ಟೀಂ ಇಂಡಿಯಾ ಫ್ಯಾನ್ಸ್‌ಗೆ ಬಿಗ್ ಶಾಕ್.. ಫೈನಲ್‌ಗೂ ಮುನ್ನ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ!

author-image
Gopal Kulkarni
Updated On
ಟೀಂ ಇಂಡಿಯಾ ಫ್ಯಾನ್ಸ್‌ಗೆ ಬಿಗ್ ಶಾಕ್.. ಫೈನಲ್‌ಗೂ ಮುನ್ನ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ!
Advertisment
  • ಫೈನಲ್​ಗೆ ಒಂದು ದಿನದ ಮುನ್ನವೇ ಗಾಯಗೊಂಡ ಭಾರತದ ಹುಲಿ
  • ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡ ಕೊಹ್ಲಿ
  • ಚಾಂಪಿಯನ್ಸ್ ಟ್ರೋಫಿ ಫೈನಲ್​ಗೆ ಅಲಭ್ಯರಾಗ್ತಾರಾ ಕಿಂಗ್​ ವಿರಾಟ್​?

ವಿಶ್ವ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ತಾನು ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಈಗ ಫೈನಲ್ ಪ್ರವೇಶಿಸಿದೆ. ದುಬೈ ಅಖಾಡದಲ್ಲಿ ಪೆಂಗ್ವಿನ್​ಗಳ ವಿರುದ್ಧ ಭಾರತದ ಹುಲಿಗಳು ಫೈನಲ್ ಪಂದ್ಯವನ್ನು ಆಡಲಿವೆ. ನಾಳೆಯೇ ಫೈನಲ್ ಪಂದ್ಯಕ್ಕೆ ಮುಹೂರ್ತವಿದ್ದು ಫಿಕ್ಸಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದ್ರೆ ಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಸಮಯದಲ್ಲಿ ಭಾರತೀಯ ತಂಡಕ್ಕೆ ಬಿಗ್​ ಶಾಕ್​ವೊಂದು ಎದುರಾಗಿದೆ. ಅದು ಚೇಸಿಂಗ್ ಮಾಸ್ಟರ್​, ದೈತ್ಯ ತಂಡಗಳನ್ನು ಬಿಡದೆ ಕಾಡುವ, ಬ್ಯಾಟಿಂಗ್ ಜಗತ್ತಿನ ಕಿಂಗ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಚಾಂಪಿಯನ್ ಪಟ್ಟಕ್ಕೆ ಬಿಗ್ ಫೈಟ್‌.. ಫೈನಲ್ಸ್​ನಲ್ಲಿ ವರ್ಕ್​ಔಟ್ ಆಗುತ್ತಾ ಆ ಮ್ಯಾಜಿಕ್? ಕಿವೀಸ್‌ಗೆ ದೊಡ್ಡ ಟೆನ್ಷನ್‌!

ಅಭ್ಯಾಸ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದ್ದು. ಈಗ ಫೈನಲ್ ಆಡುತ್ತಾರೋ ಇಲ್ವೋ ಎಂಬ ಪ್ರಶ್ನೆಯೊಂದು ಮೂಡಿದೆ. ಇದು ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಯಾಕಂದ್ರೆ ಕೆಲವು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಎಂಬ ಹುಲಿ ಈಗ ಮತ್ತೆ ಕ್ರೀಡಾಂಗಣದಲ್ಲಿ ತನ್ನ ಹಳೆಯ ಘರ್ಜನೆಯನ್ನು ಶುರುವಿಟ್ಟುಕೊಂಡಿದೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮಿಂಚಿದ್ದಾರೆ ಕೊಹ್ಲಿ. ಆದ್ರೆ ಫೈನಲ್​ ಪಂದ್ಯ ಮುಂದಿರುವಾಗಲೇ ಅವರು ಗಾಯಗೊಂಡಿದ್ದು ಈಗ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಅವರ ಅಲಭ್ಯತೆಯೊಂದಿಗೆ ಭಾರತೀಯ ಟೀಂ ಕ್ರೀಡಾಂಗಣಕ್ಕಿಳಿದರೆ ಗತಿ ಏನು ಎಂಬ ಪ್ರಶ್ನೆಯನ್ನು ಕೂಡ ಮೂಡಿಸುತ್ತಿದೆ. ಹಾಗಿದ್ರೆ ವಿರಾಟ್ ಕೊಹ್ಲಿ ಫೈನಲ್ ಪಂದ್ಯವನ್ನು ಆಡುವುದಿಲ್ವಾ?

publive-image

ಭಾರತೀಯ ಕ್ರಿಕೆಟ್ ತಂಡದ ಪಿಸಿಯೋ ಸ್ಟಾಫ್​ 36 ವರ್ಷದ ವಿರಾಟ್ ಕೊಹ್ಲಿಯವರನ್ನು ಪರೀಕ್ಷೆ ಮಾಡಿದೆ. ಅಭ್ಯಾಸ ಪಂದ್ಯದ ವೇಳೆ ವಿರಾಟ್​ ಕೊಹ್ಲಿಯ ಮೊಣಕಾಲಿಗೆ ಗಾಯವಾಗಿದ್ದು ಅದಕ್ಕೆ ಸ್ಪ್ರೇ ಹೊಡೆದು ಬ್ಯಾಂಡೇಜ್ ಮಾಡಲಾಗಿದೆ. ಇದಾದ ಬಳಿಕ ಕೊಹ್ಲಿ ಪ್ರ್ಯಾಕ್ಟಿಸ್​ನಿಂದ ಆಚೆ ಬಂದು ಉಳಿದ ಆಟಗಾರರು ಪ್ರ್ಯಾಕ್ಟಿಸ್​ ಮಾಡುವುದನ್ನು ನೋಡುತ್ತಾ ಕುಳಿತಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿತ್ತು

publive-image

ಕೊನೆಗೆ ಕೋಚ್ ಸ್ಟಾಪ್​ ಬಂದು ಕೊಹ್ಲಿ ಗಾಯಗೊಂಡ ಬಗ್ಗೆ ಹಾಗೂ ಫಿಟ್​ನೆಸ್​ ಬಗ್ಗೆ  ವಿಚಾರಿಸಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನವೇ ಈ ರೀತಿಯಾಗಿ ಕೊಹ್ಲಿ ಗಾಯಗೊಂಡಿದ್ದಾರೆ. ಇದೇನು ಅಂತಹ ದೊಡ್ಡ ಮಟ್ಟದ ಗಾಯವಲ್ಲ. ನಾಳೆಯಷ್ಟೊತ್ತಿಗೆ ಕೊಹ್ಲಿ ಸರಿಹೋಗುತ್ತಾರೆ. ನ್ಯೂಜಿಲೆಂಡ್ ವಿರುದ್ಧ ಫಿಟ್​ ಆಗಿ ಕಣಕ್ಕೆ ಇಳಿಯುತ್ತಾರೆ ಎಂದು ಹೇಳಲಾಗಿದ್ದು, ಭಾರತೀಯ ಟೀಂನಲ್ಲಿ ಹಾಗೂ ಅಭಿಮಾನಿಗಳಲ್ಲಿ ಕೊಂಚ ನಿರಾಳತೆ ಮೂಡಿದೆ.

publive-image

ಭಾರತ ಈಗಾಗಲೇ ನ್ಯೂಜಿಲೆಂಡ್​ನ್ನು ಕಟ್ಟಿಹಾಕುವ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದೆ. ನ್ಯೂಜಿಲೆಂಡ್ ಇಡೀ ಸರಣಿಯುದ್ದಕ್ಕೂ ಅದ್ಯಾವ ಮಟ್ಟಕ್ಕೆ ಪ್ರಬಲ ಸ್ಪರ್ಧೆಯೊಡ್ಡಿಕೊಂಡು ಫೈನಲ್ ಪ್ರವೇಶಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ತಂಡಗಳಲ್ಲೊಂದು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರಲ್ಲೂ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ವಿಚಾರದಲ್ಲಿ ನ್ಯೂಜಿಲೆಂಡ್​​ ಅದ್ಭುತವಾಗಿ ಪ್ರದರ್ಶನ ಮಾಡುತ್ತಿದೆ. ಇಂತಹ ದೈತ್ಯ ಟೀಂನ್ನು ಕಟ್ಟಿಹಾಕಲು ವಿರಾಟ್​​ನಂತಹ ಆಕ್ರಮಣಕಾರಿ ಆಟಗಾರ. ಚೇಸಿಂಗ್​ ಕಿಂಗ್ ಬೇಕೆ ಬೇಕು.

ಇದನ್ನೂ ಓದಿ:NDvsNZ: ಫೈನಲ್​​​ ಫೈಟ್‌ನಲ್ಲಿ ಈ ಮೂವರೇ ವಿಲನ್ಸ್​.. ಟೀಮ್ ಇಂಡಿಯಾಗೆ ಕಾದಿದೆ ಬಿಗ್ ಥ್ರೆಟ್; ಯಾರವರು?

ಸದ್ಯ ವಿರಾಟ್​ಗೆ ಆದ ಗಾಯ ಅಲ್ಪಮಟ್ಟದ್ದು ಎಂದು ತಿಳಿದು ಬಂದಿದ್ದು ಎಲ್ಲರಿಗೂ ಖುಷಿಯಾಗಿದೆ. ಮತ್ತೊಮ್ಮೆ ದುಬೈ ಅಂಗಳದಲ್ಲಿ ಕಿಂಗ್ ಕೊಹ್ಲಿಯ ಬ್ಯಾಟಿಂಗ್​ ಅಬ್ಬರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯ್ದು ಕುಳಿತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment