ಹೃದಯ ವಿದ್ರಾವಕ ಘಟನೆ.. RCB ಸಂಭ್ರಮಾಚರಣೆ ವೇಳೆ ವಿರಾಟ್ ಕೊಹ್ಲಿ ಅಭಿಮಾನಿ ಬಲಿ

author-image
Veena Gangani
Updated On
ಹೃದಯ ವಿದ್ರಾವಕ ಘಟನೆ.. RCB ಸಂಭ್ರಮಾಚರಣೆ ವೇಳೆ ವಿರಾಟ್ ಕೊಹ್ಲಿ ಅಭಿಮಾನಿ ಬಲಿ
Advertisment
  • ವಿರಾಟ್ ‌ಕೊಹ್ಲಿ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಕುಂಬಾರ
  • ಫೈನಲ್ ಮ್ಯಾಚ್ ಬಳಿಕ ಗ್ರಾಮದಲ್ಲಿ ‌ನಡೆದಿದ್ದ ಸಂಭ್ರಮಾಚರಣೆ
  • ಮೂಡಲಗಿ ತಾಲೂಕಿನ ‌ಅವರಾದಿ ಗ್ರಾಮದಲ್ಲಿ ದಾರುಣ ಘಟನೆ

‘ಕೊನೆಗೂ ಈ ಸಲ ಕಪ್ ನಮ್ದೇ ಆಗಿದೆ’.. ಐಪಿಎಲ್ ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುತ್ತಿಡುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿದೆ. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಹಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗ್ತಿದೆ.

ಇದನ್ನೂ ಓದಿ:ಆರ್​ಸಿಬಿ ಭಲೇ.. ಭೇಷ್..! ತಮಿಳುನಾಡು ಸಿಎಂ MK ಸ್ಟಾಲಿನ್ ಬೆಂಗಳೂರು ತಂಡಕ್ಕೆ, ಕೊಹ್ಲಿ ಬಗ್ಗೆ ಏನಂದ್ರು?

publive-image

ಆದ್ರೆ ಸಂಭ್ರಮಾಚರಣೆಯ ಖುಷಿಯಲ್ಲಿದ್ದ ಅಭಿಮಾನಿಯೊಬ್ಬ ಜೀವ ಬಿಟ್ಟಿದ್ದಾನೆ. ಹೌದು, ಆರ್​ಸಿಬಿ ಕಪ್ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದರು. ಇದೇ ವೇಳೆ ಆರ್‌ಸಿಬಿ ಅಭಿಮಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

publive-image

ಬೆಳಗಾವಿ ‌ಜಿಲ್ಲೆಯ ಮೂಡಲಗಿ ತಾಲೂಕಿನ ‌ಅವರಾದಿ ಗ್ರಾಮದ ನಿವಾಸಿ ಮಂಜುನಾಥ ಕುಂಬಾರ (25) ಜೀವ ಬಿಟ್ಟಿದ್ದಾರೆ. ಆರ್​ಸಿಬಿ ಫೈನಲ್ ಮ್ಯಾಚ್ ಗೆದ್ದಿದ್ದಕ್ಕೆ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಆದ್ರೆ ಇದೇ ವೆಳೆ ಮಂಜುನಾಥ ಕುಣಿದು ಕುಪ್ಪಳಿಸುತ್ತಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇನ್ನೂ, ಮೃತ ಮಂಜುನಾಥ ಕುಂಬಾರ ಅವರ ಅಂತ್ಯಕ್ರಿಯೆ ಅವರಾದಿ ಗ್ರಾಮದಲ್ಲಿ ‌ಮಧ್ಯಾಹ್ನ 12ಕ್ಕೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment