/newsfirstlive-kannada/media/post_attachments/wp-content/uploads/2024/06/KOHIL-ROHIT.jpg)
ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಒಂದು ದಶಕಕ್ಕೂ ಹೆಚ್ಚು ಕಾಲ ICC ಟ್ರೋಫಿಗಾಗಿ ಕಾಯುತ್ತಿದ್ದಾರೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಂ ಇಂಡಿಯಾ ಗೆದ್ದುಕೊಂಡ ಕೊನೆಯ ಐಸಿಸಿ ಟ್ರೋಫಿ.
7 ತಿಂಗಳ ಹಿಂದೆ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲುವುದು ಕೈತಪ್ಪಿಸಿತ್ತು. ಟ್ರೋಫಿ ಗೆಲ್ಲಲು ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದೆ. ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಇವತ್ತು ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.
/newsfirstlive-kannada/media/post_attachments/wp-content/uploads/2024/06/ROHIT-SHARMA-13.jpg)
ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ (monty panesar) ದೊಡ್ಡ ಭವಿಷ್ಯ ನುಡಿದಿದ್ದಾರೆ. ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ. ವಿರಾಟ್ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದು ಪ್ರೆಡಿಕ್ಟ್ ಮಾಡಿದ್ದಾರೆ.
ಕೊಹ್ಲಿ ಕೆಟ್ಟ ಫಾರ್ಮ್
ಸದ್ಯ ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್​​​ನಲ್ಲಿದ್ದಾರೆ. ಐಪಿಎಲ್​​ನಲ್ಲಿ ಅದ್ಭುತ ಬ್ಯಾಟ್ ಬೀಸಿದ್ದ ಕೊಹ್ಲಿ ವಿಶ್ವಕಪ್​​ನಲ್ಲಿ ಫಾರ್ಮ್​ ಕಳೆದುಕೊಂಡಿದ್ದಾರೆ. ಐಪಿಎಲ್​ನಲ್ಲಿ 61.75 ಸರಾಸರಿ ರನ್​ನೊಂದಿಗೆ 154.69ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ್ದ ವಿರಾಟ್ 741 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಐಪಿಎಲ್ ಫಾರ್ಮ್ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us