ಆರ್​​​ಸಿಬಿಗೆ ಬಿಗ್​​ ಸರ್ಪ್ರೈಸ್​​ ಕೊಟ್ಟ ವಿರಾಟ್​; ಮೆಗಾ ಆಕ್ಷನ್​​ಗೆ ಮುನ್ನವೇ ಕೊಹ್ಲಿಯಿಂದ ಮಹತ್ವದ ನಿರ್ಧಾರ

author-image
Ganesh Nachikethu
Updated On
ಆರ್​​​ಸಿಬಿಗೆ ಬಿಗ್​​ ಸರ್ಪ್ರೈಸ್​​ ಕೊಟ್ಟ ವಿರಾಟ್​; ಮೆಗಾ ಆಕ್ಷನ್​​ಗೆ ಮುನ್ನವೇ ಕೊಹ್ಲಿಯಿಂದ ಮಹತ್ವದ ನಿರ್ಧಾರ
Advertisment
  • 2025ರಲ್ಲಿ ನಡೆಯುವ ಐಪಿಎಲ್​​ ಸೀಸನ್‌ಗಾಗಿ ಈಗಿನಿಂದಲೇ ಆರ್​​ಸಿಬಿ ಪ್ಲಾನ್!
  • ಹೇಗಾದ್ರೂ ಮಾಡಿ ಮುಂದಿನ ವರ್ಷ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ ಆರ್​​ಸಿಬಿ
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸರ್ಪ್ರೈಸ್​ ಕೊಟ್ಟ ವಿರಾಟ್ ಕೊಹ್ಲಿ

ಕಳೆದ 17 ವರ್ಷಗಳಿಂದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಟ್ರೋಫಿ ಗೆಲ್ಲೋ ಕನಸು ಮುಂದುವರಿದಿದೆ. ಹಾಗಾಗಿ ಈ ಸಲ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಆರ್​​​ಸಿಬಿ ಜಿದ್ದಿಗೆ ಬಿದ್ದಿದೆ.

ಆರ್​ಸಿಬಿ ಫೈನಲ್​ ಪ್ರವೇಶಿಸಿ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್​​ನಲ್ಲೂ ಆರ್​ಸಿಬಿ ಪ್ಲೇ ಆಫ್​​ಗೆ ಹೋಗಿ ಎಡವಿತು. ಇದರ ಪರಿಣಾಮ ಮುಂದಿನ ಸೀಸನ್​ಗೆ ತಂಡದ ಕ್ಯಾಪ್ಟನ್ಸಿ ಬದಲಾಗಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಆರ್​ಸಿಬಿ ತಂಡದ ಪ್ರೆಸೆಂಟ್​ ಕ್ಯಾಪ್ಟನ್​ ಫಾಫ್ ಡುಪ್ಲೆಸಿಸ್​ಗೆ ಈಗ 40 ವರ್ಷ. ಹೀಗಾಗಿ ಮುಂದಿನ ಸೀಸನ್​ಗೆ ಹೊಸ ಕ್ಯಾಪ್ಟನ್​​ ಜತೆಗೆ ಕಣಕ್ಕಿಳಿಯೋ ಪ್ಲಾನ್​ ಮಾಡಿಕೊಂಡಿದೆ.

ಕೊಹ್ಲಿಗೆ ಮತ್ತೆ ಕ್ಯಾಪ್ಟನ್ಸಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ. ಇವರು ಈಗಾಗಲೇ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿ ಫ್ರೀ ಆಗಿದ್ದಾರೆ. ಈ ಹಿಂದೆ ಭಾರತ ತಂಡದ ನಾಯಕತ್ವದ ಹೊರೆಯ ಕಾರಣ ನೀಡಿ ಕೊಹ್ಲಿ ಆರ್​ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ಕೊಟ್ಟಿದ್ರು. ಈಗ ಟೀಮ್​ ಇಂಡಿಯಾ ನಾಯಕತ್ವದಿಂದ ಕೆಳಗಿಳಿದಿದ್ದು, ಕೊಹ್ಲಿಗೆ ಮತ್ತೆ ಆರ್​​​ಸಿಬಿ ಕ್ಯಾಪ್ಟನ್ಸಿ ನೀಡಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

publive-image

ಆರ್​​​ಸಿಬಿಗೆ ಸರ್ಪ್ರೈಸ್​ ಕೊಟ್ಟ ಕೊಹ್ಲಿ

ಭಾರತ ತಂಡದ ಮೂರು ಮಾದರಿ ಕ್ಯಾಪ್ಟನ್ಸಿಯಿಂದಲೂ ಕೊಹ್ಲಿ ಕೆಳಗಿಳಿದಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೂ ವಿದಾಯ ಹೇಳಿರೋ ಕಾರಣ ಕೊಹ್ಲಿ ಆರ್​​ಸಿಬಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬಹುದು. ಹೀಗಾಗಿ ವಿರಾಟ್ ಕೊಹ್ಲಿ ಮತ್ತೆ ಆರ್​ಸಿಬಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಅದರಂತೆ ಮುಂದಿನ ಸೀಸನ್​ಗೆ ಇವರೇ ಆರ್​​ಸಿಬಿ ಕ್ಯಾಪ್ಟನ್​ ಎನ್ನುವ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ ಈ ಬಗ್ಗೆ ಕೊಹ್ಲಿ ಆರ್​​ಸಿಬಿ ಫ್ರಾಂಚೈಸಿಗೆ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ.

RCB ಕ್ಯಾಪ್ಟನ್​ ಆಗಿ ಕೊಹ್ಲಿ ಸಾಧನೆ

ವಿರಾಟ್​​ ಕೊಹ್ಲಿ ಆರ್​​ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ಪೈಕಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಇವರ ನಾಯಕತ್ವದಲ್ಲೇ ಆರ್​ಸಿಬಿ 2016ರಲ್ಲಿ ಫೈನಲ್​ಗೆ ಪ್ರವೇಶಿಸಿತ್ತು. ಜತೆಗೆ ಮೂರು ಸಲ ಪ್ಲೇ ಆಫ್ಸ್ ಆಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment