newsfirstkannada.com

×

ಪುಣೆಯಲ್ಲಿ ವಿರಾಟ್ ಪವರ್ ಫುಲ್ ಬ್ಯಾಟಿಂಗ್ ರೆಕಾರ್ಡ್.. 3 ಮಾದರಿಯಲ್ಲೂ ಇಲ್ಲಿ ಕೊಹ್ಲಿನೇ ಕಿಂಗ್!

Share :

Published October 24, 2024 at 3:08pm

    ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಟ್ರೈಲರ್ ತೋರಿಸಿದ್ದ ಕಿಂಗ್ ಕೊಹ್ಲಿ

    ಕೊಹ್ಲಿಯಿಂದ ಕಿವೀಸ್​ಗೆ ಅಸಲಿ ಫೀವರ್ ಈಗ ಶುರುವಾಗಿದೆಯಾ?

    ಪುಣೆ ಪಿಚ್​​ನಲ್ಲಿ ವಿರಾಟ್​ ಕೊಹ್ಲಿ ವಿರಾಟ ರೂಪ ಏನು ಹೇಳುತ್ತದೆ?

ಬೆಂಗಳೂರಿನಲ್ಲಿ ಟ್ರೈಲರ್ ತೋರಿಸಿದ್ದ ವಿರಾಟ್, ಪುಣೆಯಲ್ಲಿ ಪಿಕ್ಚರ್ ಅಭಿ ಬಾಕಿ ಹೇ ಅಂತಿದ್ದಾರೆ. ಅಷ್ಟೇ ಅಲ್ಲ, ಪುಣೆಯಲ್ಲಿ ಪವರ್ ಫುಲ್ ಮೂಲಕ ವಿರಾಟ್ ದರ್ಶನ ತೋರಿಸೋದು ಫಿಕ್ಸ್​. ಇಷ್ಟು ಕಾನ್ಫಿಡೆನ್ಸ್​ನಲ್ಲಿ ಹೇಳಲು ಕಾರಣ ಏನು?.

ನ್ಯೂಜಿಲೆಂಡ್ ಟೆಸ್ಟ್​ ಸರಣಿಯ ಅಸಲಿ ಫೀವರ್ ಈಗ ಶುರುವಾಗಿದೆ. ಮೊದಲ ಟೆಸ್ಟ್​ ಸೋತ ಟೀಮ್ ಇಂಡಿಯಾ ಒಂದ್ಕಡೆ ಗೆಲುವಿಗಾಗಿ ಚಡಪಡಿಸುತ್ತಿದ್ದರೇ ಅತ್ತ ಕಿಂಗ್ ಕೊಹ್ಲಿ, ಶತಕದ ಬರಕ್ಕಾಗಿ ಎದುರು ನೋಡ್ತಿದ್ದಾರೆ. ಪುಣೆಯಲ್ಲಿ ವಿರಾಟ್​​ನ ವಿರಾಟ ರೂಪ ಗ್ಯಾರಂಟಿ ಎನ್ನಲಾಗ್ತಿದೆ. ಇದಕ್ಕೆಲ್ಲಾ ಕಾರಣ ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿಯ ಆಟ.

ಇದನ್ನೂ ಓದಿ: IND vs NZ; ಕಿವೀಸ್​ಗೆ ಆರಂಭದಲ್ಲಿ ಟಕ್ಕರ್ ಕೊಟ್ಟ ಆರ್ ಅಶ್ವಿನ್.. ಕನ್ನಡಿಗ ರಚಿನ್ ಕೂಡ ಔಟ್

ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಬ್ಯಾಟಿಂಗ್​​ ಪ್ರದರ್ಶಿಸಿದ ವಿರಾಟ್, 8 ಬೌಂಡರಿ, 1 ಸಿಕ್ಸರ್ ಒಳಗೊಂಡ 70 ರನ್ ಸಿಡಿಸಿದ್ದರು. ಆದರೆ, ದುರಾದೃಷ್ಟಕರ ರೀತಿ ಔಟಾಗಿರುವ ವಿರಾಟ್​, ಈಗ ಪುಣೆ ಟೆಸ್ಟ್​ನಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.

ಪುಣೆಯಲ್ಲಿ ಅಸಲಿ ಪಿಚ್ಚರ್ ತೋರಿಸ್ತಾರೆ ವಿರಾಟ್​..!

ಬೆಂಗಳೂರಿನಲ್ಲಿ ಅರ್ಧಶತಕ ಸಿಡಿಸಿ ಟ್ರೈಲರ್ ನೋಡಿಸಿರುವ ವಿರಾಟ್, ಸದ್ಯ ಸಾಲಿಡ್ ಬ್ಯಾಟಿಂಗ್ ಟಚ್​​ನಲ್ಲಿದ್ದಾರೆ. ಇದು ಸಹಜವಾಗೇ ಫ್ಯಾನ್ಸ್​ ಎಕ್ಸ್​ಪೆಕ್ಟೇಷನ್ಸ್​ನ ಡಬಲ್ ಮಾಡಿದೆ. ಅಷ್ಟೇ ಅಲ್ಲ.! 2ನೇ ಟೆಸ್ಟ್​ಗೂ ಎದುರಾಳಿ ನ್ಯೂಜಿಲೆಂಡ್ ತಂಡದ ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ದರ್ಬಾರ್​.

ಪುಣೆಯಲ್ಲಿ ವಿರಾಟ್​ ಕೊಹ್ಲಿಯ ಅಬ್ಬರ ಗ್ಯಾರಂಟಿ..!

ಫ್ಯಾನ್ಸ್​ಗೆ ಪವರ್ ಫುಲ್ ಬ್ಯಾಟಿಂಗ್ ಶೋ ತೋರಿಸಿರೋ ವಿರಾಟ್​, ಪುಣೆಯ ಟೆಸ್ಟ್​​ನಲ್ಲಿ ಅಬ್ಬರಿಸೋದು ಖಾಯಂ. ಯಾಕಂದ್ರೆ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಅಂದ್ರೆ, ಕಿಂಗ್ ಕೊಹ್ಲಿಯ ಫೇವರಿಟ್ ಗ್ರೌಂಡ್. ಇದು ಸುಖಾ ಸುಮ್ಮನೆ ಹೇಳುವ ಮಾತಲ್ಲ. ಅಂಕಿಅಂಶ ಹೇಳುವ ಮಾತಾಗಿದೆ.

ಪುಣೆಯಲ್ಲಿ ಟೆಸ್ಟ್​ ಕ್ರಿಕೆಟ್​​ನಲ್ಲಿ ವಿರಾಟ್​

ಪುಣೆಯಲ್ಲಿ 2 ಪಂದ್ಯಗಳ 3 ಇನ್ನಿಂಗ್ಸ್​ನಲ್ಲಿ ಬ್ಯಾಟ್ ಬೀಸಿರುವ ವಿರಾಟ್​, 267 ರನ್ ಕೊಳ್ಳೆ ಹೊಡೆದಿದ್ದಾರೆ. ಇದೇ ಗ್ರೌಂಡ್​​​ನಲ್ಲಿ ಅಜೇಯ 254 ರನ್ ಬಾರಿಸುವ ಕೊಹ್ಲಿ, 133.50ರ ಬ್ಯಾಟಿಂಗ್ ಅವರೇಜ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

ಅದ್ರಲ್ಲೂ ಸೌತ್ ಆಫ್ರಿಕಾ ಎದುರು ನಾಯಕನಾಗಿ ಕಟ್ಟಿದ ಈ ಬಿಗ್ ಇನ್ನಿಂಗ್ಸ್​ ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಆದ್ರೀಗ 5 ವರ್ಷಗಳ ಬಳಿಕ ಈ ಸ್ಟೇಡಿಯಂನಲ್ಲಿ ಟೆಸ್ಟ್​ ಕ್ರಿಕೆಟ್ ಆಡಲು ಸಜ್ಜಾಗಿರುವ ವಿರಾಟ್​, ಸೌತ್ ಆಫ್ರಿಕಾ ಎದುರಿನ ಡಬಲ್ ಸೆಂಚೂರಿ ಆಟವನ್ನೇ ನೆನಪಿಸುವ ಉತ್ಸುಕದಲ್ಲಿದ್ದಾರೆ.

ಟೆಸ್ಟ್​ನಲ್ಲೇ ಅಲ್ಲ.. ಎಲ್ಲಾ ಫಾರ್ಮೆಟ್​ನಲ್ಲೂ ರನ್​ ಮಳೆ!

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷ್ ಸ್ಟೇಡಿಯಂ, ವಿರಾಟ್​ ಕೊಹ್ಲಿಯ ನೆಚ್ಚಿನ ಸ್ಟೇಡಿಯಂ ಎನ್ನಲು ಕಾರಣ. ಈ ಸ್ಟೇಡಿಯಂನಲ್ಲಿ ಸಿಡಿಸಿದ ಟೆಸ್ಟ್​ ರನ್ ಮಾತ್ರವೇ ಅಲ್ಲ. ಮೂರು ಫಾರ್ಮೆಟ್​ನಲ್ಲಿ ತೋರಿರುವ ವಿರಾಟ ರೂಪವೇ ಆಗಿದೆ.

ಇದನ್ನೂ ಓದಿ: IND vs NZ; ಯುವ ಬ್ಯಾಟರ್ ಸರ್ಫರಾಜ್​ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?

ಪುಣೆಯಲ್ಲಿ ಎಲ್ಲಾ ಮಾದರಿ ಕ್ರಿಕೆಟ್​ನಿಂದ ಕೊಹ್ಲಿ

ಎಲ್ಲಾ ಫಾರ್ಮೆಟ್​ನಿಂದ 12 ಪಂದ್ಯಗಳನ್ನಾಡಿರುವ ವಿರಾಟ್, 865 ರನ್ ಚಚ್ಚಿದ್ದಾರೆ. ಈ ಸ್ಟೇಡಿಯಂನಲ್ಲಿ 78.63ರ ಬ್ಯಾಟಿಂಗ್​ ಅವರೇಜ್​​​ ಹೊಂದಿರುವ ವಿರಾಟ್​, 4 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.

ಹೀಗೆ ಪ್ರತಿ ಫಾರ್ಮೆಟ್​ನಲ್ಲಿ ಎದುರಾಳಿ ಬೌಲರ್​ಗಳನ್ನ ಚೆಂಡಾಡಿರುವ ವಿರಾಟ್, ಸೇಡಿನ ಸಮರದಲ್ಲೂ ಕಿವೀಸ್ ಎದುರು ಕಮಾಲ್ ಮಾಡಲು ಸಜ್ಜಾಗಿ ನಿಂತಿದ್ದಾರೆ. ಬೆಂಗಳೂರಿನಲ್ಲಿ ಕಿಂಗ್​​​ ಕೊಹ್ಲಿಯ ಆಟ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಪುಣೆಯ ಪವರ್ ಫುಲ್ ಬ್ಯಾಟಿಂಗ್ ರೆಕಾರ್ಡ್​ ಎದುರಾಳಿ ನ್ಯೂಜಿಲೆಂಡ್​ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪುಣೆಯಲ್ಲಿ ವಿರಾಟ್ ಪವರ್ ಫುಲ್ ಬ್ಯಾಟಿಂಗ್ ರೆಕಾರ್ಡ್.. 3 ಮಾದರಿಯಲ್ಲೂ ಇಲ್ಲಿ ಕೊಹ್ಲಿನೇ ಕಿಂಗ್!

https://newsfirstlive.com/wp-content/uploads/2024/10/KOHLI-4.jpg

Load More