newsfirstkannada.com

T20 ವಿಶ್ವಕಪ್​ ಮುನ್ನವೇ ಹೊಸ ಅವತಾರ.. 2023 ರಲ್ಲಿದ್ದ ಕೊಹ್ಲಿನೇ ಬೇರೆ.. ಈಗಿನ ಕೊಹ್ಲಿಯೇ ಬೇರೆ..!

Share :

Published January 17, 2024 at 11:48am

    ಕೊಹ್ಲಿ ಹೊಸ ಅವತಾರಕ್ಕೆ ಫ್ಯಾನ್ಸ್​ ಬಹುಪರಾಕ್​

    ಕೊಹ್ಲಿ ಬ್ಯಾಟಿಂಗ್​​​​ ಅಪ್ರೋಚ್​​ ಕಂಪ್ಲೀಟ್ ಚೇಂಜ್​​​​​

    180 + ಸ್ಟ್ರೈಕ್​ರೇಟ್​ನಲ್ಲಿ ವಿರಾಟ್​ ರನ್ ಭರಾಟೆ

ಸುದೀರ್ಘ ಸಮಯದ ಬಳಿಕ ಕಿಂಗ್ ಕೊಹ್ಲಿ ಟಿ20 ತಂಡಕ್ಕೆ ಮರಳಿದ್ದಾರೆ. ಎಲ್ಲರಂತೆ ಸಾಮಾನ್ಯವಾಗಿ ತಂಡಕ್ಕೆ ಕಮ್​ಬ್ಯಾಕ್ ಮಾಡಿಲ್ಲ. ಹೊಸ ಅವತಾರದೊಂದಿಗೆ ಎಂಟ್ರಿಕೊಟ್ಟಿದ್ದಾರೆ. ವಿರಾಟ್​ರ ಹೊಸ ಅವತಾರ ಕಂಡು ಫ್ಯಾನ್ಸ್ ಬೆಕ್ಕಸ ಬೆರಗಾಗಿದ್ದಾರೆ.

T20 ವಿಶ್ವಕಪ್​ ಮುನ್ನ ಕೊಹ್ಲಿ ಹೊಸ ಅವತಾರ..!

ಟಿ20 ವಿಶ್ವಕಪ್​​​ ಆರಂಭಕ್ಕೆ ಇನ್ನೂ ಜಸ್ಟ್​ ಐದು ತಿಂಗಳಷ್ಟೇ ಬಾಕಿ ಇದೆ. ಮಿನಿ ವಿಶ್ವಕಪ್​ ಗೆಲ್ಲೋದು ಎಲ್ಲಾ ತಂಡಗಳಿಗೆ ಪ್ರತಿಷ್ಠೆಯ ವಿಚಾರ. ಆಟಗಾರರಿಗೂ ಅಷ್ಟೇ. ಗ್ಲೋಬಲ್ ಇವೆಂಟ್​​​ ಕಿಂಗ್ ಅನ್ನಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಆಟಗಾರನ ಬಿಗ್ ಡ್ರೀಮ್ ಕೂಡ ಆಗಿರುತ್ತೆ. ಅಂತಹದೇ ಮಹಾದಾಸೆ ಹೊಂದಿರೋ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಮುನ್ನ ಹೊಸ ಅವತಾರವೆತ್ತಿದ್ದಾರೆ. ರನ್ ಮಷೀನ್​ ಹೊಸ ಅವತಾರ ಕಂಡು ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ.

ಕಿಂಗ್​​ ಕೊಹ್ಲಿ 14 ತಿಂಗಳ ಟಿ20 ಕ್ರಿಕೆಟ್​​ಗೆ ಮರಳಿದ್ದಾರೆ. ಅದು ಹೊಸ ಅವತಾರೊಂದಿಗೆ. ಹಿಂದೆಂದೂ ಕೊಹ್ಲಿಯನ್ನ ಈ ಅವತಾರದಲ್ಲಿ ನೋಡಿಯೇ ಇರ್ಲಿಲ್ಲ. ಅಂತಹದೊಂದು ಹೊಸ ಅವತಾರವನ್ನು ಅಫ್ಘಾನಿಸ್ತಾನ ಎದುರಿನ ಕಮ್​ಬ್ಯಾಕ್ ಪಂದ್ಯದಲ್ಲಿ ಎತ್ತಿದ್ರು. ಕೊಹ್ಲಿಯ ಬ್ಯಾಟಿಂಗ್ ಅಪ್ರೋಚ್​ ಕಂಡು ಕ್ರಿಕೆಟ್ ಲೋಕವೇ ಆಶ್ಚರ್ಯ ಚಕಿತಗೊಂಡಿತ್ತು.

ಇಂದೋರ್​​ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಿದವರಿಗೆ ಇದರ ಅನುಭವ ಆಗಿರುತ್ತೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿಯ ಬ್ಯಾಟಿಂಗ್ ಅಪ್ರೋಚ್​​​​​ ಕಂಪ್ಲೀಟ್ ಬದಲಾಗಿತ್ತು. ಆರಂಭದಲ್ಲಿ ಕಾದು ಆಡುವ ಕೊಹ್ಲಿ ಇಂದೋರ್​​​​​ನಲ್ಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ್ರು. ಕಾಯುವಿಕೆಗೆ ಚಾನ್ಸೇ ಕೊಡ್ಲಿಲ್ಲ. 180 ಫ್ಲಸ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ ಟಿ20 ಕ್ರಿಕೆಟ್​ನ ಅಸಲಿ ಆಟವಾಡಿದ್ರು.

ಕಮ್​​ಬ್ಯಾಕ್​ ಪಂದ್ಯದಲ್ಲಿ ಕೊಹ್ಲಿ..!

ಇಂದೋರ್​ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಕೊಹ್ಲಿ 16 ಎಸೆತಗಳನ್ನು ಎದುರಿಸಿ 29 ರನ್ ಬಾರಿಸಿದರು. 181.25ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ ಎಲ್ಲರನ್ನೂ ದಂಗು ಬಡಿಸಿತ್ತು. 2022ರ ಟಿ20 ವಿಶ್ವಕಪ್​ನಲ್ಲಿ ಅತ್ಯದ್ಭುತ ಆಟವಾಡಿದ ಕೊಹ್ಲಿ 296 ರನ್​ ಗಳಿಸಿ ಟೂರ್ನಮೆಂಟ್ ಆಫ್​ ದಿ ಪ್ಲೇಯರ್​ ಅನ್ನಿಸಿಕೊಂಡ್ರು. ಆದರೂ ಟೀಕೆ ತಪ್ಪಲಿಲ್ಲ. 136.40ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಕ್ಕೆ ಟೀಕಾಕಾರಿಗೆ ಆಹಾರವಾಗಿದ್ರು. ಈಗ ಅಗ್ರೆಸ್ಸಿವ್ ಅಪ್ರೋಚ್ ಮೂಲಕ ಎಲ್ಲರಿಗೂ ಆನ್ಸರ್ ಕೊಟ್ಟಿದ್ದಾರೆ.

ಕಿಂಗ್ ಕೊಹ್ಲಿ ಸ್ಟ್ರೈಕ್​ರೇಟ್ ಹೆಚ್ಚಿಸಿಕೊಂಡಿದ್ದೇಕೆ?

ಸುದೀಘ ಸಮಯ ಕೊಹ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿರೋ ಕೊಹ್ಲಿ ಟಿ20 ವಿಶ್ವಕಪ್​ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸ್ಥಾನ ಖಾತರಿಯಿಲ್ಲ. ಯಾಕಂದ್ರೆ ತಂಡದಲ್ಲಿ ಕಾಂಪಿಟೇಶನ್ ಹೆಚ್ಚಿದೆ. ಯಂಗ್​ಸ್ಟರ್ಸ್​ ಆಕ್ರಮಣಕಾರಿ ಆಟವಾಡಿ ಮಿಂಚು ಹರಿಸ್ತಿದ್ದಾರೆ. ಯಾವಾಗ ಬೇಕಾದ್ರೂ ಕೊಹ್ಲಿ ಸ್ಥಾನಕ್ಕೆ ಕುತ್ತು ಬರಬಹುದು. ಇದನ್ನರಿತ ವಿರಾಟ್ ಕಂಪ್ಲೀಟ್​​​ ಬ್ಯಾಟಿಂಗ್ ಅಪ್ರೋಚ್ ಬದಲಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಪ್ರೋಚ್ ಬದಲಾವಣೆ​​ ತಂಡಕ್ಕೆ ಅಗತ್ಯವಾಗಿತ್ತು. ತಡವಾದ್ರು ವಿರಾಟ್ ಎಚ್ಚೆತ್ತುಕೊಂಡಿದ್ದಾರೆ. ಆಕ್ರಮಣಕಾರಿ ಆಟವನ್ನ ಮುಂದುವರಿಸಿದ್ದೇ ಆದರೆ ತಂಡದ ಡೇಂಜರಸ್​ ಆಟಗಾರನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​ ಮುನ್ನವೇ ಹೊಸ ಅವತಾರ.. 2023 ರಲ್ಲಿದ್ದ ಕೊಹ್ಲಿನೇ ಬೇರೆ.. ಈಗಿನ ಕೊಹ್ಲಿಯೇ ಬೇರೆ..!

https://newsfirstlive.com/wp-content/uploads/2024/01/VIRAT-21.jpg

Load More