Advertisment

KL​​ ರಾಹುಲ್​​ ಕೈ ಬಿಟ್ಟ ಬೆಂಗಳೂರು; RCB ವಿರುದ್ಧ ವಿರಾಟ್​ ಕೊಹ್ಲಿ ಅಸಮಾಧಾನ

author-image
Ganesh Nachikethu
Updated On
KL ರಾಹುಲ್​​​ ಬಗ್ಗೆ ಬಿಗ್​ ಅಪ್ಡೇಟ್​​; ಕನ್ನಡಿಗನ ಖರೀದಿಗೆ RCB ಸೇರಿ ಈ ತಂಡಗಳ ಮಧ್ಯೆ ಪೈಪೋಟಿ
Advertisment
  • 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್ ಮೆಗಾ ಹರಾಜು
  • ಹರಾಜಿನಲ್ಲಿ ಕೆ.ಎಲ್​ ರಾಹುಲ್​ ಕೈಬಿಟ್ಟ ಆರ್​ಸಿಬಿ ಟೀಮ್​​!
  • ಆರ್​​ಸಿಬಿ ತಂಡದ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಕ್ತಾಯಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ವಿಶೇಷ ಎಂದರೆ ಆರ್​​ಸಿಬಿ ತಂಡವನ್ನು ವಿರಾಟ್​ ಕೊಹ್ಲಿ ಅವರೇ ಮತ್ತೆ ಮುನ್ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

Advertisment

ಮೆಗಾ ಹರಾಜಿಗೂ ಮುನ್ನ ಆರ್​​ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್​ ಮಾಡಿಕೊಂಡಿತ್ತು. ಈಗ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್​​ಸಿಬಿ ಯಾವುದೇ ಕ್ಯಾಪ್ಟನ್​​ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್​ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್​ ಎಂದು ಹೇಳಲಾಗುತ್ತಿದೆ.

80ಕ್ಕೂ ಹೆಚ್ಚು ಕೋಟಿಯೊಂದಿಗೆ ಹರಾಜಿಗೆ ಬಂದ ಆರ್​​​ಸಿಬಿ ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿತ್ತು. 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್​​ಸಿಬಿ ಜೋಶ್‌ ಹೇಜಲ್​ವುಡ್‌ಗೆ 12.50 ಕೋಟಿ, ಫಿಲ್ ಸಾಲ್ಟ್​​ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್​ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್‌ಸ್ಟೋನ್​ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಈ ಬಗ್ಗೆ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಹ್ಲಿ ಅಸಮಾಧಾನ

ಇನ್ನು, ಈ ಕುರಿತು ಮಾತಾಡಿರೋ ಆರ್​​ಸಿಬಿ ಡೈರೆಕ್ಟರ್​ ಬೊಬಾಟ್​​ ಅವರು, ಮೊದಲ ದಿನದ ಆಕ್ಷನ್​ ಬಳಿ ಕೊಹ್ಲಿ ಕೆಲವು ಮೆಸೇಜ್​ಗಳನ್ನು ಕಳಿಸಿದ್ರು. ನಮ್ಮ ಆಕ್ಷನ್​​ ಸ್ಟಾಟರ್ಜಿ ಬಗ್ಗೆ ಖುಷಿ ಇರಲಿಲ್ಲ. ಕೊಹ್ಲಿ ಫೀಡ್​ ಬ್ಯಾಕ್​ ನಂತರ ನಮ್ಮ ಪ್ಲಾನ್​​ ಬದಲಿಸಿದೆವು ಎಂದರು. ಮೂಲಗಳ ಪ್ರಕಾರ ಕೆ.ಎಲ್​ ರಾಹುಲ್, ಮೊಹಮ್ಮದ್​ ಸಿರಾಜ್​ ಅವರನ್ನು ಬಿಟ್ಟಿದ್ದಕ್ಕೆ ವಿರಾಟ್​ ಕೊಹ್ಲಿ ಅಸಮಾಧಾನ ಹೊರಹಾಕಿದ್ರು ಎಂದು ತಿಳಿದು ಬಂದಿದೆ.

Advertisment

2025ರ ಐಪಿಎಲ್‌ಗೆ ಆರ್​​ಸಿಬಿ ತಂಡ ಹೀಗಿದೆ!

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ದೇವದತ್ ಪಡಿಕ್ಕಲ್ , ಜಾಕೋಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಕೃನಾಲ್‌ ಪಾಂಡ್ಯ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಧಾರ್, ಜೋಶ್ ಹೇಜಲ್‌ವುಡ್‌, ಸುಯಶ್ ಶರ್ಮಾ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಯಶ್ ದಯಾಳ್.

ಇದನ್ನೂ ಓದಿ: IPL ಮೆಗಾ ಆಕ್ಷನ್​​: ಕೋಟಿ ಕೋಟಿ ಸುರಿದು RCB ಖರೀದಿಸಿದ ದುಬಾರಿ ಆಟಗಾರರು ಇವ್ರೇ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment