/newsfirstlive-kannada/media/post_attachments/wp-content/uploads/2025/02/SACHIN-RECORD.jpg)
ಸಚಿನ್ ತೆಂಡೂಲ್ಕರ್ ಅಂದ್ರೆ ದಾಖಲೆಗಳಿಗೆ ಮತ್ತೊಂದು ಹೆಸರು. ಕ್ರಿಕೆಟ್ ಜಗತ್ತಿನಲ್ಲಿ ಹಲವು ಮೈಲಿಗಲ್ಲುಗಳನ್ನು ನೆಟ್ಟು ಕ್ರಿಕೆಟ್ ಅಂಗಳ ತೊರೆದು ಹೋದ ದಿಗ್ಗಜ ಆಟಗಾರ ಸಚಿನ್. ಅವರ ಹಿಂದೆಯೇ ಅಂತಹುದೇ ಒಂದು ದಾಖಲೆಗಳ ಸರದಾರನಾಗಿ ಕ್ರಿಕೆಟ್ ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದು ವಿರಾಟ್ ಕೊಹ್ಲಿ. ಸಚಿನ್​ರಂತಹುದೇ ಸಿಡಿಲಬ್ಬರದ ಬ್ಯಾಟಿಂಗ್​. ಸಚಿನ್ ದಾಖಲೆಗಳನ್ನು ಮುರಿಯಬಲ್ಲ ಶಕ್ತಿ ಇರುವುದು ಇವರೊಬ್ಬರಿಗೆ ಎಂದು ಜಗತ್ತು ಈ ಹಿಂದೆಯೇ ಭವಿಷ್ಯ ನುಡಿದಿತ್ತು. ಅಂದಿನ ಮಾತುಗಳು ಒಂದೊಂದೇ ನಿಜ ಮಾಡುತ್ತಾ ಬಂದಿದ್ದಾರೆ ವಿರಾಟ್​​. ಈಗ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆಯ ಮುರಿಯುವ ಉತ್ಸಾಹದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. 36 ವರ್ಷದ ಈ ಕ್ರಿಕೆಟರ್ ಸಚಿನ್ ಅತ್ಯಂತ ವೇಗವಾಗಿ 14 ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ಪುಡಿಗಟ್ಟಲು ಕಾಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/02/SACHIN-RECORD-1.jpg)
2006ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 100 ರನ್ ಹೊಡೆಯುವುದರ ಮೂಲಕ ಸಚಿನ್ ಅತ್ಯಂತ ವೇಗವಾಗಿ ಏಕದಿನ ಪಂದ್ಯದಲ್ಲಿ 14 ಸಾವಿರ ರನ್ ಕಲೆ ಹಾಕಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಖ್ಯಾತಿಯನ್ನು ಪಡೆದಿದ್ದರು. 350 ಇನ್ನಿಂಗ್ಸ್​ನಲ್ಲಿ ಇಷ್ಟೊಂದು ರನ್ ಗಳಿಸಿದ್ದರು ಸಚಿನ್.
ಇದನ್ನೂ ಓದಿ: ಅಭಿಷೇಕ್ ಶರ್ಮಾ ಲೈಫಲ್ಲಿ ಹೊಸ ಹುಡುಗಿ ಎಂಟ್ರಿ.. ಯಾರಿವಳು ಸುಂದರಿ..?
ಈಗ ಕೊಹ್ಲಿ 283 ಇನ್ನಿಂಗ್ಸ್​ಗಳಲ್ಲಿ ಸುಮಾರು 13,906 ರನ್ ಕಲೆ ಹಾಕಿದ್ದಾರೆ. ಸಚಿನ್ ದಾಖಲೆ ಸರಿಗಟ್ಟಲು ಅವರಿಗೆ ಬೇಕಾಗಿದ್ದು ಕೇವಲ 94 ರನ್. 283 ಏಕದಿನ ಪಂದ್ಯಗಳಲ್ಲಿ 93.54 ಸ್ಟ್ರೈಕ್​ರೇಟ್​ನಲ್ಲಿ 58.18 ಸರಾರಸರಿಯಲ್ಲಿ ಇಷ್ಟು ರನ್ ಕಲೆ ಹಾಕಿರುವ ಕೊಹ್ಲಿ ಎದುರು ಈಗ ಇಂಗ್ಲೆಂಡ್ ವಿರುದ್ಧ 3 ಏಕ ದಿನ ಪಂದ್ಯಗಳನ್ನಾಡುವ ಅವಕಾಶವಿದೆ. ಈ ಮೂರು ಪಂದ್ಯಗಳಲ್ಲಿ ಸಚಿನ್ ದಾಖಲೆ ಪುಡಿಗಟ್ಟುತ್ತಾರಾ ಎಂಬ ಆಸೆ ಮತ್ತು ಕುತೂಹಲ ಅವರ ಅಭಿಮಾನಿಗಳಲ್ಲಿದೆ.
ಆದ್ರೆ ಕಳೆದ ಕೆಲವು ತಿಂಗಳುಗಳಿಂದ ಕೊಹ್ಲಿ ಫಾರ್ಮ್​ನಲ್ಲಿಲ್ಲ. ಅವರ ಆಟದ ಲಯ ಮೊದಲಿನಂತಿಲ್ಲ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ. ಈ ಹಿಂದೆ ಶ್ರೀಲಂಕಾದೊಂದಿಗೆ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 58 ರನ್​ಗಳು. 24,14 ಮತ್ತು 20 ರನ್​​ಗಳನ್ನಷ್ಟೇ ಗಳಿಸಲು ಶಕ್ತರಾದರು. ವಿಶ್ವಕಪ್ ಫೈನಲ್ ಬಳಿಕ ಕೊಹ್ಲಿ ಆಡಿದ್ದು ಕೇವಲ ಮೂರೇ ಮೂರು ಏಕದಿನ ಪಂದ್ಯಗಳು.
/newsfirstlive-kannada/media/post_attachments/wp-content/uploads/2025/02/SACHIN-RECORD-2.jpg)
ಇದನ್ನೂ ಓದಿ: ಟೀಮ್​ ಇಂಡಿಯಾದಿಂದಲೇ ಹೊರಬಿದ್ದ ಸ್ಟಾರ್​ ವೇಗಿ ಬುಮ್ರಾ; ಅಸಲಿಗೆ ಆಗಿದ್ದೇನು?
ಕೊಹ್ಲಿ ಫಾರ್ಮ್​​ನಲ್ಲಿಲ್ಲಾ ಅನ್ನೋದು ಒಂದು ಕೊರಗು ಅಲ್ಲವೇ ಅಲ್ಲ. ಫಿನಿಕ್ಸ್​​ನಂತೆ ಎದ್ದು ಬರಬಲ್ಲ ಛಲ ಮತ್ತು ಬಲ ಎರಡು ಅವರಲ್ಲಿದೆ. ಈ ಹಿಂದೆ ಫಾರ್ಮ್ ಕಳೆದು ಹೋಗಿದೆ ಎಂದಾಗಲೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪರ್ತ್​​ನಲ್ಲಿ ಶತಕ ಗಳಿಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಅದೇ ರೀತಿ ಈ ಸಿರೀಸ್​ನಲ್ಲೂ ಕೂಡ ಕೊಹ್ಲಿ ಮರಳಿ ಫಾರ್ಮ್​ಗೆ ಬಂದಲ್ಲಿ ಕ್ರಿಕೆಟ್ ಜಗತ್ತಿನ ದೇವರು ಎಂದು ಕರೆಸಿಕೊಂಡಿರುವ ಸಚಿನ್ ಅವರ ದಾಖಲೆ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us