/newsfirstlive-kannada/media/post_attachments/wp-content/uploads/2024/10/KOHLI_SHIKHAR.jpg)
ಐಪಿಎಲ್ ಬಂದರೆ ಸಾಕು ವಿರಾಟ್ ಕೊಹ್ಲಿ ಕ್ರೇಜ್ ಬೇರೆ ರೀತಿಯೇ ಕ್ರಿಯೇಟ್ ಆಗುತ್ತೆ. ಅದರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿ ಆಡುವಾಗ ಅಂತೂ ಕೇವಲ ಎರಡು ಹೆಸರು ಮಾತ್ರ ಕೇಳಿ ಬರುತ್ತೆ. ಒಂದು ಆರ್​ಸಿಬಿ ಇನ್ನೊಂದು ಕೊಹ್ಲಿ. ಆರ್​ಸಿಬಿ ತಂಡದಲ್ಲಿ ರನ್ ಗಳಿಸುವಲ್ಲಿಯೂ ವಿರಾಟ್​ ಕೊಹ್ಲಿ ಯಾವಾಗಲೂ ಮುಂದೆ ಇರುತ್ತಾರೆ. ಅದರಂತೆ ಐಪಿಎಲ್​ನಲ್ಲಿ ಹೆಚ್ಚು ರನ್ ಹಾಗೂ ಅಧಿಕ ಸೆಂಚುರಿಗಳನ್ನ ಸಿಡಿಸಿರುವ ಪ್ಲೇಯರ್ ಯಾರು?.
ಸದ್ಯ ಯಾವ ಪ್ಲೇಯರ್​ನ ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನ ಕೈಬಿಡಬೇಕು ಎನ್ನುವ ಲೆಕ್ಕಾಚಾರ ಐಪಿಎಲ್​ ವಲಯದಲ್ಲಿ ನಡೆಯುತ್ತಿದೆ. ಇದನ್ನು ಬಿಟ್ಟು ಐಪಿಎಲ್​ ಸೀಸನ್​ನಲ್ಲಿ ಅತಿ ಹೆಚ್ಚು ಸೆಂಚುರಿ ಹಾಗೂ ರನ್​ ಗಳಿಸಿದ ಪ್ಲೇಯರ್ ಯಾರು ಎಂದು ತಿಳಿಯುವುದಾದರೆ ಅದು ವಿರಾಟ್ ಕೊಹ್ಲಿ. ಹೌದು ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಒಟ್ಟು 8,004 ರನ್​ಗಳನ್ನ ಗಳಿಸಿದ್ದಾರೆ. ಇದರ ಜೊತೆಗೆ ಇಡೀ ಐಪಿಎಲ್​ ಸೀಸನ್​ನಲ್ಲೇ 08 ಸೆಂಚುರಿಗಳನ್ನ ಸಿಡಿಸಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಅದ್ಧೂರಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಕೆ.. CP ಯೋಗೇಶ್ವರ್​ಗೆ ಶುಭ ಹಾರೈಸಿದ ಸಿಎಂ, ಡಿಸಿಎಂ
/newsfirstlive-kannada/media/post_attachments/wp-content/uploads/2024/10/KOHLI_CAP.jpg)
ಇನ್ನು ಅತಿ ಹೆಚ್ಚು ರನ್‌ಗಳ ದಾಖಲೆ ಮಾತ್ರವಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ 8 ಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ. ಇವರ ನಂತರ ಇಂಗ್ಲೆಂಡ್‌ನ ಜೋಸ್ ಬಟ್ಲರ್ 7 ಶತಕ ಸಿಡಿಸಿ 2ನೇ ಸ್ಥಾನದಲ್ಲಿ ಇದ್ದಾರೆ. ಇದರಿಂದಲೇ ವಿರಾಟ್ ಕೊಹ್ಲಿರನ್ನ ಐಪಿಎಲ್‌ನ ರನ್ ಮಷಿನ್ ಎಂದೂ ಕರೆಯುತ್ತಾರೆ. ಟೀಮ್ ಇಂಡಿಯಾದ ಮಾಜಿ ಪ್ಲೇಯರ್ ಶಿಖರ್ ಧವನ್ 6,769 ರನ್​ ಗಳಿಸಿ ವಿರಾಟ್ ನಂತರ ಹೆಚ್ಚು ರನ್ ಗಳಿಸಿದ ಪ್ಲೇಯರ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us