/newsfirstlive-kannada/media/post_attachments/wp-content/uploads/2025/04/KOHLI-14.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮತ್ತೊಂದು ಅರ್ಧಶತಕ ದಾಖಲಿಸಿದ್ದಾರೆ. ರಾಜಸ್ಥಾನ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಫೋರ್ ಬಾರಿಸುವ ಮೂಲಕ ಹಾಫ್ಸೆಂಚುರಿ ಬಾರಿಸಿದರು.
ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ರಿಯಾನ್ ಪರಾಗ್ ಫೀಲ್ಡಿಂಗ್ ಆಯ್ಕೆ ಮಾಡಿದರು. ತವರಿನಲ್ಲಿ ಮತ್ತೆ ಟಾಸ್ ಕೈಕೊಟ್ಟಿದ್ದರಿಂದ ಆರ್ಸಿಬಿ ಪರ ಓಪನರ್ ಆಗಿ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಬ್ಯಾಟಿಂಗ್ಗೆ ಆಗಮಿಸಿದರು. ಆದರೆ 26 ರನ್ ಗಳಿಸಿ ಆಡುವಾಗ ಸಾಲ್ಟ್ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ವಿಸ್ಫೋಟಕ ಬ್ಯಾಟರ್ನಿಂದ ಆರ್ಸಿಬಿಗೆ ಬಿಗ್ ಶಾಕ್.. ಚಿನ್ನಸ್ವಾಮಿಯಲ್ಲಿ ಮತ್ತೆ ಕೈಕೊಟ್ಟ ಫಿಲ್ ಸಾಲ್ಟ್
ಆದರೆ ಇನ್ನೊಂದು ಕಡೆಗೆ ಬ್ಯಾಟಿಂಗ್ ಮುಂದುವರೆಸಿದ್ದ ಕಿಂಗ್ ಕೊಹ್ಲಿ, ರಾಜಸ್ಥಾನ್ ರಾಯಲ್ಸ್ ಬೌಲರ್ಗಳನ್ನು ಚೆಂಡಾಡಿದರು. ಇದರಿಂದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆರ್ಸಿಬಿಗೆ ನೆರವಾಗಿದ್ದಾರೆ. 32 ಎಸೆತಗಳಲ್ಲಿ ಒಂದೂ ಸಿಕ್ಸ್ ಬಾರಿಸದೇ ಕೇವಲ 8 ಬೌಂಡರಿಗಳನ್ನು ಬಾರಿಸುವ ಮೂಲಕ 51 ರನ್ ಗಳಿಸಿದರು. ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 51 ರನ್ ಗಳಿಸಿದರು.
ಈ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪರ್ಫಾಮೆನ್ಸ್ನಲ್ಲಿರುವ ಕಿಂಗ್ ಕೊಹ್ಲಿಯ ಇದು 5ನೇ ಅರ್ಧಶತಕವಾಗಿದೆ. ಕಳೆದ 9 ಇನ್ನಿಂಗ್ಸ್ನಲ್ಲಿ 5 ಬಾರಿ 50 ಪ್ಲಸ್ ರನ್ಗಳನ್ನು ವಿರಾಟ್ ಕೊಹ್ಲಿ ಗಳಿಸಿದ್ದಾರೆ. ಇದು ಅಲ್ಲದೇ ಟಿ20 ಕ್ರಿಕೆಟ್ನಲ್ಲಿ ಡೇವಿಡ್ ವಾರ್ನರ್ಗಿಂತ ವಿರಾಟ್ ಕೊಹ್ಲಿ ಅವರು 50 ಪ್ಲಸ್ ರನ್ ಗಳಿಸಿದವರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ