. ಈ ಭಯದ ಹಿಂದೆ ಪ್ರಮುಖ ಕಾರಣ ಅಡಗಿದೆ.

ಕೊಹ್ಲಿ ಕಿಂಗ್ ಆಫ್​ ಐಸಿಸಿ ಈವೆಂಟ್ಸ್​

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ.. ಈತನ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿಯಾಗಿವೆ. ಇದೇ ಕಾರಣಕ್ಕೆ ವಿಶ್ವ ಕ್ರಿಕೆಟ್​ನಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಐಸಿಸಿ ಈವೆಂಟ್ಸ್​ಗಳ ವಿಚಾರಕ್ಕೆ ಬಂದ್ರೆ ಕೊಹ್ಲಿಯೇ ಸಾಮ್ರಾಟ. ಐಸಿಸಿ ಟೂರ್ನಿಗಳಲ್ಲಿ ವಿರಾಟ್, ದರ್ಬಾರ್​ ನೆಕ್ಸ್ಟ್​ ಲೆವೆಲ್​ನಲ್ಲಿರುತ್ತೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​​​​​​​​​.. ಈ ಅಂಕಿಅಂಶಗಳು.

ಏಕದಿನ ವಿಶ್ವಕಪ್​ಗಳಲ್ಲಿ ಕೊಹ್ಲಿ ಆಟ

ಏಕದಿನ ವಿಶ್ವಕಪ್​ಗಳಲ್ಲಿ ಆಡಿದ 37 ಇನ್ನಿಂಗ್ಸ್​ಗಳಿಂದ 59,83ರ ಬ್ಯಾಟಿಂಗ್ ಅವರೇಜ್​ನಲ್ಲಿ 1795 ರನ್ ಗಳಿಸಿರುವ ವಿರಾಟ್, 12 ಅರ್ಧಶತಕ, 5 ಶತಕ ದಾಖಲಿಸಿದ್ದಾರೆ. ಟಿ20 ವಿಶ್ವಕಪ್​ಗಳಲ್ಲಿ 33 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್, 58.72ರ ಬ್ಯಾಟಿಂಗ್​ ಅವರೇಜ್​ನಲ್ಲಿ 1292 ರನ್ ಗಳಿಸಿದ್ದಾರೆ. ಈ ಪೈಕಿ 15 ಅರ್ಧಶತಕ ದಾಖಲಾಗಿವೆ.

ಇದನ್ನೂ ಓದಿ: ಕೊಹ್ಲಿ ಮತ್ತು ಇಂಡಿಯನ್ಸ್​ ಅಪ್ಪಿಕೊಳ್ಳಬೇಡಿ -ಪಾಕ್ ಆಟಗಾರರಿಗೆ ಫ್ಯಾನ್ಸ್ ವಾರ್ನಿಂಗ್​..!

publive-image

ಈ ಅಂಕಿಅಂಶಗಳು ಕೊಹ್ಲಿ ಬಿಗ್ ಟೂರ್ನಮೆಂಟ್​ನ ಕಿಂಗ್ ಆಗಿ ಅನ್ನೋದನ್ನ ಫ್ರೂವ್ ಮಾಡ್ತಿದೆ. ಕೊಹ್ಲಿಯ ಈ ಬ್ಯಾಟಿಂಗ್ ದರ್ಬಾರ್​ ಜಸ್ಟ್​ ಏಕದಿನ, ಟಿ20 ವಿಶ್ವಕಪ್​​ಗಳಿಗೆ ಮಾತ್ರವೇ ಸಿಮೀತವಾಗಿಲ್ಲ. ಐಸಿಸಿ ಚಾಂಪಿಯನ್ಸ್​ ಟ್ರೋಫಿಗಳಲ್ಲೂ ವಿರಾಟ್, ವೀರಾವೇಶ ಜೋರಾಗಿದೆ.

ಚಾಂಪಿಯನ್ಸ್​ ಟ್ರೋಫಿಯಲ್ಲಿ ಕೊಹ್ಲಿ

ಐಸಿಸಿ ಚಾಂಪಿಯನ್ಸ್​ ಟ್ರೋಫಿಯ 12 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್, ಬರೋಬ್ಬರಿ 88.16ರ ಬ್ಯಾಟಿಂಗ್​ ಅವರೇಜ್​ನಲ್ಲಿ 529 ರನ್ ಗಳಿಸಿದ್ದಾರೆ. ಈ ಪೈಕಿ 5 ಅರ್ಧಶತಕ ಸಿಡಿಸಿದ್ದಾರೆ. ಏಕದಿನ, ಟಿ20 ವಿಶ್ವಕಪ್ ಸೇರಿದಂತೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ, 50 ಪ್ಲಸ್ ಬ್ಯಾಟಿಂಗ್ ಅವರೇಜ್​ ಹೊಂದಿದ್ದಾರೆ. ಈ ಬ್ಯಾಟಿಂಗ್ ಅವರೇಜ್ ಜಸ್ಟ್​ ಅಂಕಿಅಂಶಗಳನ್ನಷ್ಟೇ ಹೇಳ್ತಿಲ್ಲ. ಐಸಿಸಿಯ ಬಿಗ್ ಈವೆಂಟ್ಸ್​ನಲ್ಲಿ ವಿರಾಟ್, ಎಂಥಹ ಬಿಗ್ ಪ್ಲೇಯರ್ ಅನ್ನೋದರ ಸಂಕೇತ ನೀಡ್ತಿವೆ.

ಐಸಿಸಿ ಈವೆಂಟ್ಸ್​ ಕಿಂಗ್ ಕೊಹ್ಲಿ ಮೇಲಿದೆ ನಿರೀಕ್ಷೆಯ ಭಾರ..!

ಪ್ರತಿ ಐಸಿಸಿ ಈವೆಂಟ್ಸ್​ನಲ್ಲಿ ರನ್ ಕೊಳ್ಳೆ ಹೊಡೆದಿರುವ ವಿರಾಟ್, ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಇಂಗ್ಲೆಂಡ್​ ವಿರುದ್ಧ ಅರ್ಧಶತಕ ಸಿಡಿಸಿ ಫಾರ್ಮ್​ ಕಂಡುಕೊಂಡಿದ್ದಾರೆ. ಇದು ಸಹಜವಾಗೇ ಕೊಹ್ಲಿ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಬಿಗ್ ಈವೆಂಟ್ಸ್​ನಲ್ಲಿ ಅಬ್ಬರಿಸಿರುವ ವಿರಾಟ್, ಕೊನೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ವಿಧ್ವಂಸ ಸೃಷ್ಟಿಸುವ ಭರವಸೆ ಫ್ಯಾನ್ಸ್​ಗೆ ಇದ್ದೇ ಇದೆ. ಐಸಿಸಿ ಟೂರ್ನಿಗಳಲ್ಲಿ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿರುವ ವಿರಾಟ್​, ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಮತ್ತಷ್ಟು ಜೋರಾಗಿ ಬ್ಯಾಟ್ ಝಳಪಿಸಲಿ. ಟೀಮ್ ಇಂಡಿಯಾಗೆ ಚಾಂಪಿಯನ್ಸ್​ ಟ್ರೋಫಿ ಕಿರೀಟ ತಂದುಕೊಡಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿ; ಎದುರಾಳಿಗಳಿಗೆ ಬಿಗ್ ಮೆಸೇಜ್ ಕೊಟ್ಟ ಟೀಂ ಇಂಡಿಯಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment