/newsfirstlive-kannada/media/post_attachments/wp-content/uploads/2024/12/ADILED-KOHLI-1.jpg)
ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ, ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಅದಾಗಲೇ ಅಡಿಲೇಡ್ ಟೆಸ್ಟ್ ಪಂದ್ಯದ ಬಗ್ಗೆ, ಭಾರೀ ಚರ್ಚೆ ನಡೆಸಲಾಗ್ತಿದೆ. ಒಂದೆಡೆ ಟೆಸ್ಟ್ ಗೆಲ್ಲೇಬೇಕು ಅಂತ ಟೀಮ್ ಇಂಡಿಯಾ ಪಣತೊಟ್ಟಿದೆ. ಮತ್ತೊಂದೆಡೆ ಅಡಿಲೇಡ್​ 'ಕಿಂಗ್' ಕೊಹ್ಲಿ, ದರ್ಬಾರ್ ನಡೆಸೋಕೆ ಕಾತರರಾಗಿದ್ದಾರೆ. ಹಾಗಾಗಿ ಈಗ​​​​​​​​ ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ.
ಬೆಟ್ಟಗುಡ್ಡಗಳ ನಾಡು, ಕಾಂಗರೂಗಳ ದ್ವೀಪರಾಷ್ಟ್ರ, ಫೆಸ್ಟಿವಲ್ ಸ್ಟೇಟ್ ಅಂತಾನೇ ಕರೆಸಿಕೊಳ್ಳುವ ಸೌತ್ ಆಸ್ಟ್ರೇಲಿಯಾ, ಹೈವೋಲ್ಟೇಜ್ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಅಡಿಲೇಡ್ ಓವಲ್ ಮೈದಾನ, ಎರಡು ಬಲಿಷ್ಟ ತಂಡಗಳ ಜಿದ್ದಾಜಿದ್ದಿನ ಫೈಟ್​​ಗೆ ವೇದಿಕೆಯಾಗಿದೆ. ಕೇವಲ ತಂಡಗಳಿಗಷ್ಟೇ ಅಲ್ಲ..! ಆಟಗಾರರಿಗೂ ಈ ಪಂದ್ಯ ಪ್ರತಿಷ್ಠೆಯ ಕದನ.
ಅದರಲ್ಲೂ ಅಡಿಲೇಡ್​​​ ಕಿಂಗ್ ಅಂತಾನೇ ಕರೆಸಿಕೊಳ್ಳುವ ವಿರಾಟ್​​ ಕೊಹ್ಲಿಗೆ, ಈ ಪಂದ್ಯ ಅತ್ಯಂತ ಮಹತ್ವ. ಯಾಕಂದ್ರೆ ಕೊಹ್ಲಿ ಕೋಟೆ ಅಡಿಲೇಡ್​ನಲ್ಲಿ, ದರ್ಬಾರ್ ನಡೆಸೋಕೆ ಕಾತರರಾಗಿದ್ದಾರೆ. ದಿಗ್ಗಜರ ದಾಖಲೆಗಳನ್ನ ಬ್ರೇಕ್ ಮಾಡಲು, ಬ್ಯಾಟ್ ಬೀಸಲಿದ್ದಾರೆ.
/newsfirstlive-kannada/media/post_attachments/wp-content/uploads/2023/08/Sachin-Tendulkar-1-1.jpg)
1 ಶತಕ, ಸಚಿನ್ ತೆಂಡುಲ್ಕರ್ ದಾಖಲೆ ಬ್ರೇಕ್..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್, ಇದುವರೆಗೂ ಅತಿ ಹೆಚ್ಚು ಶತಕಗಳನ್ನ ಸಿಡಿಸಿರುವ ಆಟಗಾರ. 65 ಇನ್ನಿಂಗ್ಸ್​ಗಳಲ್ಲಿ 9 ಶತಕಗಳನ್ನ ಸಿಡಿಸಿರುವ ತೆಂಡುಲ್ಕರ್, ಈ ಸಾಧನೆ ಮಾಡಿರುವ ಮೊದಲ ಆಟಗಾರ. ಇದೀಗ ವಿರಾಟ್, ಆ ದಾಖಲೆಯನ್ನ ಬ್ರೇಕ್ ಮಾಡಲಿದ್ದಾರೆ. ಇನ್ನೊಂದು ಶತಕ ಸಿಡಿಸಿದ್ರೆ ಕೊಹ್ಲಿ, 10 ಶತಕಗಳನ್ನ ಸಿಡಿಸಿದಂತಾಗುತ್ತದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ, ಹೊಸ ದಾಖಲೆ ನಿರ್ಮಿಸಲಿದ್ದಾರೆ.
/newsfirstlive-kannada/media/post_attachments/wp-content/uploads/2024/12/DON-BRADMAN.jpg)
ಡಾನ್ ಬ್ರಾಡ್ಮನ್​ಗೆ ಸಮಾನಾಗಿ ನಿಲ್ತಾರಾ ಕೊಹ್ಲಿ..?
ಇಂಗ್ಲೆಂಡ್​​ನಲ್ಲಿ ದಿಗ್ಗಜ ಸರ್.ಡಾನ್ ಬ್ರಾಡ್ಮನ್, 11 ಶತಕಗಳನ್ನ ಸಿಡಿಸಿರುವ ಏಕೈಕ ಬ್ಯಾಟ್ಸ್​ಮನ್. ಅಂದ್ರೆ ಪ್ರವಾಸಿ ತಂಡದ ಆಟಗಾರ ಮಾಡಿರುವ ದಾಖಲೆ ಇದು. ಇನ್ನು ಕಿಂಗ್ ಕೊಹ್ಲಿ, ಆಸ್ಟ್ರೇಲಿಯಾದ ನೆಲದಲ್ಲೇ ಒಟ್ಟು 10 ಶತಕಗಳನ್ನ ಸಿಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರವಾಸಿ ಆಟಗಾರ ಸಿಡಿಸಿರುವ ಅತಿ ಹೆಚ್ಚು ಶತಕಗಳ ದಾಖಲೆ, ವಿರಾಟ್ ಹೆಸರಿನಲ್ಲಿದೆ. ಇದೀಗ ಕೊಹ್ಲಿ ಅಡಿಲೇಡ್​​ನಲ್ಲಾದ್ರೂ ಶತಕ ಸಿಡಿಸಿದ್ರೆ, ಬ್ರಾಡ್ಮನ್​​ರ 76 ವರ್ಷಗಳ ದಾಖಲೆಯನ್ನ ಸರಿಗಟ್ಟಲಿದ್ದಾರೆ.
/newsfirstlive-kannada/media/post_attachments/wp-content/uploads/2024/10/Virat-Kohli-Fifty.jpg)
ಆಸ್ಟ್ರೇಲಿಯನ್ನರನ್ನೇ ಸೈಡ್ ಹೊಡೆದ ವಿರಾಟ್..!
ಕೊಹ್ಲಿಯನ್ನ ಪದೇ ಪದೇ ಕಿಂಗ್ ಅನ್ನೋದಕ್ಕೆ ಕಾರಣವಿದೆ. ಯಾಕಂದ್ರೆ? ಅಡಿಲೇಡ್ ಓವಲ್​ ಮೈದಾನದಲ್ಲಿ ಕೊಹ್ಲಿ ಗಳಿಸಿರುವಷ್ಟು ರನ್, ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳೇ ಗಳಿಸಿಲ್ಲ.. ವಿರಾಟ್ 957 ರನ್​ಗಳಿಸಿದ್ರೆ, ಸ್ಟೀವ್ ಸ್ಮಿತ್, ಗ್ರೇಗ್ ಚಾಪೆಲ್, ಶೇನ್ ವಾಟ್ಸನ್, ಌಡಂ ಗಿಲ್​ಕ್ರಿಸ್ಟ್ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:‘ಬೂಮ್ರಾ ಜೊತೆ ಆಡಿರೋದನ್ನ ಮೊಮ್ಮಕ್ಕಳಿಗೆ ಹೇಳ್ತೀನಿ’ ಎಂದಿದ್ದೇಕೆ ಟ್ರಾವಿಸ್ ಹೆಡ್..?
ಕಾಂಗರೂಗಳ ಸಾಮ್ರಾಜ್ಯದಲ್ಲಿ ಕೊಹ್ಲಿ ದರ್ಬಾರ್..!
ವಿರಾಟ್ ಕೊಹ್ಲಿ, ಅಡಿಲೇಡ್​​ನಲ್ಲಿ ಯಾವ ಮಟ್ಟಕ್ಕೆ ದರ್ಬಾರ್ ನಡೆಸಿದ್ದಾರೆ ಅಂದ್ರೆ, ಯಾವ ಪ್ರವಾಸಿ ಬ್ಯಾಟ್ಸ್​ಮನ್ ಸಹ ಕೊಹ್ಲಿ ಹತ್ತಿರಕ್ಕೆ ಬರೊಲ್ಲ..! ಮೈಕೆಲ್ ಕ್ಲಾರ್ಕ್, ರಿಕಿ ಪಾಂಟಿಂಗ್ ನಂತರ, ಈ ಮೈದಾನದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನ ಸಿಡಿಸಿರುವ ವಿಶ್ವದ ಗ್ರೇಟೆಸ್ಟ್ ಬ್ಯಾಟ್ಸ್​ಮನ್. ಹಾಗಾಗಿ ಇದು ಕೊಹ್ಲಿ ಸಾಮ್ರಾಜ್ಯ ಅಂದ್ರೆ ತಪ್ಪಾಗೋದಿಲ್ಲ.
/newsfirstlive-kannada/media/post_attachments/wp-content/uploads/2024/11/VIRAT-KOHLI-3.jpg)
ಅಡಿಲೇಡ್​​ 'ಕಿಂಗ್' ನಾನೇ ಎಂದ ಕೊಹ್ಲಿ..!
ಕಿಂಗ್ ಕೊಹ್ಲಿಯ ಫೇವರಿಟ್ ಗ್ರೌಂಡ್ ಯಾವುದು? ಕೊಹ್ಲಿ ಯಾವ ಪಿಚ್​ನಲ್ಲಿ ಬ್ಯಾಟಿಂಗ್ ಮಾಡೋಕೆ ಹೆಚ್ಚು ಇಷ್ಟ ಪಡ್ತಾರೆ? ಕೊಹ್ಲಿಗೆ ಸಕ್ಸಸ್ ತಂದುಕೊಟ್ಟಿರೋ ಪಿಚ್ ಯಾವುದು? ಈ ಪ್ರಶ್ನೆಗೆ ಸಾಕಷ್ಟು ಬಾರಿ ಕೊಹ್ಲಿನೇ ಉತ್ತರಿಸಿದ್ದಾರೆ. ಅಡಿಲೇಡ್ ನನ್ನ ನೆಚ್ಚಿನ ಮೈದಾನ, ಅಲ್ಲಿ ಆಡೋದು, ರನ್​​ಗಳಿಸೋದು ನನಗೆ ತುಂಬಾ ಸಲೀಸು ಅಂತ ಹೇಳಿದ್ದಾರೆ. ಅಡಿಲೇಡ್​​ಗೆ ನಾನೇ ಕಿಂಗ್ ಅನ್ನೋದನ್ನೂ ಆಡಿ ತೋರಿಸಿಕೊಟ್ಟಿದ್ದಾರೆ.
ಅಡಿಲೇಡ್​​ನಲ್ಲಿ ಆಡಿರೋ 4 ಟೆಸ್ಟ್ ಪಂದ್ಯಗಳಲ್ಲಿ, ವಿರಾಟ್ ವೀರಾವೇಶ ತೋರಿಸಿದ್ದಾರೆ. ಆದ್ರೆ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್​ ಪಂದ್ಯದಲ್ಲಿ, ಕೊಹ್ಲಿ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಪಾಸಾಗ್ತಾರಾ ವಿರಾಟ್ ಅನ್ನೋದು ಇನ್ನೂ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us