/newsfirstlive-kannada/media/post_attachments/wp-content/uploads/2024/07/VIRAT_KOHLI_1-2.jpg)
ಶ್ರೀಲಂಕಾ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಆಗಸ್ಟ್ 2 ರಿಂದ ಶ್ರೀಲಂಕಾ ಜೊತೆಗೆ ನಡೆಯುವ ಏಕದಿನ ಪಂದ್ಯಗಳಿಗಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಪ್ಲೇಯರ್ಸ್ ಅಭ್ಯಾಸ ಪ್ರಾರಂಭಿಸಿದ್ದಾರೆ. ಡ್ರೆಸಿಂಗ್ ರೂಮ್ನಲ್ಲಿ ಕೊಹ್ಲಿ ಪ್ರಾಕ್ಟೀಸ್ ಮಾಡುವಾಗ ಅಭಿಮಾನಿಯೊಬ್ಬ ಚೋಕ್ಲಿ ಎಂದು ಕೂಗಿದ್ದಾನೆ.
ಇದನ್ನೂ ಓದಿ:‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಲಂಕಾದ ವಿರುದ್ಧದ ಏಕದಿನ ಮ್ಯಾಚ್ಗಳಿಗಾಗಿ ವಿರಾಟ್ ಕೊಹ್ಲಿಯವರು ಡ್ರೆಸಿಂಗ್ ರೂಮ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಆಗ ಹೊರಗಿನಿಂದ ಅಭಿಮಾನಿಯೊಬ್ಬ ಚೋಕ್ಲಿ.. ಚೋಕ್ಲಿ ಎಂದು ಕೂಗಿದ್ದಾನೆ. ಆಗ ಪ್ರಾಕ್ಟೀಸ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯವರು ಬೇಸರದಿಂದಲೇ ಹೊರಗಡೆ ನೋಡಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ ಫಿಟ್ನೆಸ್ ಇಲ್ಲದಿದ್ರೆ ಗೇಟ್ಪಾಸ್.. ಗಂಭೀರ್ ಗುಟುರು!
ಸದ್ಯ ವಿರಾಟ್ ಕೊಹ್ಲಿಯವರಿಗೆ ಚೋಕ್ಲಿ.. ಚೋಕ್ಲಿ ಎಂದು ಕರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಚೋಕ್ಲಿ ಎಂದರೆ ಅವಹೇಳನಕಾರಿ ಪದ ಎನ್ನಲಾಗಿದೆ. ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಸ್ಗಳು ವೈಫಲ್ಯ ಅನುಭವಿಸಿದಾಗ ಸೋಶಿಯಲ್ ಮೀಡಿಯಾದ ಟ್ರೋಲರ್ಗಳು ಈ ಪದವನ್ನು ಬಳಕೆ ಮಾಡುತ್ತಾರೆ ಎಂದು ತಿಳಿದು ಬಂದಿದೆ.
Someone called Virat Kohli a chokli in front of him in the dressing room of Colombo ground in Sri Lanka, after which Virat got angry.??
No way now Lankan fan's also owning Virat Kohli ???? pic.twitter.com/ru4KbRUfBX
— ???????⁴⁵ (@rushiii_12)
Someone called Virat Kohli a chokli in front of him in the dressing room of Colombo ground in Sri Lanka, after which Virat got angry.😭😭
No way now Lankan fan's also owning Virat Kohli 🙏😹😹😹 pic.twitter.com/ru4KbRUfBX— 𝐑𝐮𝐬𝐡𝐢𝐢𝐢⁴⁵ (@rushiii_12) July 31, 2024
">July 31, 2024
3 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾದ ವಿರುದ್ಧ ಭಾರತ ಆಡಲಿದೆ. ಇದಕ್ಕಾಗಿ ವಿರಾಟ್ ಕೊಹ್ಲಿ, ರೋಹಿತ್ ಸೇರಿದಂತೆ 15 ಆಟಗಾರರು ಟೀಮ್ ಈಗಾಗಲೇ ಶ್ರೀಲಂಕಾವನ್ನು ತಲುಪಿ ಅಭ್ಯಾಸ ಪ್ರಾರಂಭಿಸಿದೆ. ಇನ್ನು ಗೌತಮ್ ಗಂಭೀರ್ ಅವರು ಹೆಡ್ ಕೋಚ್ ಆದ ಮೇಲೆ ಇದೇ ಅವರ ಮೊದಲ ಏಕದಿನ ಸರಣಿ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ