newsfirstkannada.com

ಸೂರ್ಯ, ರೋಹಿತ್​​​​-ಬಾಬರ್​​ ಅಲ್ಲ.. ಟಿ20 ಕ್ರಿಕೆಟ್​​ನಲ್ಲಿ ಈಗಲೂ ಕೊಹ್ಲಿಯೇ ನಂ. 1

Share :

Published January 12, 2024 at 5:28pm

    ಟಿ20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಪಟ್ಟಿ

    ಸಾರ್ವಕಾಲಿಕ ಪಟ್ಟಿಯಲ್ಲಿ ಪಾಕ್​ ಮಾಜಿ ಕ್ಯಾಪ್ಟನ್​ಗೆ 3ನೇ ಸ್ಥಾನ

    ಸೂರ್ಯಕುಮಾರ್​, ಬಾಬರ್​ ಅಲ್ಲ, ಈಗಲೂ ಕೊಹ್ಲಿ ನಂಬರ್​ 1

ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮಾಜಿ ಕ್ಯಾಪ್ಟನ್​​​ ಬಾಬರ್​ ಅಜಂ 57 ರನ್​​ ಸಿಡಿಸೋ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 105 ಪಂದ್ಯಗಳಲ್ಲಿ ಬರೋಬ್ಬರಿ 3542 ರನ್ ಗಳಿಸಿದ ಬಾಬರ್​​​ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಇನ್ನು, ಭಾರತ ತಂಡದ ಮಾಜಿ ಕ್ಯಾಪ್ಟನ್​​ ವಿರಾಟ್ ಕೊಹ್ಲಿ 115 ಪಂದ್ಯಗಳಿಂದ ಬರೋಬ್ಬರಿ 4008 ರನ್ ಗಳಿಸಿದ್ದಾರೆ. ಈ ಮೂಲಕ ಕಿಂಗ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಇತ್ತೀಚೆಗೆ ಟಿ20 ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ ರೋಹಿತ್ ಶರ್ಮಾ 148 ಪಂದ್ಯಗಳಿಂದ 3853 ರನ್‌ ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಅನುಭವಿ ಬ್ಯಾಟರ್​ಗಳು. ಇಬ್ಬರು ಟಿ20 ಕ್ರಿಕೆಟ್​​ನಲ್ಲಿ ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್​ ಮಾತ್ರ ಇಬ್ಬರಿಗಿಂತಲೂ ಹಿಂದಿದ್ದಾರೆ.

2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಟಿ20 ವಿಶ್ವಕಪ್​​ ನಡೆಯಲಿದೆ. ಜೂನ್ 1ನೇ ತಾರೀಕಿನಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರೋ 2024ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಹೀಗಾಗಿ ಈ ತಂಡಗಳ ವಿರುದ್ಧ ಗೆಲ್ಲಲು ಬಲಿಷ್ಠ ಭಾರತ ತಂಡ ಬೇಕಿದೆ. ಈ ಹೊತ್ತಲ್ಲೇ ಕ್ಯಾಪ್ಟನ್​​​ ರೋಹಿತ್​​ ಶರ್ಮಾ, ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಇಬ್ಬರು ಭಾರತ ಟಿ20 ತಂಡದ ಭಾಗವಾಗಿ ಇರಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯ, ರೋಹಿತ್​​​​-ಬಾಬರ್​​ ಅಲ್ಲ.. ಟಿ20 ಕ್ರಿಕೆಟ್​​ನಲ್ಲಿ ಈಗಲೂ ಕೊಹ್ಲಿಯೇ ನಂ. 1

https://newsfirstlive.com/wp-content/uploads/2024/01/Kohli_SYK_Babar.jpg

Load More