/newsfirstlive-kannada/media/post_attachments/wp-content/uploads/2025/04/KL_RAHUL_KOHLI-1.jpg)
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಏಪ್ರಿಲ್​ 27 ರಂದು ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ತವರಿನಲ್ಲಿ ಸ್ಟಾರ್​ ಕ್ರಿಕೆಟರ್​​ ಕನ್ನಡಿಗನಿಂದ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಆರ್​ಸಿಬಿಗೆ ಈಗ ಅದರ ಸೇಡನ್ನು ತೀರಿಸಿಕೊಳ್ಳುವ ಸಮಯ ಬಂದಿದೆ. ಕಿಂಗ್​ ಕೊಹ್ಲಿ ತನ್ನ ತವರಲ್ಲಿ ಅದನ್ನು ಮಾಡಿ ತೋರಿಸ್ತಾರಾ ಎಂದು ಆರ್​ಸಿಬಿ ಫ್ಯಾನ್ಸ್​ ಕೌತುಕದಿಂದಿದ್ದಾರೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್​ 10 ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗೆ ಆರ್​ಸಿಬಿ ಹೀನಾಯವಾಗಿ ಸೋತಿತ್ತು. ಆರ್​ಸಿಬಿಯ 163 ಟಾರ್ಗೆಟ್​ ಚೇಸ್​ ಮಾಡಿದ್ದ ಡೆಲ್ಲಿ 169 ರನ್​ ಗಳಿಸಿ, 6 ವಿಕೆಟ್​ಗಳ ಗೆಲುವು ಪಡೆದಿತ್ತು. ತವರಿನ ನೆಲದಲ್ಲಿ ಆರ್​ಸಿಬಿಯ 2ನೇ ಅವಮಾನ ಇದಾಗಿತ್ತು. ಗೆಲ್ಲಬಹುದಾದ ಪಂದ್ಯ ಆರ್​ಸಿಬಿ ಕೈಚೆಲ್ಲಿತ್ತು. ಆದರೆ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿದ್ದ ಕೆ.ಎಲ್​ ರಾಹುಲ್​ ಡೆಲ್ಲಿ​ ಪರ ಅದ್ಧೂರಿ ಸೆಲೆಬ್ರೆಷನ್ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/04/KL_RAHUL.jpg)
ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಘರ್ಜಿಸಿದ್ದ ಕನ್ನಡಿಗ ಕೆ.ಎಲ್​ ರಾಹುಲ್ ಸೋಲುವ ಮ್ಯಾಚ್​ ಅನ್ನು ಆರ್​ಸಿಬಿಯಿಂದ ಕಸಿದುಕೊಂಡಿದ್ದರು. 4ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 7 ಬೌಂಡರಿ, 6 ಅದ್ಭುತವಾದ ಸಿಕ್ಸರ್​ಗಳಿಂದ 93 ರನ್​ ಸಿಡಿಸುವ ಮೂಲಕ ಆರ್​ಸಿಬಿಗೆ ಟಕ್ಕರ್ ಕೊಟ್ಟಿದ್ದರು. ವಿಶೇಷ ಎಂದ್ರೆ ಗೆದ್ದ ತಕ್ಷಣ ಮೈದಾನದಲ್ಲೇ ಬ್ಯಾಟ್​ನಿಂದ ಒಂದು ವೃತ್ತ ಕೊರೆದು ಅದರ ನಡುವೆ ಬ್ಯಾಟ್​ನಿಂದ ಗುದ್ದಿ ಇದು ನನ್ನ ಹೋಮ್​​ ಗ್ರೌಂಡ್ ಎಂದು ಕಾಂತಾರ ಸಿನಿಮಾ ಸ್ಟೈಲ್​ನಲ್ಲಿ ಕೆ.ಎಲ್ ರಾಹುಲ್ ಸಂಭ್ರಮಿಸಿದ್ದರು.
/newsfirstlive-kannada/media/post_attachments/wp-content/uploads/2025/04/KL-RAHUL-3.jpg)
ಅದರಂತೆ ನಾಳೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆಯುವ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ಕಿಂಗ್​ ಕೊಹ್ಲಿಯ ಹೋಮ್​ ಗ್ರೌಂಡ್​ ಆಗಿದೆ. ಕೊಹ್ಲಿ ಆಡಿ ಬೆಳೆದ ಪಿಚ್​. ಕನ್ನಡಿಗನಂತೆ ಕೊಹ್ಲಿ ಕೂಡ ಪಂದ್ಯ ಗೆಲ್ಲಿಸಿ ಅದರಂತೆ ಸಂಭ್ರಮಿಸ್ತಾರಾ ಎಂದು ಆರ್​​ಸಿಬಿ ಫ್ಯಾನ್ಸ್​ ಕನವರಿಕೆ ಆಗಿದೆ. ಅಂದು ಆರ್​​ಸಿಬಿ ಸೋತಾಗ ಅಭಿಮಾನಿಗಳು ಕೂಡ ವಿರಾಟ್​ ಯಾವುದನ್ನು ಇಟ್ಟುಕೊಳ್ಳಲ್ಲ, ದೆಹಲಿಯಲ್ಲಿ ನಡೆಯೋ ಪಂದ್ಯದಲ್ಲಿ ವಾಪಸ್ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆ ಸಮಯ ಬಂದಿದ್ದು ಏನಾಗುತ್ತೆಂದು ಸ್ವಲ್ಪ ಕಾಯಬೇಕು ಅಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us