newsfirstkannada.com

ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್​

Share :

Published April 2, 2024 at 11:38am

Update April 2, 2024 at 3:41pm

  ಆ ಟೈಮ್​​ನಲ್ಲಿ ಸತ್ತು ಹೋಗಿದ್ದರೂ ನನಗೆ ಏನೂ ಅನಿಸುತ್ತಿರಲಿಲ್ಲ

  ದೇವರೇ ಬಂದು ವರ ಕೊಟ್ಟಂತೆ ಆಗಿದೆ ನನಗೆ, ತುಂಬಾ ಖುಷಿ ಇದೆ

  ಎರಡು ದಿನಗಳ ಕಾಲ ನಾನು ಅದೇ ಗುಂಗ್​​ನಲ್ಲೇ ಇದ್ದೆ ಎಂದ ಯುವಕ

ಅವರು ಹೊರಗೆ ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ. ನಾನು ಕೊಹ್ಲಿ ಜೊತೆ, ಸರ್ ನಾನು ನಿಮ್ಮ ಬಿಗ್ ಫ್ಯಾನ್ ಎಂದೆ. ಅದಕ್ಕೆ ವಿರಾಟ್ ಕೊಹ್ಲಿ ಥ್ಯಾಂಕ್ಸ್​ ಎಂದರು. ಅದೇ ನನಗೆ ದೇವರು ವರ ಕೊಟ್ಟಂತೆ ಆಯಿತು ಎಂದು ಮೈದಾನಕ್ಕೆ ನುಗ್ಗಿ ಕೊಹ್ಲಿ ತಬ್ಬಿಕೊಂಡಿದ್ದ ರಾಯಚೂರಿನ ಯುವಕ ಚಿನ್ನಾ ಹೇಳಿದ್ದಾರೆ.

ಮೈದಾನದಿಂದ ಕರೆದುಕೊಂಡು ಹೋಗುವಾಗ ಕೊಹ್ಲಿ ಅವರು ಹೊಡಿಬೇಡ್ರಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದರು. ಆ ಟೈಮ್​​ನಲ್ಲಿ ನಾನು ಸತ್ತು ಹೋಗಿದ್ದರೂ ಏನು ಅನಿಸುತ್ತಿರಲಿಲ್ಲ. ಅಷ್ಟೊಂದು ಖುಷಿ ನನಗೆ ಇತ್ತು. ಅವರು ಹೊಡೆದ ಮೇಲೂ ನನಗೆ ಏನೂ ಎನಿಸಲಿಲ್ಲ. ನಾನು ಎರಡು ದಿನ ಅವರ ಗುಂಗ್​​ನಲ್ಲಿ ಇದ್ದೇನೆ. ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ಕೆ ಕೆಲವರು ಕೆಟ್ಟ ಕಮೆಂಟ್ ಕೂಡ ಮಾಡಿದ್ದಾರೆ. ನನಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪಾಂಡ್ಯ ವಿರುದ್ಧ ಘೋಷಣೆ ಕೂಗದಂತೆ ರೋಹಿತ್ ಮನವಿ; ಮೈದಾನದಲ್ಲೇ ದಿಲ್ ಗೆದ್ದ ಹಿಟ್​​ಮ್ಯಾನ್ -VIDEO

ಮಾರ್ಚ್​ 25 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಮತ್ತು ಪಿಬಿಕೆಎಸ್​ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ, ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ. ನಂತರ ಆತನನ್ನು ಬಾಡಿಗಾರ್ಡ್ಸ್​​ ಹಿಡಿದು, ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ಕೊನೆಗೆ ಭದ್ರತಾ ಸಿಬ್ಬಂದಿ ಸಿಕ್ಕಾಪಟ್ಟೆ ಥಳಿಸಿರುವ ವಿಡಿಯೋ ವೈರಲ್ ಆಗಿತ್ತು. ಆತನಿಗೆ ಹೊಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳು ಆರ್​ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂದು ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿ, ಕಾಲಿಗೆ ನಮಸ್ಕರಿಸಿ ಬಂದಿದ್ದ ರಾಯಚೂರಿನ ಯುವಕನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಅಂತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್​

https://newsfirstlive.com/wp-content/uploads/2024/04/KOHLI-FAN.jpg

Load More