newsfirstkannada.com

ಕನ್ನಡಿಗ ಭರ್ಜರಿ ಬ್ಯಾಟಿಂಗ್​​​; ಮೈದಾನದಲ್ಲೇ KL ರಾಹುಲ್​​ಗೆ ಕಿಸ್​ ಕೊಟ್ಟ ಕೊಹ್ಲಿ!

Share :

Published October 1, 2024 at 7:03pm

    ಬಾಂಗ್ಲಾದೇಶದ ಬೌಲರ್​ಗಳ ಬೆವರಿಳಿಸಿದ ಕೆ.ಎಲ್​ ರಾಹುಲ್​​

    ಟೀಮ್​ ಇಂಡಿಯಾ ಪರ ಕನ್ನಡಿಗ ಕೆ.ಎಲ್​ ರಾಹುಲ್​ ಅಬ್ಬರ..!

    ಕೆ.ಎಲ್​ ರಾಹುಲ್​​ ಅಬ್ಬರದ ಬ್ಯಾಟಿಂಗ್​​ಗೆ ಬೆಚ್ಚಿಬಿದ್ದ ಬಾಂಗ್ಲಾ

ಕಾನ್​​ಪುರ ಇಂಟರ್​​ ನ್ಯಾಷನಲ್​​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮಹತ್ವದ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ 2-0 ಅಂತರದಿಂದ ಟೀಮ್​ ಇಂಡಿಯಾ ಕ್ಲೀನ್​ ಸ್ವೀಪ್​ ಮಾಡಿದೆ. ಭಾರತದ ಗೆಲುವಿಗೆ ಕೆ.ಎಲ್​ ರಾಹುಲ್​ ಕಾರಣ ಎಂದು ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಹೇಳಿದ್ದಾರೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​ನಲ್ಲಿ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಮ್​​ ಇಂಡಿಯಾ ಪರ ಟಿ20 ಶೈಲಿಯಲ್ಲಿ ಬ್ಯಾಟಿಂಗ್​​ ಮಾಡಿದ ಯಶಸ್ವಿ ಜೈಸ್ವಾಲ್​​ ಕೇವಲ 51 ಬಾಲ್​​ನಲ್ಲಿ 72 ರನ್​ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 12 ಫೋರ್​​, 2 ಸಿಕ್ಸರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 140ಕ್ಕೂ ಹೆಚ್ಚಿತ್ತು.

ಯಶಸ್ವಿ ಜೈಸ್ವಾಲ್​​ ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟೀಮ್​ ಇಂಡಿಯಾಗೆ ಆಸರೆಯಾದ ಕೊಹ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಕೇವಲ 35 ಬಾಲ್​ನಲ್ಲಿ 47 ರನ್​​ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಇಡೀ ಇನ್ನಿಂಗ್ಸ್​ ಉದ್ದಕ್ಕೂ ಬಾಂಗ್ಲಾ ಬೌಲರ್ಸ್​ ಬೆಂಡೆತ್ತಿದ್ರು.

ಕೆ.ಎಲ್​ ರಾಹುಲ್​ ಆರ್ಭಟ

ಇನ್ನು, ಕೊಹ್ಲಿಗೆ ಸಾಥ್​ ನೀಡಿದ ಕೆ.ಎಲ್​ ರಾಹುಲ್​​​ ಅಬ್ಬರಿಸಿದ್ರು. ಕೇವಲ 33 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶಕತ ಸಿಡಿಸಿದ್ರು. ತಾನು ಎದುರಿಸಿದ 43 ಬಾಲ್​ನಲ್ಲಿ ಬರೋಬ್ಬರಿ 2 ಸಿಕ್ಸರ್​​, 7 ಫೋರ್​ನೊಂದಿಗೆ 68 ರನ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ 158ಕ್ಕೂ ಹೆಚ್ಚಿತ್ತು.

ಕನ್ನಡಿಗನಿಗೆ ಕಿಸ್​ ಕೊಟ್ಟ ಕೊಹ್ಲಿ

ಮೈದಾನದಲ್ಲೇ ಕೆ.ಎಲ್​ ರಾಹುಲ್​​​ ಅರ್ಧಶತಕ ಬಾರಿಸಿದ ಕೂಡಲೇ ವಿರಾಟ್​ ಕೊಹ್ಲಿ ಕಿಸ್​ ಕೊಟ್ಟರು. ಖುಷಿಯಲ್ಲಿ ಹತ್ತಿರಕ್ಕೆ ಹೋಗಿ ಕೆ.ಎಲ್​ ರಾಹುಲ್​ಗೆ ಕಿಸ್​ ಮಾಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗ ಭರ್ಜರಿ ಬ್ಯಾಟಿಂಗ್​​​; ಮೈದಾನದಲ್ಲೇ KL ರಾಹುಲ್​​ಗೆ ಕಿಸ್​ ಕೊಟ್ಟ ಕೊಹ್ಲಿ!

https://newsfirstlive.com/wp-content/uploads/2024/10/KL-Rahul_Kohli-Kiss.jpg

Load More