6, 6, 6, 6, 6; ಚೆನ್ನೈ ಬೌಲರ್​ಗಳಿಗೆ ಚಳಿ ಬಿಡಿಸಿದ ಕಿಂಗ್​ ಕೊಹ್ಲಿ.. ಮತ್ತೊಂದು ಅರ್ಧಶತಕ ಸಿಡಿಸಿದ ವಿರಾಟ್

author-image
Bheemappa
Updated On
ಬೆಂಗಳೂರಲ್ಲಿ ‘ವಿರಾಟ್‌’ ವೀರಾವೇಷದ ಆನ್ಸರ್​​.. RCB ‘ಸಿಕ್ಸರ್​​ ಕಿಂಗ್​​’ ಮುಂದೆ ಚೆನ್ನೈ ಚಿಂದಿ!
Advertisment
  • ಆರ್​ಸಿಬಿ ಪರ ಓಪನಿಂಗ್ ಬಂದ ಇಬ್ಬರು ಬ್ಯಾಟರ್ಸ್​ ಹಾಫ್​ಸೆಂಚುರಿ
  • ಪಂದ್ಯದಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್​ಗಳಿಂದ ದಂಡಿಸಿದ ವಿರಾಟ್
  • ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠ ಬ್ಯಾಟಿಂಗ್ ಮಾಡುತ್ತಿರುವ ಕಿಂಗ್ ಕೊಹ್ಲಿ​​

ಬೆಂಗಳೂರಿನಲ್ಲಿ ನಡೆಯುತ್ತಿರುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್​ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅತ್ಯದ್ಭುತವಾದ ಅರ್ಧಶತಕ ಬಾರಿಸಿದ್ದಾರೆ.

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಎಂ.ಎಸ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿದರು. ಪಂದ್ಯದಲ್ಲಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು ವಿರಾಟ್​ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್​ ಓಪನರ್​ಗಳಾಗಿ ಕ್ರೀಸ್​ಗೆ ಆಗಮಿಸಿ ಭರ್ಜರಿ ಓಪನಿಂಗ್ ಪಡೆದರು.

ಇದನ್ನೂ ಓದಿ: RCB ಅಧ್ಯಾಯದಲ್ಲಿ ಯುವ ಆಟಗಾರ ಆರ್ಭಟ.. ಜಾಕೋಬ್ ಬೆಥೆಲ್ ಸಿಡಿಲಬ್ಬರದ ಅರ್ಧಶತಕ

publive-image

ಪಂದ್ಯದಲ್ಲಿ ಆರ್ಭಟದ ಬ್ಯಾಟಿಂಗ್ ಮಾಡಿದ ಆರ್​​ಸಿಬಿಯ ಸ್ಟಾರ್ ಬ್ಯಾಟ್ಸ್​ಮನ್​ ಚೆನ್ನೈ ಬೌಲರ್​ಗಳನ್ನು ಮೂಲೆ ಗುಂಪು ಮಾಡಿದರು. ಹೀಗಾಗಿಯೇ ಕೊಹ್ಲಿ ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​ಗಳಿಂದ ಅಮೋಘವಾದ ಅರ್ಧಶತಕ ಗಳಿಸಿದರು. 5 ಬೌಂಡರಿ ಹಾಗೂ 5 ಸಿಕ್ಸರ್​ಗಳಿಂದ 62 ರನ್​ ಗಳಿಸಿ ಆಡುವಾಗ ಸ್ಯಾಮ್ ಕರನ್​ ಬೌಲಿಂಗ್​ನಲ್ಲಿ ಕಲಿಲ್ ಅಹ್ಮದ್​ಗೆ ಕ್ಯಾಚ್​ ಕೊಟ್ಟು ವಿರಾಟ್​ ಕೊಹ್ಲಿ ಹೊರ ನಡೆದರು.

ಕೊಹ್ಲಿಗೂ ಮೊದಲು ಔಟ್ ಆದ ಆರ್​ಸಿಬಿಯ ಯುವ ಓಪನರ್ ಜಾಕೋಬ್ ಬೆಥೆಲ್ ಕೂಡ ಹಾಫ್​ಸೆಂಚುರಿ ಬಾರಿಸಿದ್ದರು. ತವರಿನ ನೆಲದಲ್ಲಿ ಚೆನ್ನೈ ಬೌಲರ್​ಗಳನ್ನು ಮನಬಂದಂತೆ ಚಚ್ಚಿದ ಬೆಥೆಲ್ ಅರ್ಧಶತಕ ಸಿಡಿಸಿದರು. ಮೊದಲ ಮ್ಯಾಚ್​ನಲ್ಲಿ ವಿಫಲರಾಗಿದ್ದ ಬೆಥೆಲ್, 2ನೇ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಚೆನ್ನೈ ವಿರುದ್ಧ 28 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಅದ್ಭುತವಾದ ಬೌಂಡರಿಗಳು, 2 ಅಮೋಘವಾದ ಸಿಕ್ಸರ್​ನಿಂದ 53 ರನ್​ಗಳನ್ನು ಬಾರಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment