ಔಟ್ ಆಗಿದ್ಕೆ ಕೋಪ.. ನೀರಿನ ಬಾಕ್ಸ್​ಗೆ ಬ್ಯಾಟ್​​ನಿಂದ ಬಡಿದ ಕೊಹ್ಲಿ -ವಿಡಿಯೋ

author-image
Ganesh
Updated On
ಔಟ್ ಆಗಿದ್ಕೆ ಕೋಪ.. ನೀರಿನ ಬಾಕ್ಸ್​ಗೆ ಬ್ಯಾಟ್​​ನಿಂದ ಬಡಿದ ಕೊಹ್ಲಿ -ವಿಡಿಯೋ
Advertisment
  • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ನಲ್ಲಿ ಕೊಹ್ಲಿ ಕಳಪೆ ಆಟ
  • 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 1 ರನ್
  • ಎರಡನೇ ಇನ್ನಿಂಗ್ಸ್​ನಲ್ಲಿ 17 ರನ್​ಗಳಿಸಿ ನಿರಾಸೆ

ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲುತ್ತಿದೆ. ತವರಿನಲ್ಲಿ ಸತತ 2 ಟೆಸ್ಟ್ ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ ಸರಣಿಯನ್ನು ಕೈಬಿಟ್ಟಿದೆ. ಬೆಂಗಳೂರು ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ ನಂತರ, ಪುಣೆ ಟೆಸ್ಟ್‌ನಲ್ಲೂ ನ್ಯೂಜಿಲೆಂಡ್ ಟೀಂ ಇಂಡಿಯಾವನ್ನು ಸೋಲಿಸಿತು. ಈ ಮೂಲಕ ಪ್ರವಾಸಿ ನ್ಯೂಜಿಲೆಂಡ್ ತಂಡ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ:ಮಾಜಿ ಸಚಿವರ ಜೊತೆ ಹಸಿಬಿಸಿ ಆಪರೇಷನ್.. ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯ ಬಂಧನ; ಸಿಕ್ಕಿಬಿದ್ದಿದ್ದೇ ರೋಚಕ!

ಕೋಪ ಹೊರ ಹಾಕಿದ ಕೊಹ್ಲಿ
ಪುಣೆ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಬ್ಯಾಟಿಂಗ್‌ ನಿರಾಸೆ ಮೂಡಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಒಂದು ರನ್ ಮಾತ್ರ ಗಳಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 17 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಮಿಚೆಲ್ ಸ್ಯಾಂಟ್ನರ್‌ಗೆ ಬಲಿಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 40 ಎಸೆತ ಎದುರಿಸಿದ ಕೊಹ್ಲಿ 2 ಬೌಂಡರಿ ಬಾರಿಸಿದರು. ಔಟ್ ಆದ ಬೆನ್ನಲ್ಲೇ ತುಂಬಾನೇ ನಿರಾಸೆಗೊಂಡರು.

ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಔಟ್ ಆದ ನಂತರ ಕೊಹ್ಲಿ ಕೋಪಗೊಂಡಿದ್ದರು. ಡ್ರೆಸ್ಸಿಂಗ್ ರೂಮಿನ ಕಡೆಗೆ ಹೋಗುವಾಗ ತಾಳ್ಮೆ ಕಳೆದುಕೊಂಡು ದಾರಿಯಲ್ಲಿ ಬಿದ್ದಿದ್ದ ನೀರಿನ ಡಬ್ಬಿಗೆ ಬ್ಯಾಟ್​ನಿಂದ ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ, ಪಂತ್ ಬೋಲ್ಡ್​, ಗಿಲ್, ಅಶ್ವಿನ್ LBW; ಸಂಕಷ್ಟದಲ್ಲಿ ಟೀಮ್ ಇಂಡಿಯಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment