/newsfirstlive-kannada/media/post_attachments/wp-content/uploads/2025/04/KOHLI_RING_RCB.jpg)
2025ರ ಐಪಿಎಲ್ ಸೀಸನ್ 18ರಲ್ಲಿ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಫುಲ್ ಬ್ಯುಸಿ ಇದ್ದಾರೆ. ಏಪ್ರಿಲ್ 7 ರಂದು ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ ನಡೆಯುಲಿದ್ದು ವಿರಾಟ್ ಅಭ್ಯಾಸದಲ್ಲಿ ತೊಡಗಿದ್ದಾರೆ. ಸದ್ಯ ಮುಂಬೈಯಲ್ಲಿರುವ ವಿರಾಟ್ ಕೊಹ್ಲಿ ಪ್ರಾಕ್ಟೀಸ್ ಸೆಷನ್ ವೇಳೆ ದುಬಾರಿ ಮೌಲ್ಯದ ಡೈಮೆಂಡ್ ಉಂಗುರ ಹಾಕಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇಷ್ಟಕ್ಕೂ ಈ ಉಂಗುರ ಕೊಟ್ಟಿರುವುದು ಯಾರು?.
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯ ಗೆಲ್ಲಲು ವಾಂಖೆಡೆಯಲ್ಲಿ ವಿರಾಟ್ ಕೊಹ್ಲಿ ಭರ್ಜರಿಯಾಗಿ ಬೆವರಿಳಿಸುತ್ತಿದ್ದಾರೆ. ಅಭ್ಯಾಸ ಮಾಡುವಾಗ ವಿಶೇಷವಾದ ಉಂಗುರ ತೊಟ್ಟು ಕೊಹ್ಲಿ ಕ್ಯಾಮೆರಾಗೆ ತೋರಿಸಿದ್ದಾರೆ. ಅಲ್ಲದೇ ಉಂಗುರ ಹಾಕಿಕೊಂಡು ಡ್ಯಾನ್ಸ್ ಕೂಡ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಡಬ್ಲುಡಬ್ಲುಇ ಸ್ಟಾರ್ ಜಾನ್ ಸೀನಾ ಮಾಡುವ ಸ್ಟೈಲ್ನಂತೆ ಕೊಹ್ಲಿ ಕೈಬೆರಳುಗಳನ್ನು ಶೇಕ್ ಮಾಡಿರುವುದು ಸಖತ್ ಮಜವಾಗಿ ಕಾಣಿಸಿದೆ.
ಕಳೆದ ವರ್ಷ ಅಂದರೆ 2024ರ ಜೂನ್ 29 ರಂದು ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿತ್ತು. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಈ ಟೂರ್ನಿಯ ಲೀಗ್ ಹಂತದಲ್ಲಿ ಭಾರೀ ಪೈಪೋಟಿ ನೀಡಿ ಸೌತ್ ಆಫ್ರಿಕಾ ಹಾಗೂ ಭಾರತ ತಂಡಗಳು ಫೈನಲ್ಗೆ ಬಂದಿದ್ದವು. 2024ರ ಜೂನ್ 29 ರಂದು ಬ್ರಿಡ್ಜ್‌ಟೌನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 7 ರನ್ಗಳಿಂದ ರೋಚಕ ಗೆಲುವು ಪಡೆದಿತ್ತು.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಗುಣ ಹೇಗಿರುತ್ತೆ..? ವಿರಾಟ್ ಕೊಹ್ಲಿ ನೇರವಾಗಿ ಹೇಳಿದ್ದು ಏನು?
ಫೈನಲ್ನಲ್ಲಿ ಬ್ಯಾಟ್ ಬೀಸಿದ್ದ ಕಿಂಗ್ ಕೊಹ್ಲಿ 76 ರನ್ ಗಳಿಸಿ, ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದರು. ಟಿ20 ವರ್ಲ್ಡ್ಕಪ್ ಗೆದ್ದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಎಲ್ಲ ಆಟಗಾರರಿಗೆ ಬಿಸಿಸಿಐ ವಿಶೇಷ ಬಹುಮಾನ ಘೋಷಣೆ ಮಾಡಿತ್ತು. 2025ರ ಜನವರಿ 31 ರಂದೇ ರೋಹಿತ್, ಸೂರ್ಯ, ಬೂಮ್ರಾ ಸೇರಿ ಎಲ್ಲ ಆಟಗಾರರಿಗೆ ಉಂಗುರಗಳನ್ನ ನೀಡಲಾಗಿತ್ತು. ಆದ್ರೆ ಕೊಹ್ಲಿ ಈ ವೇಳೆ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ.
ಇದೀಗ ವಿರಾಟ್ ಕೊಹ್ಲಿ ಅವರು ಐಪಿಎಲ್ ಪಂದ್ಯ ಹಿನ್ನೆಲೆಯಲ್ಲಿ ಮುಂಬೈಗೆ ಭೇಟಿ ನೀಡಿದ್ದಾರೆ. ಬಿಸಿಸಿಐ ಹೆಡ್ ಆಫೀಸ್ ಕೂಡ ಅಲ್ಲೇ ಇದ್ದಿದ್ದರಿಂದ ಬುಹುಮಾನವಾಗಿ ಬಂದ ಡೈಮೆಂಡ್ ಉಂಗುರ ಈಗ ಸ್ವೀಕಾರ ಮಾಡಿದ್ದಾರೆ. ಉಂಗುರಗಳ ಮೇಲೆ ಪ್ರತಿಯೊಬ್ಬ ಆಟಗಾರನ ಹೆಸರಿನ ಮೊದಲಕ್ಷರ ಇರುತ್ತದೆ. ಅದರಂತೆ ಕೊಹ್ಲಿಯ ಉಂಗುರಿನ ಮೇಲೆ VK ಎಂದು ವಜ್ರಗಳಿಂದ ಜೋಡಣೆ ಮಾಡಲಾಗಿದೆ. ಈ ಉಂಗುರ ನೀಲಿ ಬಣ್ಣದಲ್ಲಿದ್ದು ಮಧ್ಯದಲ್ಲಿ ಬಿಸಿಸಿಐ ಲೋಗೋ ಇದೆ. ಆದರೆ ಇದರ ಬೆಲೆಯನ್ನು ಬಹಿರಂಗ ಮಾಡಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ