ಇವತ್ತು ಶಾಕಿಂಗ್ ನ್ಯೂಸ್ ಕೊಡ್ತಾರಾ ಕೊಹ್ಲಿ.. ವಿರಾಟ್ ಅಭಿಮಾನಿಗಳಿಗೆ ಢವಢವ..!

author-image
Ganesh
Updated On
RCB ಗೆಲುವಿನಲ್ಲಿ ಕಿಂಗ್​​ ಕೊಹ್ಲಿಯ ಮುತ್ತಿನಂತ ವರ್ಲ್ಡ್​​ರೆಕಾರ್ಡ್ಸ್​​​.. ಏನೇನು ದಾಖಲೆ ಬರೆದರು ವಿರಾಟ್​​?
Advertisment
  • ವಿರಾಟ್​ ಕೊಹ್ಲಿಯ 18 ವರ್ಷಗಳ ಕನಸು ಈಡೇರುತ್ತಾ?
  • ಸೀಸನ್ 18.. ಕೊಹ್ಲಿ ಜೆರ್ಸಿ ನಂ.18.. ಫ್ಯಾನ್ಸ್​ ಅತ್ಯುತ್ಸಾಹ
  • ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿ ಲಾಯಲ್​ ಫ್ಯಾನ್ಸ್

ಈ ಸಲ IPLನಲ್ಲಿ RCB ಅದ್ಭುತ ಪ್ರದರ್ಶನ ನೀಡಿದೆ. ಫೈನಲ್​ಗೂ ಎಂಟ್ರಿ ನೀಡಿದೆ. 18 ವರ್ಷಗಳ ಕನಸು ನನಸಾಗೋ ಸಮಯ ಹತ್ತಿರವಾಗಿದೆ. ಇದ್ರಿಂದ ಫುಲ್ ಖುಷ್​ ಆಗಿರೋ ಫ್ಯಾನ್ಸ್​ಗೆ ಮತ್ತೊಂದು ಕಡೆ ಅದೊಂದು ಆತಂಕವೂ ಕಾಡ್ತಿದೆ.

ಫ್ಯಾನ್ಸ್​ ಅತ್ಯುತ್ಸಾಹ

18.. ಇದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್. ಈ ನಂಬರ್​ ಜೊತೆಗಿನ ಫ್ಯಾನ್ಸ್​ ಸಂಬಂಧ ಬಿಡಸಲಾಸಾಧ್ಯ. ಈ ಕಾರಣಕ್ಕೆ ಫ್ಯಾನ್ಸ್​, ಸೀಸನ್-18ರ ಐಪಿಎಲ್​​ ಆರ್​ಸಿಬಿ ಇಯರ್ ಅಂತಾನೇ ವಿಶ್ಲೇಷಣೆ ನಡೆಸ್ತಿದ್ದಾರೆ. ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಸೀಸನ್​-18ರ ಐಪಿಎಲ್, ಮೋಸ್ಟ್​ ಎಮೋಷನಲ್ ಸೀಸನ್​​ ಆಗಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಜರ್ಸಿ ನಂಬರ್ ಹಾಗೂ ಐಪಿಎಲ್ ಸೀಸನ್​-18.

ಇದನ್ನೂ ಓದಿ: ಆರ್​ಸಿಬಿಗೆ ಗುಡ್​ನ್ಯೂಸ್​.. ತವರಿಗೆ ಹೋಗಿದ್ದ ಸ್ಫೋಟಕ ಬ್ಯಾಟರ್​ ತಂಡಕ್ಕೆ ಕಂಬ್ಯಾಕ್..!

publive-image

18 ವರ್ಷಗಳಿಂದ ಒಂದೇ ತಂಡದ ಪರ ಆಡ್ತಿರೋ ಕೊಹ್ಲಿ, ಇವರೆಗೂ IPL ಕಪ್ ಗೆದ್ದಿಲ್ಲ. ಮೂರು ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹೀಗಾಗಿ ಸೀಸನ್​​​-18ರಲ್ಲಿ ಕಪ್ ಮಿಸ್ಸೇ ಇಲ್ಲ ಎಂಬ ನಂಬಿಕೆಯಲ್ಲಿರುವ ಫ್ಯಾನ್ಸ್, ಈಗಾಗಲೇ ಸೆಲೆಬ್ರೇಷನ್ ಶುರು ಇಟ್ಟುಕೊಂಡಿದ್ದಾರೆ. ಇದರ ನಡುವೆ ಅದೊಂದು ಆತಂಕ ಅಭಿಮಾನಿಗಳನ್ನ ಕಾಡ್ತಿದೆ.

ಬಿಗ್​ಶಾಕ್ ನೀಡ್ತಾರಾ ಕಿಂಗ್​ ಕೊಹ್ಲಿ..?

ಇವತ್ತಿನ ಐಪಿಎಲ್​​ ಕಿಂಗ್ ಕೊಹ್ಲಿಗೆ ನಿಜಕ್ಕೂ ಸಖತ್ ಸ್ಪೆಷಲ್​. ಇಂದು 18 ವರ್ಷಗಳಿಂದ ಐಪಿಎಲ್​ ಗೆಲ್ಲದ ಕನಸಿಗೆ, ಕೊರಗು ನೀಗಿಸಿಕೊಳ್ಳುವಂತ ಸುವರ್ಣ ದಿನ. ಒಂದೇ ತಂಡದ ಪರ ಆಡ್ತಿರುವ ವಿರಾಟ್​​ ಕೊಹ್ಲಿಗೆ, ಆರ್​ಸಿಬಿಯ ಲಾಯಲ್​ ಫ್ಯಾನ್ಸ್​ ಕನಸು ಈಡೇರಿಸುವ ದಿನವೂ ಆಗಿದೆ. ಇದೇ ಕಾರಣಕ್ಕೆ ಟೂರ್ನಿಯುದ್ದಕ್ಕೂ ವೀರ ಸೇನಾನಿಯಂತೆ ಹೋರಾಟ ನಡೆಸಿರುವ ವಿರಾಟ್​, ಟ್ರೋಫಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇದೇ ಸ್ಪೆಷಲ್​ ಡೇ ಐಪಿಎಲ್​​ಗೆ ರಿಟೈರ್ ಹೇಳ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣವೂ ಇದೆ. ಅದೇ ಟೆಸ್ಟ್​ ಕ್ರಿಕೆಟ್ ರಿಟೈಟ್ಮೆಂಟ್.

ಇದನ್ನೂ ಓದಿ: RCB VS PBKS ಫೈನಲ್ ಮ್ಯಾಚ್ ಆರಂಭಕ್ಕೂ ಮೊದಲೇ ಶಾಕಿಂಗ್ ನ್ಯೂಸ್..

publive-image

ಕಳೆದ ತಿಂಗಳಷ್ಟೇ ವಿರಾಟ್​ ಕೊಹ್ಲಿ ಟೆಸ್ಟ್ ಕ್ರಿಕೆಟ್​​ಗೆ ಗುಡ್​ಬೈ ಹೇಳಿದ್ರು. ಆ ಮೂಲಕ ಕ್ರಿಕೆಟ್​ ಜಗತ್ತಿಗೆ ಬಿಗ್ ಶಾಕ್ ನೀಡಿದ್ರು. 10 ಸಾವಿರ ರನ್​ ಮೈಲಿಗಲ್ಲಿಗೆ ಹತ್ತಿರವಿದ್ದಾಗ ರಿಟೈರ್​ ಆಗ್ತಾರೆ ಎಂಬ ನಿರೀಕ್ಷೆಯೂ ಮಾಡದ ಫ್ಯಾನ್ಸ್​ಗೆ ಬರ ಸಿಡಿಲು ಬಂಡಿದಂತಾಗಿತ್ತು. ಹೀಗಾಗಿ ಐಪಿಎಲ್​​ ಟ್ರೋಫಿಗೆ ವಿರಾಟ್ ಮುತ್ತಿಟ್ರೆ, ಐಪಿಎಲ್​ನಿಂದ ದೂರ ಸರಿದು ಬಿಡ್ತಾರಾ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ.. ಅಭಿಮಾನಿಗಳ ಮನದಲ್ಲೂ ಹರಿದಾಡ್ತಿದೆ.

ಟಿ20 ವಿಶ್ವಕಪ್ ಗೆದ್ದು ಅಂತಾರಾಷ್ಟ್ರೀಯ T20ಗೆ ವಿದಾಯ

2024ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿದ ವಿರಾಟ್​ ಕೊಹ್ಲಿ, ಕೋಟ್ಯಾಂತರ ಅಭಿಮಾನಿಗಳ ಕನಸು ಈಡೇರಿಸಿದ್ರು. ಅಂದು ಫೈನಲ್​​ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ವಿರಾಟ್​, ವಿಶ್ವಕಪ್ ಗೆಲುವಿನ ನಂತರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದರು. ಹೀಗಾಗಿ ವಿರಾಟ್​, 18 ವರ್ಷಗಳ ಆರ್​ಸಿಬಿ ಅಭಿಮಾನಿಗಳ ಕೊರಗು ಈಡೇರಿಸಿ, ಟ್ರೋಫಿಗೆ ಮುತ್ತಿಟ್ಟಿದ ಬಳಿಕ ಶಾಕಿಂಗ್ ಡಿಸಿಷನ್ ಕೈಗೊಂಡರು ಅಚ್ಚರಿ ಇಲ್ಲ. ಯುವ ಆಟಗಾರರನ್ನೇ ನಾಚಿಸುವಂತ ಆಟವಾಡ್ತಿರುವ ವಿರಾಟ್​, ಫುಲ್ ಫಿಟ್ನೆಸ್​ ಹೊಂದಿರುವ ವಿರಾಟ್, ನಿಜಕ್ಕೂ ಇಂಥದದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಸದ್ಯಕ್ಕೆ ದೂರವಾದ ಮಾತೇ ಸರಿ. ಆದ್ರೆ, ಇದಕ್ಕೆಲ್ಲಾ ಕೊಹ್ಲಿಯೇ ಅಂತ್ಯವಾಡಬೇಕು.

ಇದನ್ನೂ ಓದಿ: ಬಂದೇ ಬಿಟ್ಟ ಮಳೆರಾಯ.. ಅಹ್ಮದಾಬಾದ್​ನಲ್ಲಿ ಇವತ್ತು ಮಳೆ ಬೀಳುವ ಸಾಧ್ಯತೆ ಎಷ್ಟಿದೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment