newsfirstkannada.com

ಕಿಂಗ್ ಕೊಹ್ಲಿ T20 ವರ್ಲ್ಡ್​​ಕಪ್ ಆಡಲ್ವಾ.. ವಿರಾಟ್ ಜೊತೆ ಮಾತಾಡ್ತೀನಿ ಅಂತ ಸಿಂಪಲ್ ಆನ್ಸರ್ ಕೊಟ್ಟ ಶಾ..!

Share :

Published February 17, 2024 at 12:11pm

    ಕೊಹ್ಲಿ ಭವಿಷ್ಯದ ಪ್ರಶ್ನೆ ಬಗ್ಗೆ ಮೌನದ ಉತ್ತರ ನೀಡಿದ ಜಯ್​ ಶಾ

    ವೆಸ್ಟ್​ ಇಂಡೀಸ್- ಯುಎಸ್​​ಎನಲ್ಲಿ​ ನಡೆಯುವ ಟಿ20 ವಿಶ್ವಕಪ್.!

    ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾನೇ ತಂಡದ ಕ್ಯಾಪ್ಟನ್​

ಮುಂಬರೋ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಶರ್ಮಾನೇ ಟೀಮ್​ ಇಂಡಿಯಾದ ಸಾರಥಿ ಅನ್ನೋದು ಅಧಿಕೃತವಾಗಿದೆ. ಆದ್ರೆ, ವಿರಾಟ್​ ಕೊಹ್ಲಿಯ ಆಡ್ತಾರಾ, ಇಲ್ವಾ ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆ ಹಾಗೇ ಉಳಿದಿದೆ. ಕೊಹ್ಲಿ ಭವಿಷ್ಯದ ಪ್ರಶ್ನೆ ಕೇಳಿದ್ರೆ ಜಯ್​ ಶಾ ಮೌನದ ಉತ್ತರ ನೀಡಿದ್ದಾರೆ. ಹಾಗಾದ್ರೆ, ಕೊಹ್ಲಿ ಟಿ20 ವಿಶ್ವಕಪ್​ ಆಡಲ್ವಾ?.

ತವರಿನಲ್ಲಿ ಇಂಡೋ -ಇಂಗ್ಲೆಂಡ್​​ ನಡುವೆ ಹೈವೋಲ್ಟೆಜ್​​ ಟೆಸ್ಟ್​ ಸರಣಿ ನಡೀತಾ ಇದೆ. ಉಭಯ ತಂಡಗಳು ಪ್ರತಿಷ್ಠೆಯ ಟ್ರೋಫಿ ಗೆಲ್ಲಲು ಕಾದಾಟ ನಡೆಸ್ತಿವೆ. ಈ ಸರಣಿ ಅಂತ್ಯದ ಬೆನ್ನಲ್ಲೇ ಐಪಿಎಲ್​ ಹಂಗಾಮ ಶುರುವಾಗಲಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ ರಣರೋಚಕ ಪಂದ್ಯಗಳನ್ನ ರಸದೌತಣ ಸವಿಯಲು ಫ್ಯಾನ್ಸ್​ ಸಿದ್ಧರಾಗ್ತಿದ್ದಾರೆ. ಆದ್ರೆ, ಬಿಸಿಸಿಐ ಬಿಗ್​ಬಾಸ್​​ಗಳು ಮಾತ್ರ ಜೂನ್​ನಲ್ಲಿ ನಡೆಯೋ ಟಿ20 ವಿಶ್ವಕಪ್​​ ಗುಂಗಲ್ಲಿದ್ದಾರೆ.

T20 ವಿಶ್ವಕಪ್​ ಮೆಗಾ ಟೂರ್ನಿಗೆ ಸದ್ದಿಲ್ಲದೆ ಸಿದ್ಧತೆ.!

ದಶಕದಿಂದ ಐಸಿಸಿ ಟ್ರೋಫಿ ಗೆಲ್ಲಲಾಗದೆ ಅವಮಾನ ಅನುಭವಿಸ್ತಾ ಇರೋ ಬಿಸಿಸಿಐ, ಈ ಬಾರಿ ಆ ಟ್ರೋಫಿ ಬರಕ್ಕೆ ಬ್ರೇಕ್​ ಹಾಕಲು ಪಣ ತೊಟ್ಟಿದೆ. ಜೂನ್​ನಲ್ಲಿ ವೆಸ್ಟ್​ ಇಂಡೀಸ್ ಹಾಗೂ ಯುಎಸ್​​ಎನಲ್ಲಿ​ ನಡೆಯೋ ಟಿ20 ವಿಶ್ವಕಪ್​ ಮಹಾಸಮರವನ್ನ ಬಿಗ್​ಬಾಸ್​​ಗಳು ಟಾರ್ಗೆಟ್​ ಮಾಡಿದ್ದಾರೆ. ಈ ಮೆಗಾ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸದ್ದಿಲ್ಲದೇ ಸಿದ್ಧತೆಯು ಶುರುವಾಗಿದೆ.

ರೋಹಿತ್​ ಆಡೋದು ಕನ್​ಫರ್ಮ್​.. ವಿರಾಟ್​​ ಡೌಟ್​.!

ಸದ್ಯ ಇಂಡೋ-ಇಂಗ್ಲೆಂಡ್​ ನಡುವೆ ನಡೀತಾ ಇರೋ 3ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​ ಬಿಗ್​​ ಇವೆಂಟ್​ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಯ್​ ಶಾ, ವಿಶ್ವಕಪ್​ ಸಿದ್ಧತೆಯ ಸೀಕ್ರೆಟ್​ ಬಿಚ್ಚಿಟ್ರು. ಇಷ್ಟೇ ಅಲ್ಲ, ಚುಟುಕು ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾನೇ ತಂಡದ ಸಾರಥಿ ಎಂದು ಅಧಿಕೃತ ಘೋಷಣೆ ಮಾಡಿದರು. ಆದ್ರೆ, ಕೊಹ್ಲಿ ವಿಚಾರದಲ್ಲಿ ಮಾತ್ರ ತುಟಿಪಿಟಿಕ್​ ಅನ್ನಲಿಲ್ಲ.

2023ರಲ್ಲಿ ಅಹ್ಮದಾಬಾದ್​ನಲ್ಲಿ ನಾವು ವಿಶ್ವಕಪ್​ ಗೆಲ್ಲಲಿಲ್ಲ. ಆದ್ರೆ, ಸತತ 10 ಪಂದ್ಯ ಗೆದ್ದು, ಎಲ್ಲರ ಹೃದಯ ಗೆದ್ದೆವು. ನಾನು ಇವತ್ತು ಪ್ರಮಾಣ ಮಾಡುತ್ತೇನೆ. 2024ರಲ್ಲಿ ಬಾರ್ಬಡೋಸ್​ನಲ್ಲಿ ನಾವು ರೋಹಿತ್​ ಶರ್ಮಾ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿಯುತ್ತೇವೆ. ಭಾರತದ ಭಾವುಟ ಹಾರಿಸುತ್ತೇವೆ.

ಜಯ್​ ಶಾ, ಬಿಸಿಸಿಐ ಕಾರ್ಯದರ್ಶಿ

T20 ವಿಶ್ವಕಪ್​ ಮಹಾಸಂಗ್ರಾಮದಲ್ಲಿ ಕೊಹ್ಲಿ ಆಡಲ್ವಾ.?

ರೋಹಿತ್​ ಶರ್ಮಾ ವಿಚಾರದಲ್ಲಿ ಇದ್ದ ಗೊಂದಲಕ್ಕೆ ಬ್ರೇಕ್​ ಹಾಕಿದ ಜಯ್​ ಶಾ ವಿರಾಟ್​ ಕೊಹ್ಲಿ ವಿಚಾರದಲ್ಲಿ ಮಾತ್ರ ಮೌನಕ್ಕೆ ಜಾರಿದ್ರು. ವಿರಾಟ್​ ಕೊಹ್ಲಿ ಆಡ್ತಾರಾ ಎಂಬ ಪ್ರಶ್ನೆಗೆ ಅವರ ಜೊತೆ ಮಾತನಾಡ್ತೀವಿ ಎಂಬ ಸಿಂಪಲ್​ ಉತ್ತರ ಕೊಟ್ಟು ಸೈಲೆಂಟ್​ ಆಗ್ಬಿಟ್ರು.

ವಿರಾಟ್​ ಕೊಹ್ಲಿ ಸಾಮರ್ಥ್ಯದ ಬಗ್ಗೆ ಅನುಮಾನ.?

ಬರೋಬ್ಬರಿ 1 ವರ್ಷದ ಅಂತರದ ಕಮ್​ಬ್ಯಾಕ್​ ಮಾಡಿದ ಟಿ20 ಸರಣಿಯಲ್ಲಿ ರೋಹಿತ್​ ಶರ್ಮಾ ಧಮ್​ ದಾರ್​ ಶತಕ ಸಿಡಿಸಿ ಗಮನ ಸೆಳೆದ್ರು. ಆದ್ರೆ, ವಿರಾಟ್​ ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್​ ನೀಡಿದ್ರು. ಜೊತೆಗೆ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ನ ಅಗ್ರೆಸ್ಸೀವ್ ಆಟದ ಗೇಮ್​ಪ್ಲಾನ್​ ಅಡಾಪ್ಟ್​​ ಮಾಡಿಕೊಳ್ಳುವಲ್ಲೂ ಎಡವಿದ್ರು. ಈ ವೈಫಲ್ಯವೇ ಇದೀಗ ವಿರಾಟ್​​ ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿದೆ.

ಐಪಿಎಲ್​ನಲ್ಲಿ ನಿರ್ಧಾರವಾಗಲಿದ್ಯಾ ಕೊಹ್ಲಿ ಭವಿಷ್ಯ.?

ಅಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಾ ಪರ್ಫಾಮೆನ್ಸ್​ ನೀಡಲಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ ವಿರಾಟ್​ ಕೊಹ್ಲಿ, ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಲಿದೆ. ಚುಟುಕು ಸಂಗ್ರಾಮದಲ್ಲಿ ಕೊಹ್ಲಿಯ ಪರ್ಫಾಮೆನ್ಸ್​ ಆಧಾರದಲ್ಲಿ ವಿಶ್ವಕಪ್​ ಟಿಕೆಟ್​ ನೀಡೋದು ಮ್ಯಾನೇಜ್​ಮೆಂಟ್​ ಲೆಕ್ಕಾಚಾರವಾಗಿದೆ.

ಎರಡೇ 2 ವೈಫಲ್ಯಗಳಿಂದ ಕೊಹ್ಲಿಯ ಸಾಮರ್ಥ್ಯವನ್ನ ಅಳೆಯೋಕೆ ಸಾಧ್ಯ ಇಲ್ಲ. ಕಳೆದ ಟಿ20 ವಿಶ್ವಕಪ್,​ ಏಕದಿನ ವಿಶ್ಚಕಪ್​ನಲ್ಲಿ ವಿರಾಟ್​ ನೀಡಿದ ಪರ್ಫಾಮೆನ್ಸ್​ ಸಾಮರ್ಥ್ಯಕ್ಕೆ ಸಾಕ್ಷಿ. ಬಿಗ್​ಸ್ಟೇಜ್​​ನಲ್ಲಿ, ಬಿಗ್​ ಟೂರ್ನಮೆಂಟ್​ಗಳಲ್ಲಿ ಟೀಮ್​ ಇಂಡಿಯಾಗೆ ಕೊಹ್ಲಿ ಎಷ್ಟು ಇಂಪಾರ್ಟೆಂಟ್​ ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್​ನಿಂದ ಕೊಹ್ಲಿಯನ್ನ ಕೈ ಬಿಡೋದು ಅನುಮಾನ. ಆದ್ರೂ ಸೆಕ್ರೆಟರಿ ಜಯ್​ ಶಾ, ಕೊಹ್ಲಿ ಜೊತೆ ಏನು ಮಾತನಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ T20 ವರ್ಲ್ಡ್​​ಕಪ್ ಆಡಲ್ವಾ.. ವಿರಾಟ್ ಜೊತೆ ಮಾತಾಡ್ತೀನಿ ಅಂತ ಸಿಂಪಲ್ ಆನ್ಸರ್ ಕೊಟ್ಟ ಶಾ..!

https://newsfirstlive.com/wp-content/uploads/2024/02/VIRAT_KOHLI.jpg

Load More