/newsfirstlive-kannada/media/post_attachments/wp-content/uploads/2024/05/Dhoni-6-1.jpg)
ಮೇ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್​ಗೆ ಗ್ರ್ಯಾಂಡ್ ಎಂಟ್ರಿ ನೀಡಿತು. ಬೆಂಗಳೂರು ಪ್ಲೇ ಆಫ್ ತಲುಪಿದ ನಾಲ್ಕನೇ ಮತ್ತು ಕೊನೆಯ ತಂಡವಾಯಿತು.
ಗೆದ್ದ ಸಂಭ್ರಮದಲ್ಲಿ ಆರ್​ಸಿಬಿ ಆಟಗಾರರು ಮೈದಾನದಲ್ಲಿ ಸಂಭ್ರಮದಲ್ಲಿ ಮುಳುಗಿದ್ದರು. ಆರ್​ಸಿಬಿ ಪ್ಲೇಯರ್ಸ್​ ಸಂತಸದಲ್ಲಿ ಕುಣಿದಾಡಿದರೆ, ಅತ್ತ ಚೆನ್ನೈ ಪ್ಲೇಯರ್ಸ್​ ಅವರಿಗೆ ಹಸ್ತಲಾಘವ ಮಾಡಲು ಸಾಲಾಗಿ ನಿಂತಿದ್ದರು. ಎದುರಾಳಿ ತಂಡಕ್ಕೆ ಹ್ಯಾಂಡ್​ ಶೇಕ್ ಮಾಡುವ ಮೂಡ್​ನಲ್ಲಿ ಇಲ್ಲದಿರೋದನ್ನು ಕಂಡ ಧೋನಿ, ನೇರವಾಗಿ ಡ್ರೆಸ್ಸಿಂಗ್ ರೂಮ್​ಗೆ ಹೋಗಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ನಂತರ ಆರ್​​ಸಿಬಿ ಹೀರೋ ವಿರಾಟ್ ಕೊಹ್ಲಿ.. ಚೆನ್ನೈ ಸೂಪರ್ ಕಿಂಗ್ಸ್‌ನ ಡ್ರೆಸ್ಸಿಂಗ್ ರೂಮ್‌ಗೆ ಹೋಗಿದ್ದಾರೆ. ಅಲ್ಲಿ ಎಂಎಸ್ ಧೋನಿಗೆ ಹಸ್ತಲಾಘವ ಮಾಡಿದ್ದಾರೆ. ಇದೇ ವೇಳೆ ಕೊಹ್ಲಿಗೆ ಧೋನಿ, ‘ನೀನು ಫೈನಲ್​ಗೆ ಹೋಗಿ ಅದನ್ನೂ ಗೆಲ್ಲಬೇಕು’ ಎಂದು ಶುಭಾಶಯ ಕೋರಿದ್ದಾರೆ. ವಿರಾಟ್ ಕೊಹ್ಲಿಗೆ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲಿ ಎಂದು ಧೋನಿ ಶುಭ ಹಾರೈಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ಲೇ-ಆಫ್ ಪ್ರವೇಶ ಮಾಡಿರುವ ಆರ್​ಸಿಬಿ ತಂಡವು ನಾಳೆ ರಾಜಸ್ಥಾನ್ ರಾಯಲ್ಸ್ ಜೊತೆ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಅಲ್ಲಿ ಗೆದ್ದರೆ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಆರ್​ಸಿಬಿ ಕ್ವಾಲಿಫೈಯರ್​-2 ಪ್ರವೇಶ ಮಾಡಿ ಅಲ್ಲಿಯೂ ಗೆದ್ದು ಫೈನಲ್ ನಲ್ಲಿ ಕಪ್ ಗೆಲ್ಲಲಿ ಅನ್ನೋದೇ ಆರ್​ಸಿಬಿ ಅಭಿಮಾನಿಗಳ ಆಶಯವಾಗಿದೆ.
https://twitter.com/SaffronSurge3/status/1792083183187718157
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us