2ನೇ ಏಕದಿನ ಪಂದ್ಯಕ್ಕೆ ಮುನ್ನ ಭಾರತಕ್ಕೆ ಭರ್ಜರಿ ಗುಡ್​ನ್ಯೂಸ್​; ಸ್ಟಾರ್​ ಪ್ಲೇಯರ್​ ಎಂಟ್ರಿಯಿಂದ ಆನೆಬಲ

author-image
Ganesh Nachikethu
Updated On
2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!
Advertisment
  • ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ
  • 2ನೇ ಏಕದಿನ ಪಂದ್ಯದಲ್ಲೂ ಗೆಲ್ಲಲು ಭಾರತ ಪ್ಲಾನ್​..!
  • ಇದರ ಮಧ್ಯೆ ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್​​ಗಳಿಂದ ಭರ್ಜರಿ ಗೆಲುವು ಸಾಧಿಸಿರೋ ಟೀಮ್​ ಇಂಡಿಯಾ 2ನೇ ಮ್ಯಾಚ್​​ ಗೆಲ್ಲಲು ಮುಂದಾಗಿದೆ. ಈ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ.

ಒಂದೆಡೆ ಸರಣಿ ಗೆಲ್ಲಲು ಟೀಮ್​ ಇಂಡಿಯಾ ಎದುರು ನೋಡುತ್ತಿದ್ದರೆ, ಇನ್ನೊಂದೆಡೆ 2ನೇ ಪಂದ್ಯ ಗೆದ್ದು ಸೀರೀಸನ್ನು 1-1 ಅಂತರದಿಂದ ಸಮಬಲಗೊಳಿಸಬೇಕು ಎಂದು ಮುಂದಾಗಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಒಂದು ಸಿಕ್ಕಿದೆ.

ವಿರಾಟ್​ ಕೊಹ್ಲಿ ಲಭ್ಯ

ಇಂಜುರಿಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು ವಿರಾಟ್ ಕೊಹ್ಲಿ. ಇವರು 2ನೇ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿದ್ದಾರೆ. ಹಾಗಾಗಿ ತಂಡದಲ್ಲಿ ಆಡುವುದು ಬಹುತೇಕ ಖಚಿತ ಎಂದು ವರದಿ ಆಗಿದೆ.


">February 7, 2025

ಕ್ಯಾಪ್ಟನ್​ ರೋಹಿತ್​ ಶರ್ಮಾ ಏನಂದ್ರು?

ಇನ್ನು, ವಿರಾಟ್ ಕೊಹ್ಲಿ ಬಲಗಾಲಿನ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಈಗ ಸಂಪೂರ್ಣ ಫಿಟ್​ ಆಗಿದ್ದು, 2ನೇ ಪಂದ್ಯ ಆಡಲಿದ್ದಾರೆ ಎಂದರು.

ಏಕದಿನ ಸರಣಿಗೆ ಟೀಮ್​ ಇಂಡಿಯಾ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ.

ಇದನ್ನೂ ಓದಿ:ಭಾರತದ ಈ ಸ್ಟಾರ್​ ಪ್ಲೇಯರ್​ ನಿವೃತ್ತಿ ಘೋಷಿಸಲು ನಾವೇ ಕಾರಣ; ಸ್ಫೋಟಕ ಸತ್ಯ ಬಿಚ್ಚಿಟ್ಟ ರೋಹಿತ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment