newsfirstkannada.com

ಟೀಮ್ ಇಂಡಿಯಾಕ್ಕೆ ಶಾಕ್ ಕೊಟ್ಟ ಕಿಂಗ್ ಕೊಹ್ಲಿ.. ಮತ್ತೊಮ್ಮೆ ಡಕೌಟ್

Share :

Published June 24, 2024 at 8:25pm

Update June 24, 2024 at 11:27pm

    ಭಾರತಕ್ಕೆ ಭಾರೀ ನಿರಾಸೆ ಮೂಡಿಸಿದ ವಿರಾಟ್​ ಕೊಹ್ಲಿ ಬ್ಯಾಟಿಂಗ್

    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ T20 ವಿಶ್ವಕಪ್​ ಪಂದ್ಯಾವಳಿ

    ವಿರಾಟ್​ ಕೊಹ್ಲಿ ಔಟ್ ಆಗಿದ್ದರಿಂದ ಅಭಿಮಾನಿ ಬಳಗದಲ್ಲಿ ಬೇಸರ

ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿರುವ T20 ವಿಶ್ವಕಪ್​ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರನ್​ ಮಷಿನ್ ಎಂದೇ ಹೆಸರು ಪಡೆದಿರುವ ವಿರಾಟ್​​ ಕೊಹ್ಲಿಯವರು ಮತ್ತೊಮ್ಮೆ ಡಕೌಟ್ ಆಗಿದ್ದಾರೆ.

ಇದನ್ನೂ ಓದಿ: ಕ್ಯಾಸಿನೊ ಗೇಮ್​​ನಲ್ಲಿ ಕೋಟಿ ಕೋಟಿ ಹಣ ಗೆದ್ದ.. ಖುಷಿಯಲ್ಲಿ ಇರುವಾಗಲೇ ಕಾರ್ಡಿಕ್ ಅರೆಸ್ಟ್, ದುರಂತ ಸಾವು

ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್​ನ ಡೇರೆನ್ ಸೆಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​​ ಗೆದ್ದುಕೊಂಡ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಓಪನರ್​ ಆಗಿ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಲಯ ಕಂಡುಕೊಳ್ಳುವಷ್ಟರಲ್ಲೇ ಕೊಹ್ಲಿ ಡಕೌಟ್ ಆಗಿದ್ದಾರೆ. ಇದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. 5 ಬಾಲ್ ಎದುರಿಸಿದ ವಿರಾಟ್​ ಒಂದು ರನ್​ ಕೂಡ ಬಾರಿಸಿದೆ ಔಟ್ ಆಗಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿಂದು ಯಾರಾಗ್ತಾರೆ ಮ್ಯಾಚ್ ವಿನ್ನರ್​..? ಎಲ್ಲರ ಕಣ್ಣು ಈ ಆಲ್​ರೌಂಡರ್ ಮೇಲೆ!

2ನೇ ಓವರ್​ ಮಾಡುತ್ತಿದ್ದ ಆಸಿಸ್​ನ ಹಜಲ್​ವುಡ್​ನ ಓವರ್​ನಲ್ಲಿ ವಿರಾಟ್​ ಕೊಹ್ಲಿ ಬಿಗ್ ಶಾಟ್ ಬಾರಿಸಿದರು. ಆದರೆ ಆ ಬಾಲ್​ ನೇರ ಹೋಗಿ ಟೀಮ್ ಡೇವಿಡ್ ಕೈ ಸೇರಿತು. ಇದರಿಂದ ಟೀಮ್ ಇಂಡಿಯಾ ಕೊಹ್ಲಿಯ ಮಹತ್ವದ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ವಿರಾಟ್​ ಕೊಹ್ಲಿ ಈ ಟೂರ್ನಿಯಲ್ಲಿ ಡಕೌಟ್ ಆಗುತ್ತಿರುವುದು ಇದು 2ನೇ ಬಾರಿ ಆಗಿದೆ. ಸದ್ಯ ರೋಹಿತ್, ಪಂತ್ ಬ್ಯಾಟಿಂಗ್ ಮಾಡುತ್ತಿದ್ದು 3 ಓವರ್​​ಗೆ 35 ರನ್​​ನಿಂದ ಭಾರತ ಒಂದು ವಿಕೆಟ್ ಕಳೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾಕ್ಕೆ ಶಾಕ್ ಕೊಟ್ಟ ಕಿಂಗ್ ಕೊಹ್ಲಿ.. ಮತ್ತೊಮ್ಮೆ ಡಕೌಟ್

https://newsfirstlive.com/wp-content/uploads/2024/06/VIRAT_KOHLI-16.jpg

Load More