ಮಹತ್ವದ ದಾಖಲೆ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ.. ಚಾಂಪಿಯನ್ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸ್ತಾರಾ ವಿರಾಟ್?

author-image
Bheemappa
Updated On
ಕಿಂಗ್ ಕೊಹ್ಲಿಗೆ ಇಂದು ಅವಿಸ್ಮರಣೀಯ ಪಂದ್ಯ.. ಹೊಸ ದಾಖಲೆಗಳ ಹೊಸ್ತಿಲಲ್ಲಿ ವಿರಾಟ್​!
Advertisment
  • ಮಾ.9 ರಂದು ನಡೆಯಲಿದೆ IND vs NZ ಫೈನಲ್​ ಪಂದ್ಯ
  • ಈಗಾಗಲೇ ಹಲವಾರು ದಾಖಲೆಗಳನ್ನ ಬರೆದಿರುವ ವಿರಾಟ್
  • ವಿರಾಟ್ ಕೊಹ್ಲಿ ಬ್ರೇಕ್ ಮಾಡುವ ಆ ದಾಖಲೆ ಯಾವುದು?

ಚಾಂಪಿಯನ್ ಟ್ರೋಫಿಯು ಕೊನೆ ಹಂತಕ್ಕೆ ಬಂದಾಗಿದೆ. ಇನ್ನೇನಿದ್ದರೂ ಫೈನಲ್ ಫೈಟ್ ಮಾತ್ರ ಬಾಕಿ ಉಳಿದಿದೆ. ಮಾರ್ಚ್​ 9 ಭಾನುವಾರದಂದು ಟ್ರೋಫಿಗಾಗಿ ನ್ಯೂಜಿಲೆಂಡ್ ಹಾಗೂ ಭಾರತ ತಂಡ ಅಖಾಡಕ್ಕೆ ಧುಮಕಲಿವೆ. ಫೈನಲ್​ಲ್ಲಿ ಯಾವ ಟೀಮ್ ಗೆಲ್ಲುತ್ತೋ ಅದು ಹೊಸ ಇತಿಹಾಸ ಸೃಷ್ಟಿಸಲಿದೆ. ಇದರ ಜೊತೆ ಫೈನಲ್​ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ರನ್ ಗಳಿಸಿದರೆ ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟ್ಸ್​ಮನ್​ ರೆಕಾರ್ಡ್​ ಬ್ರೇಕ್ ಮಾಡಲಿದ್ದಾರೆ.

ಕಿಂಗ್ ಕೊಹ್ಲಿ ಯಾವುದೇ ಕ್ರಿಕೆಟ್ ಪಂದ್ಯವಾಡಲಿ ಅಲ್ಲಿ ಒಂದಲ್ಲ, ಒಂದು ದಾಖಲೆ ಆಗುತ್ತದೆ. ಸದ್ಯ ನಡೆಯುತ್ತಿರುವ 2025ರ ಚಾಂಪಿಯನ್ ಟ್ರೋಫಿಯಲ್ಲಿ ಉತ್ತಮ ಪರ್ಫಾಮೆನ್ಸ್​ನಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 4 ಪಂದ್ಯಗಳಲ್ಲಿ 217 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ, ಒಂದು ಹಾಫ್​ಸೆಂಚುರಿ ಇದೆ. ಮಾರ್ಚ್​ 9 ರಂದು ನಡೆಯುವ ಫೈನಲ್​ನಲ್ಲಿ ಕೇವಲ 46 ರನ್ ಗಳಿಸಿದರೆ, ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್ ದಾಖಲೆಯನ್ನ ಉಡೀಸ್ ಮಾಡಲಿದ್ದಾರೆ.

ಇದನ್ನೂ ಓದಿ:ತುಮಕೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಜೀವ ಕಳೆದುಕೊಂಡ ವಿದ್ಯಾರ್ಥಿನಿ.. ಕಾರಣ?

publive-image

ಚಾಂಪಿಯನ್ ಟ್ರೋಫಿ ಟೂರ್ನಿಗಳಲ್ಲಿ ಕ್ರಿಸ್ ಗೇಲ್ ಅತಿ ಹೆಚ್ಚು ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 17 ಮ್ಯಾಚ್ ಆಡಿರುವ ಕ್ರಿಸ್​ ಗೇಲ್​ 791 ರನ್ ಬಾರಿಸಿದ್ದು 52 ರನ್ ಸರಾಸರಿ ಹೊಂದಿದ್ದಾರೆ. ಅದರಂತೆ ವಿರಾಟ್ ಕೊಹ್ಲಿ ಕೂಡ ಚಾಂಪಿಯನ್ ಟ್ರೋಫಿಯಲ್ಲಿ 16 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 746 ರನ್ ಗಳಿಸಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿ ಫೈನಲ್​ನಲ್ಲಿ 46 ರನ್ ಗಳಿಸಿದರೆ ಗೇಲ್ ಅವರ 791 ರನ್​ಗಿಂತ ಹೆಚ್ಚು ರನ್ ಗಳಿಸಿ ಅಗ್ರಸ್ಥಾನಕ್ಕೆ ಏರಲಿದ್ದಾರೆ.

ವಿರಾಟ್ ಕೊಹ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸಿದರು. ಇದಾದ ಮೇಲೆ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 84 ರನ್​ ಗಳಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಫೈನಲ್​ನಲ್ಲಿ ಕಿವೀಸ್​ ಜೊತೆ ಕಿಂಗ್ ಕೊಹ್ಲಿ ಆರ್ಭಟಿಸಿದ್ರೆ ದಾಖಲೆ ಜೊತೆಗೆ ಟ್ರೋಫಿ ಕೂಡ ಭಾರತಕ್ಕೆ ಒಲಿದು ಬರಲಿದೆ.

ಚಾಂಪಿಯನ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದ ಪ್ಲೇಯರ್ಸ್

  • ಕ್ರಿಸ್ ಗೇಲ್- 17 ಪಂದ್ಯಗಳಿಂದ 791 ರನ್​ಗಳು
  • ವಿರಾಟ್ ಕೊಹ್ಲಿ- 17 ಪಂದ್ಯಗಳಿಂದ 746 ರನ್​ಗಳು
  • ಮಹೇಲ ಜಯವರ್ಧನ- 22 ಪಂದ್ಯಗಳಿಂದ 742 ರನ್​ಗಳು
  • ಶಿಖರ್ ಧವನ್- 10 ಪಂದ್ಯಗಳಿಂದ 701 ರನ್ಸ್
  • ಕುಮಾರ್ ಸಂಗಕ್ಕಾರ- 22 ಪಂದ್ಯಗಳಿಂದ 683 ರನ್​ಗಳು
  • ಸೌರವ್ ಗಂಗೂಲಿ- 13 ಪಂದ್ಯಗಳಿಂದ 665 ರನ್ಸ್
  • ಜಾಕ್ವೆಸ್ ಕಾಲಿಸ್- 17 ಪಂದ್ಯಗಳಿಂದ 653 ರನ್ಸ್
  • ರಾಹುಲ್ ದ್ರಾವಿಡ್- 19 ಪಂದ್ಯಗಳಿಂದ 627 ರನ್​ಗಳು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment