ಐಪಿಎಲ್​​ 2025: ಆರ್​​​ಸಿಬಿ ತಂಡಕ್ಕೆ ವಿರಾಟ್​ ಕೊಹ್ಲಿಯೇ ಕ್ಯಾಪ್ಟನ್​​

author-image
Ganesh Nachikethu
Updated On
RCBvsRR: ಭಯೋತ್ಪಾದಕರೆಂಬ ಶಂಕೆ, ನಾಲ್ವರ ಬಂಧನ.. ಆರ್​ಸಿಬಿ ಅಭ್ಯಾಸ ರದ್ದು
Advertisment
  • ಎರಡು ದಿನಗಳ ಕಾಲ 2025ರ ಐಪಿಎಲ್​ ಮೆಗಾ ಹರಾಜು
  • ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರರ ಖರೀದಿಸಿದ ಆರ್​ಸಿಬಿ
  • ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡದ ಕ್ಯಾಪ್ಟನ್​ ಯಾರು..?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ.

ಸದ್ಯ ಎಲ್ಲರ ಈ ಪ್ರಶ್ನೆಗೆ ಆರ್​​ಸಿಬಿ ತಂಡದಿಂದ ಕೇಳಿ ಬರುತ್ತಿರೋ ಏಕೈಕ ಉತ್ತರ ವಿರಾಟ್​ ಕೊಹ್ಲಿ. ಮುಂದಿನ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ವಿರಾಟ್​ ಕೊಹ್ಲಿಯೇ ಮುನ್ನಡೆಸುವುದು ಬಹುತೇಕ ಕನ್ಫರ್ಮ್​​ ಆಗಿದೆ.

ಆರ್​ಸಿಬಿ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್​ ಮಾಡಿಕೊಂಡಿತ್ತು. ಜತೆಗೆ ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್​​ಸಿಬಿ ಯಾವುದೇ ಕ್ಯಾಪ್ಟನ್​​ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್​ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್​ ಎಂದು ಹೇಳಲಾಗುತ್ತಿದೆ.

ವಿರಾಟ್​ ಕೊಹ್ಲಿ ಮತ್ತೆ ಕ್ಯಾಪ್ಟನ್​​

ಐಪಿಎಲ್ ಪ್ರಾರಂಭವಾದ 2008ರಿಂದಲೂ ಕೊಹ್ಲಿ ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಒಮ್ಮೆಯೂ ಕೊಹ್ಲಿ ಐಪಿಎಲ್ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ 2022 ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಬಳಿಕ ಐಪಿಎಲ್​​ನಲ್ಲೂ ಆರ್​​ಸಿಬಿ ಕ್ಯಾಪ್ಟನ್ಸಿಗೂ ವಿದಾಯ ಹೇಳಿದ್ರು. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಆಗೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ಅಭಿಮಾನಿಗಳು ಕೂಡಲೇ ಕೊಹ್ಲಿಯನ್ನು ಕ್ಯಾಪ್ಟನ್​​ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ.

ಇದನ್ನೂ ಓದಿ:ಮೆಗಾ ಆಕ್ಷನ್​ ಮುಗಿದ ಬೆನ್ನಲ್ಲೇ ಆರ್​​ಸಿಬಿಗೆ ಬಿಗ್​ ಶಾಕ್​​; ಫ್ಯಾನ್ಸ್​ಗೆ ಭಾರೀ ನಿರಾಸೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment