ಕಿಂಗ್ ಕೊಹ್ಲಿಯ ಬ್ಯಾಟ್ ಗಿಫ್ಟ್​ ಪಡೆದ ಆ ಯಂಗ್ ಪ್ಲೇಯರ್ ಯಾರು?

author-image
Bheemappa
Updated On
ಈ ಬಾರಿ ಕೊಹ್ಲಿ ಗತ್ತು ಬೇರೆ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!
Advertisment
  • ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವಾಗ ಬ್ಯಾಟ್​​ಗಾಗಿ ಬಂದ ಪ್ಲೇಯರ್
  • ವಿರಾಟ್ ಕೊಹ್ಲಿಯಿಂದ ಬ್ಯಾಟ್ ಪಡೆಯುವುದು ಎಲ್ಲರ ಮಹದಾಸೆ
  • ಕೊಹ್ಲಿಯ ಬ್ಯಾಟ್​ ಉಡುಗೊರೆಯಾಗಿ ಪಡೆದ ಯಂಗ್ ಪ್ಲೇಯರ್

ಕ್ರಿಕೆಟ್ ಲೋಕದಲ್ಲಿ ಆರ್​ಸಿಬಿಯ ಸ್ಟಾರ್ ಬ್ಯಾಟರ್​ ಕಿಂಗ್ ಕೊಹ್ಲಿಯಿಂದ ಏನಾದರೂ ಗಿಫ್ಟ್​ ಪಡೆಯಬೇಕು ಎನ್ನುವುದು ಪ್ರತಿ ಆಟಗಾರನ ಆಸೆ ಆಗಿರುತ್ತದೆ. ಅದರಂತೆ ಐಪಿಎಲ್​ ಪಂದ್ಯದ ವೇಳೆ ಯುವ ಆಟಗಾರನೊಬ್ಬ ಕೊಹ್ಲಿಯ ಬ್ಯಾಟ್​ ಅನ್ನು ಉಡುಗೊರೆಯಾಗಿ ಪಡೆದುಕೊಂಡು ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

ಪಂಜಾಬ್​ ಕಿಂಗ್ಸ್​ ವಿರುದ್ಧ ತವರಿನಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಲ್ಲನ್‌ಪುರದಲ್ಲಿ ಸೇಡನ್ನು ತೀರಿಸಿಕೊಂಡಿದೆ. ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್​ನಿಂದ ಆರ್​ಸಿಬಿ ಗೆಲುವಿನ ನಗು ಬೀರಿತು. ಪಂದ್ಯ ಮುಗಿದ ಮೇಲೆ ಆಟಗಾರರೆಲ್ಲ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಇದರ ನಡುವೆ ಯುವ ಆಟಗಾರ ಮುಷೀರ್​ ಖಾನ್, ವಿರಾಟ್ ಕೊಹ್ಲಿ ಬ್ಯಾಟ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಆರಂಭಿಕ ಬ್ಯಾಟರ್​ಗಳ ಸ್ಫೋಟಕ ಬ್ಯಾಟಿಂಗ್​.. ಗುಜರಾತ್​​ನ ಗಿಲ್​​ ಸೇನೆಗೆ ಮತ್ತೊಂದು ವಿಜಯ

publive-image

ಪಂಜಾಬ್​ ವಿರುದ್ಧದ ಪಂದ್ಯದ ಬಳಿಕ ಯುವ ಆಟಗಾರ ಮುಷೀರ್​ ಖಾನ್​ಗೆ ವಿರಾಟ್​​ ಕೊಹ್ಲಿ ಬ್ಯಾಟ್​ ಗಿಫ್ಟ್​ ಕೊಟ್ಟಿದ್ದಾರೆ. ಮುಲ್ಲನ್​ಪುರದಲ್ಲಿ ನಡೆದ ಪಂದ್ಯದ ಬಳಿಕ ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ್ದ ಕೊಹ್ಲಿ ಬಳಿ ಬ್ಯಾಟ್​ಗಾಗಿ ಮನವಿ ಮಾಡಿದ್ದರು. ಮುಷೀರ್​ ಮನವಿಗೆ ಸ್ಪಂದಿಸಿರುವ ವಿರಾಟ್ ಕೊಹ್ಲಿ ಬ್ಯಾಟ್​ ಗಿಫ್ಟ್​ ನೀಡಿದ್ದಾರೆ.

ಬ್ಯಾಟ್​ ಸಿಕ್ಕ ಸಂಭ್ರಮದಲ್ಲಿ ಮುಷೀರ್ ಫುಲ್ ಸಂತಸದಲ್ಲಿ​ ತೇಲಾಡಿದ್ದಾರೆ. ಇದರ ವಿಡಿಯೋವನ್ನ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ​ ಹಂಚಿಕೊಂಡಿದೆ. ಸದ್ಯ ಇದಕ್ಕೆ ಅಭಿಮಾನಿಗಳು ಕೊಹ್ಲಿಯಿಂದ ಬ್ಯಾಟ್ ಪಡೆದ ಅದೃಷ್ಟವಂತ ಎಂದು ಕಮೆಂಟ್ಸ್​ ಮಾಡುತ್ತಿದ್ದಾರೆ.

ಇನ್ನು ಮುಷೀರ್​ ಖಾನ್ ಅವರು, ಟೀಮ್ ಇಂಡಿಯಾದ ಬ್ಯಾಟರ್ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಆಗಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್​ ಕೇವಲ 30 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದೆ. ಈ ಹಿಂದೆ ಮುಷೀರ್​ ಖಾನ್, ರಿಂಕು ಸಿಂಗ್​ ಅವರಿಂದ ಬ್ಯಾಟ್​ ಅನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದರು.


">April 21, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment