newsfirstkannada.com

ಇಂಗ್ಲೆಂಡ್​​, ಅಫ್ಘಾನ್​​ ತಂಡಕ್ಕೆ ಖಡಕ್​ ವಾರ್ನಿಂಗ್​​.. ಕೆಣಕಿದ್ರೆ ಯಾರನ್ನು ಬಿಡಲ್ಲ ಕಿಂಗ್​ ಕೊಹ್ಲಿ!

Share :

Published January 11, 2024 at 6:12pm

Update January 11, 2024 at 6:22pm

    ಕೊಹ್ಲಿ ಆನ್​ಫೀಲ್ಡ್​ ಆ್ಯಟಿಟ್ಯೂಡ್​ಗೆ ಮೆಚ್ಚಿದ ಫ್ಯಾನ್ಸ್​

    ಒಬ್ಬ ಕೊಹ್ಲಿ, ಹಲವು ಅವತಾರ, ಫ್ಯಾನ್ಸ್ ಫುಲ್​​​​ ಫಿದಾ.!

    ಪ್ರತಿ ಪಂದ್ಯದಲ್ಲೂ ಅದೇ ಎನರ್ಜಿ, ಅದೇ ಜೋಷ್​.!

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ತನ್ನ ಬ್ಯಾಟಿಂಗ್​ನಿಂದ ಎಷ್ಟು ಫೇಮಸ್​ ಆಗಿದ್ದಾರೂ, ತನ್ನ ಆ್ಯಟಿಟ್ಯೂಡ್​ನಿಂದಲೂ ಅಷ್ಟೇ ಫೇಮಸ್​​.! ಆನ್​ಫೀಲ್ಡ್​​ ಇಳಿದ ಮೇಲೆ ಪಂದ್ಯ ಸಾಗಿದಂತೆ ಕೊಹ್ಲಿಯ ಹಾವಭಾವ ಎಲ್ಲವೂ ಬದಲಾಗ್ತಿರುತ್ತೆ. ಕೊಹ್ಲಿ ಹತ್ತು ಹಲವು ಅವತಾರ ಎತ್ತಿ ಬಿಡ್ತಾರೆ.

ಇಂಡೋ-ಸೌತ್​ ಆಫ್ರಿಕಾ ಟೆಸ್ಟ್ ಸರಣಿ ಮುಗಿದು 5 ದಿನಗಳೆ ಕಳೆದಿವೆ. ಸೌತ್​ ಆಫ್ರಿಕಾದಿಂದ ಟೀಮ್​ ಇಂಡಿಯಾ ಆಟಗಾರರೂ ತವರಿಗೆ ಬಂದಾಗಿದೆ. ಆದ್ರೆ, ಕ್ರಿಕೆಟ್​ ಲೋಕ ಮಾತ್ರ ಕಿಂಗ್​ ಕೊಹ್ಲಿಯ ಫೀವರ್​​ನಲ್ಲಿದೆ. ಕಠಿಣ ಕಂಡಿಷನ್ಸ್​ನಲ್ಲಿ ವಿರಾಟ್​ ಸಾಲಿಡ್​​ ಬ್ಯಾಟಿಂಗ್​ ನಡೆಸಿದ್ರು. ಕೊಹ್ಲಿಯ ಆಟವನ್ನ ಎಲ್ಲರೂ ಮೆಚ್ಚಿದ್ರು. ಆದ್ರೆ, ಕೊಹ್ಲಿ ಟ್ರೆಂಡಿಂಗ್​ನಲ್ಲಿರೋದು ಬ್ಯಾಟಿಂಗ್​ ಕಾರಣಕ್ಕಲ್ಲ..
ಒಬ್ಬ ಕೊಹ್ಲಿ, ಹಲವು ಅವತಾರ, ಲೈಕ್ಸ್​, ಕಮೆಂಟ್ಸ್​ ಸುರಿಮಳೆ.!

ಸೌತ್​ ಆಫ್ರಿಕಾದ ಕಠಿಣ ಪಿಚ್​ಗಳಲ್ಲಿ ಗಂಟೆಗಟ್ಟಲೇ ಬ್ಯಾಟ್​ ಮಾಡಿದ್ದಲ್ಲ.. ಫೀಲ್ಡಿಂಗ್​ ವೇಳೆ ಕೊಹ್ಲಿ ಆ್ಯಕ್ಟೀವ್​​ ಆಗಿದ್ದ ರೀತಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​​ ಎಬ್ಬಿಸಿರೋದು. ಜಸ್ಟ್​​ 32 ಸೆಕೆಂಡ್​ಗಳ ವಿಡಿಯೋವನ್ನ ಮಿಲಿಯನ್​ಗಟ್ಟಲೇ ಜನ ನೋಡಿ ಸಂಭ್ರಮಿಸಿದ್ದಾರೆ. ಲೈಕ್ಸ್​​, ಕಮೆಂಟ್ಸ್​ಗಳ ಸುರಿಮಳೆಯೇ ಸುರಿದಿದೆ.

ಟೆಸ್ಟ್​ ಮ್ಯಾಚ್​ ಅಂದ್ರೆ ಬೋರ್​ ಅಂತಾರೆ. ಆದ್ರೆ, ಕೊಹ್ಲಿ ಮೈದಾನದಲ್ಲಿದ್ರೆ, ಈ ಬೋರ್​ ಅನ್ನೋ ಪದಕ್ಕೆ ಜಾಗವೇ ಇಲ್ಲ. ಕೊಹ್ಲಿ ಬ್ಯಾಟಿಂಗ್​ ಮಾಡಲಿ ಬಿಡಲಿ. ಫೀಲ್ಡ್​ನಲ್ಲಿದ್ರೆ, ಎಂಟರ್​​ಟೈನ್​ಮೆಂಟ್​ ಫಿಕ್ಸ್​.!

ರೋಷ, ಆವೇಶ, ನಗು, ಸಂಭ್ರಮ.. ಕಲಾಕಾರ ಕೊಹ್ಲಿ!

ಫೀಲ್ಡಿಂಗ್​​ ವೇಳೆ ಟೀಮ್​ ಇಂಡಿಯಾ ಆಟಗಾರರ ಪಾಲಿನ ಎನರ್ಜಿ ಬೂಸ್ಟರ್​ ಆಗಿ ಕೊಹ್ಲಿ ಕೆಲಸ ಮಾಡ್ತಾರೆ. ರೋಷ, ಆವೇಶ, ಆ ನಗು, ಆ ಸೆಲೆಬ್ರೇಷನ್.. ಆಟಗಾರರ ಹುರುಪನ್ನೇ ಡಬಲ್​ ಮಾಡುತ್ತೆ.

ಅಗ್ರೆಸ್ಸೀವ್​ ಆಟದ ಬ್ರ್ಯಾಂಡ್​ ಅಂಬಾಸಿಡರ್​.!
ಕೆಣಕಿದ್ರೆ ಕತೆ ಮುಗೀತು, ಕಾಡದೆ ಬಿಡಲ್ಲ..!

ವಿರಾಟ್​ ಕೊಹ್ಲಿಗೂ ಅಗ್ರೆಸ್ಸೀವ್​ ಆ್ಯಟಿಟ್ಯೂಡ್​ಗೂ ಬಿಡಿಸಲಾಗದ ಬಂಧವಿದೆ. ಅಪ್ಪಿತಪ್ಪಿ ಕೊಹ್ಲಿಯನ್ನ ಯಾರಾದ್ರೂ ಕೆಣಕಿದ್ರೆ ಕಥೆ ಮುಗೀತು ಅಂತಾನೆ ಅರ್ಥ. ಕೊಹ್ಲಿ ಕಾಟ ಕೊಡಲು ಶುರುವಿಟ್ಟುಕೊಂಡ್ರೆ, ತಡಕೊಳ್ಳೋಕೆ ಆಗಲ್ಲ..

ಕಿಂಗ್​​ ಕೊಹ್ಲಿ ಇದ್ರೆನೇ ಫ್ಯಾನ್ಸ್​ಗೆ ಹಬ್ಬ.!

ವಿಶ್ವಾದ್ಯಂತ ವಿರಾಟ್​ ಕೊಹ್ಲಿ ಆರಾಧಿಸುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ವಿಶ್ವದ ಯಾವುದೇ ಮೂಲೆಯಲ್ಲಿ ಕೊಹ್ಲಿ ಕ್ರಿಕೆಟ್​ ಆಡಲಿ ಫ್ಯಾನ್ಸ್​ ಜಮಾಯಿಸಿಬಿಡ್ತಾರೆ. ಕೊಹ್ಲಿಯೊಬ್ಬ ಪ್ಯೂರ್​ ಎಂಟರ್​​ಟೈನರ್​ ಅನ್ನೋದೆ ಅದ್ರ ಹಿಂದಿರೋ ಸಿಂಪಲ್​ ರೀಸನ್​..!

ಕೊಹ್ಲಿ ಟನ್​ಗಟ್ಟನೇ ರನ್​ ಹೊಡೆದು ದಾಖಲೆಗಳನ್ನ ದಮನ ಮಾಡಿ ತನ್ನದೇ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿರೋ ಕೊಹ್ಲಿ, ಅವತಾರ ಪುರುಷನಂತೆ ವಿಜೃಂಭಿಸಿದ್ದಾರೆ. ಕ್ರಿಕೆಟ್​ಗೆ ಕಾಲಿಟ್ಟ ದಿನದಿಂದ ಹಿಡಿದು ಈವರೆಗೆ ಭಿನ್ನ, ವಿಭಿನ್ನ ಅವತಾರ ಎತ್ತಿರುವ ಕಿಂಗ್​ ಕೊಹ್ಲಿ ಮುಂದೆಯೂ ಅಭಿಮಾನಿಗಳನ್ನ ಹೀಗೆ ರಂಜಿಸಲಿ. ಸದ್ಯ ಅಫ್ಘಾನಿಸ್ತಾನ, ಮುಂದೆ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಇದ್ದು, ಕೊಹ್ಲಿ ಬಗ್ಗೆ ಎರಡು ತಂಡಗಳು ಎಚ್ಚರದಿಂದ ಇರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಗ್ಲೆಂಡ್​​, ಅಫ್ಘಾನ್​​ ತಂಡಕ್ಕೆ ಖಡಕ್​ ವಾರ್ನಿಂಗ್​​.. ಕೆಣಕಿದ್ರೆ ಯಾರನ್ನು ಬಿಡಲ್ಲ ಕಿಂಗ್​ ಕೊಹ್ಲಿ!

https://newsfirstlive.com/wp-content/uploads/2023/06/VIRAT_KOHLI_BATTING_1.jpg

Load More