newsfirstkannada.com

ಬಿಕ್ಕಿಬಿಕ್ಕಿ ಕಣ್ಣೀರಿಟ್ಟ​ ಪಾಂಡ್ಯ.. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ

Share :

Published June 30, 2024 at 12:14pm

  ಹರಿಣಗಳನ್ನು ಬೇಟೆಯಾಡಿದ ಟೀಮ್ ಇಂಡಿಯನ್​ ಟೈಗರ್ಸ್

  ಕೊನೆಗೂ ಫಲಿಸಿತು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ

  ಕಪ್​ ಗೆಲ್ಲಿಸಿ ನೇರವಾಗಿ ಪತ್ನಿ ರಿತಿಕಾ ಬಳಿ ತೆರಳಿದ ಹಿಟ್​​ಮ್ಯಾನ್

ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದೆ. ಐಸಿಸಿ ಇವೆಂಟ್​ನಲ್ಲಿ ಕೊನೆಗೂ ಅದೃಷ್ಟ ಟೀಮ್​ ಇಂಡಿಯಾದ ಕೈಹಿಡಿದಿದೆ. ICC ಟ್ರೊಫಿ ಗೆಲ್ಲಲಾಗದ ಕೊರಗಿಗೆ ಫುಲ್​ ಸ್ಟಾಫ್​ ಬಿದ್ದಿದೆ. ವೆಸ್ಟ್​ ಇಂಡೀಸ್​​ನ ಬಾರ್ಬಡೋಸ್​ನಲ್ಲಿ ಹರಿಣಗಳ ಬೇಟೆಯಾಡಿದ ಇಂಡಿಯನ್​ ಟೈಗರ್ಸ್, ಚುಟುಕು ಚಾಂಪಿಯನ್​ ಆಗಿದ್ದಾರೆ. ಇಷ್ಟೇ ಅಲ್ಲ, ಭರ್ಜರಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ಬಾರ್ಬಡೋಸ್​ನಲ್ಲಿ ಪಂದ್ಯ ನಡೆಯುತ್ತಾ ಅನ್ನೋ ಡೌಟ್​ ಕಾಡಿತ್ತು. ಆ ಬಳಿಕ ಭಾರತೀಯ ಅಭಿಮಾನಿಗಳನ್ನ ಟೀಮ್ ಇಂಡಿಯಾ ಗೆಲ್ಲುತ್ತ ಅನ್ನೋ ಅನುಮಾನ ಶುರುವಾಗಿತ್ತು. ಅಂತಿಮವಾಗಿ ಫಲಿಸಿದ್ದು ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ. ಬಾರ್ಬಡೋಸ್​ನಲ್ಲಿ ಆಫ್ರಿಕನ್ಸ್​ ಬೇಟೆಯಾಡಿದ ಟೀಮ್​ ಇಂಡಿಯನ್ಸ್​ ಟಿ20 ವಿಶ್ವಕಪ್​ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಹಾರ್ದಿಕ್​ ಪಾಂಡ್ಯ..!

ಪಂದ್ಯದಲ್ಲಿ ಕೊನೆಯ ಓವರ್​ ಬೌಲಿಂಗ್​ ಮಾಡಿದ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ಗೆದ್ದಿದ್ದೇ ಗೆದ್ದಿದ್ದು ಬಿಕ್ಕಿಬಿಕ್ಕಿ ಕಣ್ಣೀರಿಟ್ರು.

ರೋಹಿತ್​ಗೆ ಪತ್ನಿಯ ಪ್ರೀತಿಯ ಅಪ್ಪುಗೆ..!

ಕಪ್​ ಗೆಲ್ಲಿಸಿ ಕೊಟ್ಟ ರೋಹಿತ್​ ಶರ್ಮಾ ನೇರವಾಗಿ ತೆರಳಿದ್ದು ಪತ್ನಿ ರಿತಿಕಾ ಬಳಿ. ಅಂದು ಏಕದಿನ ವಿಶ್ವಕಪ್​ ಸೋತಾಗ ಸಂತೈಸಿದ್ದ ಪತ್ನಿ ಬಳಿಕ ಸಂಭ್ರಮ ಹಂಚಿಕೊಂಡರು.

ವಿಡಿಯೋ ಕಾಲ್​ ಮಾಡಿ ವಿರಾಟ್​ ಭಾವುಕ.!

ಅಗ್ರೆಸ್ಸಿವ್​ ಲುಕ್​ ಸದಾ ಕಾಣಿಸಿಕೊಳ್ಳೋ ಕಿಂಗ್​ ಕೊಹ್ಲಿಯ ಕಣ್ಣಂಚಲ್ಲೂ ನಿನ್ನೆ ನೀರು ಜಿನುಗಿದ್ವು. ಅಂದ್ಹಾಗೆ ಅದು ಕಣ್ಣೀರಲ್ಲ.. ಆನಂದ ಭಾಷ್ಪ.. T20 ವರ್ಲ್ಡ್​​​ಕಪ್​ ಗೆದ್ದ ಮೇಲೆ ದ್ರಾವಿಡ್​​ ನೋಡಿ ಎಲ್ಲರೂ ಶಾಕ್ ಆದರು​. ಏಕೆಂದರೆ ಅಷ್ಟೊಂದು ಅಗ್ರೆಸ್ಸಿವ್​ ಆಗಿ ರಾಹುಲ್ ದ್ರಾವಿಡ್ ಅವರು ಸಂಭ್ರಮಿಸಿರಲಿಲ್ಲ. ರೋಹಿತ್ ಬಳಗ ಕಪ್ ಗೆಲ್ಲುತ್ತಿದ್ದಂತೆ ದ್ರಾವಿಡ್​ ಬಿಗ್ ಸೆಲೆಬ್ರೆಷನ್ ಮಾಡಿದರು. ಇದೇ ವೇಳೆ ಹೆಡ್​ಮಾಸ್ಟರ್​ನ, ತಂಡದ ಆಟಗಾರರೆಲ್ಲ ಎತ್ತಾಡಿದರು.

ಇದನ್ನೂ ಓದಿ: ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್​..!

ವಿಶ್ವಕಪ್​ ಗೆಲುವಿನೊಂದಿಗೆ ರಾಹುಲ್​ ದ್ರಾವಿಡ್​ರ ಕೋಚ್​​ ಅವಧಿ ಕೂಡ ಅಂತ್ಯಕಂಡಿದೆ. ನಿರ್ಗಮಿಸ್ತಿರೋ ಹೆಡ್​​ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್​, ಮೈದಾನದಲ್ಲೇ ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು. ಟ್ರೋಫಿ ಕೈಗೆ ಸಿಕ್ಕ ಬಳಿಕ ಆಟಗಾರರ​ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲಿ ಸಖತ್​ ಸ್ಟೆಪ್ಸ್​ ಹಾಕಿ ಮಿಂಚಿದರು. ಆಟಗಾರರು ಮಾತ್ರವಲ್ಲ.. ಇಡೀ ಭಾರತವೇ ಸಂತಸದ ಕಡಲಲ್ಲಿ ಮುಳುಗಿದೆ. ಸಂಭ್ರಮದಲ್ಲಿ ತೇಲಾಡ್ತಿದೆ. ಒಂದು ಟ್ರೋಫಿ ಗೆಲುವು ಅಂತಾ ಹೆಮ್ಮೆ ತಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಿಕ್ಕಿಬಿಕ್ಕಿ ಕಣ್ಣೀರಿಟ್ಟ​ ಪಾಂಡ್ಯ.. ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಕೊಹ್ಲಿ ಭಾವುಕ

https://newsfirstlive.com/wp-content/uploads/2024/06/ROHIT_VIRAT-1.jpg

Load More