Advertisment

ಅಭ್ಯಾಸ ಕಣದಿಂದಲೇ ಆಸಿಸ್​ಗೆ ವಾರ್ನಿಂಗ್ ಕೊಟ್ಟ ಕಿಂಗ್! ಹೇಗಿದೆ ಸಮರಕಲಿಯ ಸಮರಾಭ್ಯಾಸ?

author-image
Gopal Kulkarni
Updated On
ಅಭ್ಯಾಸ ಕಣದಿಂದಲೇ ಆಸಿಸ್​ಗೆ ವಾರ್ನಿಂಗ್ ಕೊಟ್ಟ ಕಿಂಗ್! ಹೇಗಿದೆ ಸಮರಕಲಿಯ ಸಮರಾಭ್ಯಾಸ?
Advertisment
  • ಅಡಿಲೇಡ್​ ಟೆಸ್ಟ್​ಗೆ ಕಿಂಗ್​ ಕೊಹ್ಲಿಯ ಸಿದ್ಧತೆ ಹೇಗಿದೆ.?
  • ಪಿಂಕ್​ ಬಾಲ್​ ಟೆಸ್ಟ್​​​​ಗೆ ಕಿಂಗ್​ ಕೊಹ್ಲಿ ವಿಶೇಷ ಅಭ್ಯಾಸ​.!
  • ನೆಟ್ಸ್​​​ನಲ್ಲಿ ವಿರಾಟ ರೂಪ ದರ್ಶನ.. ಆಸಿಸ್​ಗೆ ಢವ ಢವ.!

ಇಂಡೋ-ಆಸಿಸ್​​ ಅಡಿಲೇಡ್​ ಟೆಸ್ಟ್​ ಫೈಟ್​ ಆರಂಭಕ್ಕೆ 2 ದಿನ ಮಾತ್ರ ಬಾಕಿ. ಅಡಿಲೇಡ್​ ಅಖಾಡದಲ್ಲಿ ಪಿಂಕ್​ ಬಾಲ್​ ಬ್ಯಾಟಲ್​ಗೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸ್ತಿದೆ. ಕ್ಯಾನ್​ಬೆರಾದಲ್ಲಿ ಅಭ್ಯಾಸ ಪಂದ್ಯವನ್ನೂ ಆಡಿ ಸಮರಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆದ್ರೆ, ವಾರ್ಮ್​ಅಪ್​ ಗೇಮ್​ನಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ, ತನ್ನದೇ ಆದ ಸ್ಟೈಲ್​ನಲ್ಲಿ ಪಿಂಕ್​ ಬಾಲ್​ ಸವಾಲಿಗೆ ಸಜ್ಜಾಗಿದ್ದಾರೆ. ಕೊಹ್ಲಿಯ ಸಿದ್ಧತೆ ಹೇಗಿದೆ.? ಇಲ್ಲಿದೆ ನೋಡಿ ಡಿಟೇಲ್ಸ್​.!

Advertisment

ಪಿಂಕ್​ ಬಾಲ್​ ಟೆಸ್ಟ್​​​​ಗೆ ಕಿಂಗ್​ ಕೊಹ್ಲಿ ವಿಶೇಷ ಅಭ್ಯಾಸ​.!
ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ವೈಫಲ್ಯ ಕಂಡಿದ್ದ ಕೊಹ್ಲಿ, 2ನೇ ಇನ್ನಿಂಗ್ಸ್​ ಸಾಲಿಡ್​ ಕಮ್​ಬ್ಯಾಕ್​ ಮಾಡಿದ್ರು. ಆಸಿಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಜಬರ್ದಸ್ತ್​​ ಫಾರ್ಮ್​​ಗೆ ಮರಳಿರೋ ಕೊಹ್ಲಿ, ಇದೀಗ 2ನೇ ಟೆಸ್ಟ್​ಗೂ ಮುನ್ನ ಸ್ಪೆಷಲ್​ ಪ್ರಾಕ್ಟಿಸ್​ನ ಮೊರೆ ಹೋಗಿದ್ದಾರೆ. ಅಡಿಲೇಡ್​ ಅಭ್ಯಾಸದಲ್ಲಿ ಕಣದಿಂದಲೇ ಆಸಿಸ್​ ವಾರ್ನಿಂಗ್​ ಕೊಟ್ಟಿದ್ದಾರೆ.

publive-image

2 ಗಂಟೆಗಳ ಕಾಲ ನೆಟ್ಸ್​ನಲ್ಲಿ ಸುದೀರ್ಘ ಸಮರಾಭ್ಯಾಸ.!
ಸತತ 2 ಗಂಟೆಗಳ ಕಾಲ ನೆಟ್ಸ್​​ನಲ್ಲಿ ಸುದೀರ್ಘ ಬ್ಯಾಟಿಂಗ್​ ಅಭ್ಯಾಸ ನಡೆಸಿ ಕೊಹ್ಲಿ ಬೆವರಿಳಿಸಿದ್ದಾರೆ. ಕೊಹ್ಲಿಯ ಕಠಿಣ ಅಭ್ಯಾಸಕ್ಕೆ ನೆರವಾಗಲು ಬೌಲಿಂಗ್​ ಮಾಡಿ ಮಾಡಿ ಬೌಲರ್ಸ್​ ಸುಸ್ತು ಹೊಡೆದಿದ್ದಾರೆ. ಫಾಸ್ಟ್​ ಬೌಲಿಂಗ್​ ಮೇಲೆ ಹೆಚ್ಚು ಗಮನವಹಿಸಿದ್ದ ವಿರಾಟ್​​​ ಕೊಹ್ಲಿ, ಟೀಮ್​ ಇಂಡಿಯಾ ಪ್ರಮುಖ​ ಹಾಗೂ ನೆಟ್​ ಬೌಲರ್ಸ್​ಗಳ ಎಸೆತಗಳನ್ನ ಎದುರಿಸಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಎರಡನೇ ಟೆಸ್ಟ್​​ನಲ್ಲಿ ಆಡೋದೇ ಬೇಡ.. ರೊಚ್ಚಿಗೆದ್ದ ಫ್ಯಾನ್ಸ್​..!

Advertisment

ಕೊಹ್ಲಿಯ ಅಭ್ಯಾಸ ಆರಂಭವಾಗಿದ್ದು, ಲೆಫ್ಟ್​ ಸೈಡ್​ ಆರ್ಮ್ ಥ್ರೋಡೌನ್​ ಸ್ಪೆಷಲಿಸ್ಟ್ ನುವಾನ್​ ಸೆನಿವಿರತ್ನೆ ಎಸೆತಗಳನ್ನ ಎದುರಿಸೋ ಮೂಲಕ. ಆಸಿಸ್​​ನ ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ ಎಸೆತಗಳನ್ನ ಸಮರ್ಥವಾಗಿ ಎದುರಿಸಲು ನೆಟ್ಸ್​​ನಲ್ಲಿ ಲೆಫ್ಟ್ ಸೈಡ್​​​ ಆರ್ಮ್​ ​ಥ್ರೋ ಡೌನ್​ ಎಸೆತಗಳನ್ನ ಕೊಹ್ಲಿ ಎದುರಿಸಿದ್ರು.
ಬಳಿಕ ಟೀಮ್​ ಇಂಡಿಯಾ ವೇಗಿ ಹರ್ಷಿತ್​ ರಾಣಾ, ಆಕಾಶ್​​ ದೀಪ್​​ರ ಎಸೆತಗಳಿಗೆ ಅಭ್ಯಾಸ ನಡೆಸಿದ್ರು. ಕೊಹ್ಲಿ ಕಠಿಣ ಅಭ್ಯಾಸ ಇಲ್ಲಿಗೆ ನಿಲ್ಲಲಿಲ್ಲ. ನೆಟ್ಸ್​ನಿಂದ ನಿರ್ಗಮಿಸೋ ಮುನ್ನ ಟೀಮ್​ ಇಂಡಿಯಾ ವೇಗಿ ಜಸ್​​​ಪ್ರಿತ್​ ಬೂಮ್ರಾರ ಎಸೆತಗಳನ್ನ ಕೆಲ ಕಾಲ ಎದುರಿಸಿದ್ರು.

publive-image

ಅಭ್ಯಾಸ ಪಂದ್ಯಕ್ಕೆ ಗೈರು, ನೆಟ್ಸ್​ಗೆ ಹಾಜರು.!
ನೆಟ್ಸ್​​ ನಲ್ಲಿ ಅಭ್ಯಾಸಕ್ಕೆ ವಿರಾಟ್​ ಕೊಹ್ಲಿ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಆಸ್ಟ್ರೇಲಿಯಾ ಪ್ರೈಮ್​ ಮಿನಿಸ್ಟರ್​ ಇಲೆವೆನ್​ ವಿರುದ್ಧದ ವಾರ್ಮ್​ ಅಪ್​ ಪಂದ್ಯಕ್ಕೆ ಕೊಹ್ಲಿ ಗೈರಾಗಿದ್ರು. ಅಭ್ಯಾಸ ಪಂದ್ಯದಿಂದ ಹೊರಗುಳಿದ ಕೊಹ್ಲಿ, ನೆಟ್ಸ್​ಗೆ ಹಾಜಾರಾಗಿದ್ರು. ಲೆಫ್ಟ್​ ಆರ್ಮ್​ ಪೇಸರ್​​ ಯಶ್​​ ದಯಾಳ್​, ಜಸ್​​ಪ್ರೀತ್​ ಬೂಮ್ರಾ ಬೌಲಿಂಗ್​ಗೆ ಅಭ್ಯಾಸ ನಡೆಸಿದ್ರು. ಅಂದೂ ಕೂಡ ಗಂಟೆಗೂ ಹೆಚ್ಚು ಕಾಲ ನಡೆದಿತ್ತು ಕೊಹ್ಲಿಯ ಅಭ್ಯಾಸ.!

ಫಾರ್ಮ್​ಗೆ ಮರಳಿದ್ರೂ ಬ್ಯಾಟಿಂಗ್​ನಲ್ಲಿ ಬದಲಾವಣೆ.!
ಕಲಿಕೆ ವಿಚಾರದಲ್ಲಿ ಕೊಹ್ಲಿಯನ್ನ ಮೀರಿಸೋರಿಲ್ಲ. ತಪ್ಪುಗಳನ್ನ ಆದಷ್ಟು ಬೇಗ ಸರಿಪಡಿಸಿಕೊಂಡಿದ್ದಕ್ಕೆ ಕೊಹ್ಲಿ ಇಂದು ಕಿಂಗ್​ ಕೊಹ್ಲಿ ಆಗಿರೋದು. ಇದೀಗ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ರೂ, ಕೊಹ್ಲಿ ಬ್ಯಾಟಿಂಗ್​ ಸ್ಟಾನ್ಸ್​ನಲ್ಲಿ ಬದಲಾವಣೆ ಮಾಡಿಕೊಂದಿದ್ದಾರೆ. ನೆಟ್ಸ್​ನಲ್ಲಿ ಅಭ್ಯಾಸದ ವೇಳೆ ಕ್ರಿಸ್​ ಬಿಟ್ಟು ಮುಂದೆ ನಿಲ್ತಿರೋ ಕೊಹ್ಲಿಯ ಕಾಲುಗಳು ಸ್ವಲ್ಪ ವೈಡ್​ ಆಗಿವೆ. ಈ ಬದಲಾವಣೆ ಬಾಲ್​ನ ಗಮನಿಸಿ ಶಾಟ್ಸ್​​ ಸೆಲೆಕ್ಷನ್​​ಗೆ ಹೆಚ್ಚು ನೆರವಾಗಲಿದೆ ಅನ್ನೋದು ಸುನಿಲ್​ ಗವಾಸ್ಕರ್​ರಂತ ದಿಗ್ಗಜರ ಅಭಿಪ್ರಾಯವಾಗಿದೆ.

Advertisment

ಇದನ್ನೂ ಓದಿ:ಕೆ.ಎಲ್​ ರಾಹುಲ್​ಗೆ ಸುವರ್ಣಾವಕಾಶ; ಟೀಮ್​ ಇಂಡಿಯಾದಲ್ಲಿ ಮಹತ್ವದ ಜವಾಬ್ದಾರಿ!

publive-image

ವಿಶ್ವದ​ ಮುಂದೆ ಅವಮಾನ, ಕೊಹ್ಲಿಗಿದು ಸೇಡಿನ ಸಮರ.!
ವಿರಾಟ್​ ಕೊಹ್ಲಿ ಪಿಂಕ್​ ಬಾಲ್​​ ಟೆಸ್ಟ್​​​​ ಪಂದ್ಯವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಪಿಂಕ್​ ಬಾಲ್​​ನಲ್ಲಿ ಆಡಿರೋ ಅನುಭವ ಕಡಿಮೆ ಇರೋದ್ರಿಂದ ಹೆಚ್ಚು ಅಭ್ಯಾಸ ಮಾಡ್ತಿದ್ದಾರೆ. ಇದರ ಹಿಂದೆ ಸೆಂಚುರಿ ಹೊಡೆದಿರೋ ಕೊಹ್ಲಿ ಅದೇ ಫಾರ್ಮ್​ನ ಮುಂದುವರೆಸೋ ಲೆಕ್ಕಾಚಾರವಿದೆ. ಜೊತೆಗೆ ಈ ಹಿಂದೆ ಇದೇ ಅಡಿಲೇಡ್​ನಲ್ಲಾಗಿದ್ದ

ಅವಮಾನದ ಸೇಡು ತೀರಿಸಿಕೊಳ್ಳೋ ಹಠವೂ ಇದೆ.
2021ರ ಪ್ರವಾಸದಲ್ಲಿ ಇದೇ ಅಡಿಲೇಡ್​ ಅಂಗಳದಲ್ಲಿ ಕೊಹ್ಲಿ ನಾಯಕತ್ವದ ಟೀಮ್​ ಇಂಡಿಯಾ ವಿಶ್ವದ ಎದುರು ತಲೆ ತಗ್ಗಿಸಿತ್ತು. ಕೇವಲ 36 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಗಿ ಮುಖಭಂಗ ಅನುಭವಿಸಿತ್ತು. ಆ ಅವಮಾನದ ಸೇಡಿನ ಜ್ವಾಲೆ ಕೊಹ್ಲಿಯನ್ನ ಇಂದಿಗೂ ಕಾಡ್ತಿದೆ. ಆ ಸೇಡನ್ನ ಅದೇ ನೆಲದಲ್ಲಿ ಆಸಿಸ್​ ಎದುರು ತೀರಿಸಿಕೊಳ್ಳೋ ತವಕ ಕೊಹ್ಲಿಯದ್ದಾಗಿದೆ. ಇದೂ ಕೂಡ ಕೊಹ್ಲಿಯ ಕಠಿಣ ಅಭ್ಯಾಸ ಹಿಂದಿನ ಸೀಕ್ರೆಟ್​ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment