/newsfirstlive-kannada/media/post_attachments/wp-content/uploads/2024/11/Kohli_RCB-Match.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲೋ ನಿರೀಕ್ಷೆಯಲ್ಲಿದೆ. ಹಾಗಾಗಿ ವರ್ಷದ ಕೊನೆಗೆ ಎದುರಾಗಲಿರೋ ಮೆಗಾ ಆಕ್ಷನ್ಗೆ ಮುನ್ನ ಆರ್ಸಿಬಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್‌ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್‌ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಮೂವರನ್ನು ಹೊರತುಪಡಿಸಿ ಆರ್‌ಸಿಬಿ ಉಳಿದ ಎಲ್ಲರಿಗೂ ಗೇಟ್ಪಾಸ್ ನೀಡಿದೆ.
ಚರ್ಚೆಗೆ ತೆರೆ ಎಳೆದ ಕೊಹ್ಲಿ
ವಿರಾಟ್ ಕೊಹ್ಲಿ ಐಪಿಎಲ್ಗೆ ಗುಡ್ ಬೈ ಹೇಳಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಇತ್ತೀಚೆಗೆ ಸ್ವತಃ ಕೊಹ್ಲಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 20 ವರ್ಷಗಳ ಕಾಲ ಆಡುವ ಆಸೆ ಇದೆ ಎಂದಿರೋ ಕೊಹ್ಲಿ ಇನ್ನೂ ಕನಿಷ್ಠ 3 ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
ಕೊಹ್ಲಿ ಏನಂದ್ರು?
ಈ ಬಗ್ಗೆ ಮಾತಾಡಿದ ಕೊಹ್ಲಿ ಅವರು, ಇನ್ನೂ ಮೂರು ವರ್ಷ ಆದ್ರೆ ನಾನು ಆರ್‌ಸಿಬಿ ಪರ 20 ವರ್ಷ ಪೂರ್ಣಗೊಳಿಸಿದಂತಾಗುತ್ತದೆ. ಇದೊಂದು ಅದ್ಭುತ ಕ್ಷಣ. ಐಪಿಎಲ್ ಸುದೀರ್ಘ ಜರ್ನಿಯಲ್ಲಿ ಒಂದೇ ತಂಡದಲ್ಲಿ ಆಡುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಎಂದರು.
ನಾನು ಆರ್‌ಸಿಬಿ ಬಿಟ್ಟು ಬೇರೆ ಯಾವ ತಂಡದಲ್ಲೂ ಆಡಲು ಸಾಧ್ಯವಿಲ್ಲ. ಈಗ ಮತ್ತೊಮ್ಮೆ ಆರ್‌ಸಿಬಿ ತಂಡದಲ್ಲಿ ರೀಟೈನ್ ಆಗಿದ್ದೇನೆ. ಈ ಬಾರಿ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದ್ದೇನೆ. ಮುಂದಿನ 3 ವರ್ಷಗಳಲ್ಲಿ ಖಂಡಿತ ಪ್ರಶಸ್ತಿ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ: ಐಪಿಎಲ್ 2025: ಆರ್ಸಿಬಿಯಿಂದ ಮ್ಯಾಕ್ಸಿಯನ್ನು ಕೈ ಬಿಡಲು ಅಸಲಿ ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ