newsfirstkannada.com

ವಿರಾಟ್ ಕೊಹ್ಲಿ ಹೇರ್ ಕಟ್‌ಗೆ ಎಷ್ಟು ಲಕ್ಷ ರೂ. ಪಾವತಿಸುತ್ತಾರೆ.. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಹೇಳಿದ್ದೇನು?

Share :

Published April 7, 2024 at 3:43pm

    ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಂ ಹಕೀಮ್ ಜೊತೆ ವಿರಾಟ್‌ ಕೊಹ್ಲಿ ಚರ್ಚೆ

    ಯಾವಾಗಲೂ ತಮ್ಮದೇ ವಿಶೇಷ ಲುಕ್‌ನಲ್ಲಿ ಮಿಂಚುವ ವಿರಾಟ್‌ ಕೊಹ್ಲಿ

    ಹೃತಿಕ್ ರೋಷನ್, ರಣಬೀರ್ ಕಪೂರ್, ಸಚಿನ್‌ಗೂ ಇವ್ರೇ ಹೇರ್‌ ಸ್ಟೈಲಿಸ್ಟ್‌!

RCB ಮಾಜಿ ಕ್ಯಾಪ್ಟನ್‌, ಟೀಂ ಇಂಡಿಯಾದ ಕಿಂಗ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲೂ ಅಬ್ಬರಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್‌ಗಾಗಿಯೇ ವಿರಾಟ್‌ ಕೊಹ್ಲಿ ಸ್ಪೆಷಲ್ ಹೇರ್ ಕಟ್‌ ಮಾಡಿಸಿಕೊಂಡು ಮಿಂಚುತ್ತಿದ್ದಾರೆ. ಐಪಿಎಲ್‌ನಲ್ಲಿ ಹೇರ್ ಕಟ್ ಮಾಡಲು ವಿರಾಟ್ ಕೊಹ್ಲಿ ಎಷ್ಟು ಖರ್ಚು ಮಾಡ್ತಾರೆ ಅನ್ನೋ ಅಂಶ ಬಹಿರಂಗವಾಗಿದೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡದ ವಿರಾಟ್‌ ಕೊಹ್ಲಿ ಯಾವಾಗಲೂ ತಮ್ಮದೇ ವಿಶೇಷ ಲುಕ್‌ನಲ್ಲಿ ಅಭಿಮಾನಿಗಳನ್ನ ಸೆಳೆಯುತ್ತಾರೆ. ಅವರ ಸ್ಪೆಷಲ್ ಲುಕ್‌, ಮ್ಯಾನರಿಸಂನಿಂದ ಯಾವಾಗಲೂ ಗಮನ ಸೆಳೆಯುತ್ತಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಹೇರ್‌ ಸ್ಟೈಲ್‌ನಿಂದಾಗ ಸುದ್ದಿಯಾಗಿದ್ದಾರೆ. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ವಿರಾಟ್ ಕೊಹ್ಲಿ ಹೇರ್‌ ಕಟಿಂಗ್‌ಗೆ ಎಷ್ಟು ಹಣ ಪಾವತಿಸುತ್ತಾರೆ ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನ್ಯೂ ಹೇರ್ ಸ್ಟೈಲ್​, ನ್ಯೂ ಲುಕ್​ನಲ್ಲಿ ಮೈದಾನಕ್ಕೆ ಇಳಿದ RCB ಸ್ಟಾರ್.. ಸ್ಮಾರ್ಟ್​​ ವಿರಾಟ್ ಕೊಹ್ಲಿ​!

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಂ ಹಕೀಮ್ ಅವರು ಬಾಲಿವುಡ್ ತಾರೆಯರು, ಪ್ರಸಿದ್ಧ ಕ್ರೀಡಾಪಟುಗಳ ವಿಭಿನ್ನ ಹೇರ್‌ ಕಟಿಂಗ್‌ಗೆ ಫೇಮಸ್ ಆದವರು. ಈ ಅಲೀಮ್ ಹಕೀಮ್ ಅವರು ಬಾಲಿವುಡ್‌ನ ಹೃತಿಕ್ ರೋಷನ್, ರಣಬೀರ್ ಕಪೂರ್ ಹಾಗೂ ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

ಅಲೀಂ ಹಕೀಮ್ ಅವರು ಸಂದರ್ಶನವೊಂದರಲ್ಲಿ ನಾನು ಸೆಲೆಬ್ರಿಟಿಗಳ ಹೇರ್‌ ಕಟಿಂಗ್‌ಗೆ ವಿಧಿಸುವ ಶುಲ್ಕ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಶುಲ್ಕ 1 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಎಂದಿದ್ದಾರೆ.
ಈ ಬಾರಿ ಐಪಿಎಲ್‌ಗೆ ವಿರಾಟ್ ಕೊಹ್ಲಿ ಅವರಿಗೆ ಅಲೀಂ ಹಕೀಮ್ ಅವರೇ ಹೇರ್ ಕಟ್‌ ಮಾಡಿದ್ದಾರೆ. ಕೊಹ್ಲಿ ಹೇರ್ ಸ್ಟೈಲ್‌ಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳಿರುತ್ತವೆ. ಅವರ ಜೊತೆ ಚರ್ಚೆ ನಡೆಸಿದ ಮೇಲೆ ವಿಭಿನ್ನವಾಗಿ ಕಾಣಲು ಪ್ರಯತ್ನಿಸುತ್ತೇವೆ. ಸದ್ಯ ವಿರಾಟ್ ಕೊಹ್ಲಿ ಅವರ ಹೇರ್ ಸ್ಟೈಲ್‌ಗೆ ಹಕೀಮ್ ಅವರು ಬರೋಬ್ಬರಿ 1 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ ಹೇರ್ ಕಟ್‌ಗೆ ಎಷ್ಟು ಲಕ್ಷ ರೂ. ಪಾವತಿಸುತ್ತಾರೆ.. ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಹೇಳಿದ್ದೇನು?

https://newsfirstlive.com/wp-content/uploads/2024/04/Virat-kohli-Hair-Cut-Cost.jpg

Load More