/newsfirstlive-kannada/media/post_attachments/wp-content/uploads/2025/05/virat-kohli-13.jpg)
ವಿರಾಟ್ ಕೊಹ್ಲಿಯಿಂದ ನಾನು ಟ್ರೈನಿಂಗ್ ಮತ್ತು ಸಲಹೆಗಳನ್ನು ಪಡೆದುಕೊಂಡಿದ್ದೇನೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಹೇಳಿದ್ದಾರೆ.
ಕ್ರಿಕೆಟ್ ದಂತಕತೆ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿರುವ ಅನಯಾ, ನಾನು ವಿರಾಟ್ ಕೊಹ್ಲಿಯಿಂದ ಅಮೂಲ್ಯ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ನಾನು ಹಲವು ಬಾರಿ ಅವರನ್ನು ಭೇಟಿ ಆಗಿದ್ದೇನೆ. ಅವರು ನನಗೆ ತರಬೇತಿ ನೀಡಿದ್ದಾರೆ. ಅವರ ಜೊತೆಗೆ ನನ್ನ ತಂದೆಯವರಿಂದಲೂ ತರಬೇತಿ ಸಿಕ್ಕಿದೆ. ವಿರಾಟ್ ಕೊಹ್ಲಿ ನನಗೆ ಒಂದಷ್ಟು ಟಿಪ್ಸ್ಗಳನ್ನು ನೀಡಿದ್ದಾರೆ. ನಾನು ಬ್ಯಾಟಿಂಗ್ ಮಾಡೋದನ್ನು ಹತ್ತಿರದಿಂದ ಗಮನಿಸಿದ್ದಾರೆ ಎಂದರು.
ಇದನ್ನೂ ಓದಿ: IPL ಅಲ್ಲ ಇದು JPL ಟೂರ್ನಿ.. ಕೈದಿಗಳಿಗೂ ಕ್ರಿಕೆಟ್ ಭಾಗ್ಯ; ಅಪರೂಪದ VIDEO ವೈರಲ್!
View this post on Instagram
ಒಮ್ಮೆ ನಾನು ಕೊಹ್ಲಿಗೆ ಕೇಳಿದ್ದೆ. ನೀವು ಮೈದಾನದಲ್ಲಿ ಒತ್ತಡವನ್ನ ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅವರು, ಕಠಿಣ ಅಭ್ಯಾಸ, ಪಂದ್ಯದ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಎಂದು ಉತ್ತರಿಸಿದರು ಎಂದಿದ್ದಾರೆ. ನಿನ್ನೆಯ ದಿನ ಅನಯಾ ಅವರು ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅನಯಾ ಬಂಗಾರ್, ಸಂಜಯ್ ಬಂಗಾರ್ ಅವರ ಹಿರಿಯ ಪುತ್ರಿ. ಇವರೂ ಕೂಡ ಕ್ರಿಕೆಟರ್. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿಂದೆ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸುದ್ದಿಯಾಗಿದ್ದರು.
ಇದನ್ನೂ ಓದಿ: ಲಂಡನ್ನಲ್ಲಿ ಕೂತು ಹೊಂಚು.. ಭಾರತದ ಮೇಲೆ ದಾಳಿಗೆ ಪ್ಲಾನ್ ರೂಪಿಸಿದ ಮಾಸ್ಟರ್ ಮೈಂಡ್ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್