ಆರ್​ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಫ್ಯಾನ್ಸ್​ಗೆ ಗೊತ್ತಿರಲಿ..

author-image
Ganesh
Updated On
ಆರ್​ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಫ್ಯಾನ್ಸ್​ಗೆ ಗೊತ್ತಿರಲಿ..
Advertisment
  • ಇದು ಕಿಂಗ್​ ಕೊಹ್ಲಿ ಮತ್ತು ಕೆಮಿಸ್ಟ್ರಿಯ ಸಖತ್​ ಕಥೆ
  • ಅದೇ ಕೊಹ್ಲಿ, ಬೇರೆ ಬೇರೆ ಸ್ಟಾರ್ಸ್​.. ಜಬರ್ದಸ್ತ್​​​ ಆಟ
  • ಕಿಂಗ್​ ಕೊಹ್ಲಿ -​ ಸೂಪರ್ ಸಾಲ್ಟ್.. ಫ್ಯಾನ್ಸ್​​ಗೆ ಹಬ್ಬ

ಯಾರೇ ಬರಲಿ.. ಯಾರೇ ಹೋಗಲಿ.. ಆರ್​​ಸಿಬಿ ಫ್ರಾಂಚೈಸಿ ಪರ ಕನ್ಸಿಸ್ಟೆಂಟ್​ ಆಗಿ ಉಳಿದಿರೋದು ಕೊಹ್ಲಿ ಮಾತ್ರ. ಪ್ರತಿ ಬಾರಿ ಹೊಸಬರ ಎಂಟ್ರಿಯಾಗುತ್ತೆ. ಅಷ್ಟೇ ವೇಗವಾಗಿ ಕೊಹ್ಲಿ ಜೊತೆ ಹೊಂದಿಕೊಳ್ತಾರೆ. ಕೊಹ್ಲಿ ಮತ್ತು ಕೆಮಿಸ್ಟ್ರಿಯ ಕಥೆ ಸಖತ್ತಾಗಿದೆ. ಕೊಹ್ಲಿ ಮತ್ತು ಸೂಪರ್​​ ಸ್ಟಾರ್​ಗಳ ಜುಗುಲ್​ಬಂಧಿಯ ಸ್ಪೆಷಲ್​ ಸ್ಟೋರಿ ಇಲ್ಲಿದೆ.

ಸೀಸನ್​ನಿಂದ ಸೀಸನ್​​ಗೆ ಆರ್​​ಸಿಬಿ ಬದಲಾಗ್ತಾನೇ ಇದೆ. ಹೊಸಬರು ಬರ್ತಿದ್ದಾರೆ. ಹಳಬರು ಹೋಗ್ತಿದ್ದಾರೆ. ಬದಲಾಗದೇ ಇರೋ ಒಂದು ವಿಚಾರ ಅಂದ್ರೆ ಕೊಹ್ಲಿ ಮಾತ್ರ. ಸೀಸನ್ ಒಂದರಿಂದಲೂ ಆರ್​​ಸಿಬಿ ಭಾಗವಾಗಿದ್ದಾರೆ. ತಂಡಕ್ಕೆ ಹೊಸದಾಗಿ ಯಾರೇ ಬರಲಿ ಅವರ ಜೊತೆ ಅಷ್ಟೇ ವೇಗವಾಗಿ ಕೊಹ್ಲಿ ಜೆಲ್ಅಪ್​ ಆಗ್ತಾರೆ. ಈಗ ಸಾಲ್ಟ್​, ಈ ಹಿಂದೆ ಫಾಫ್​ ಡುಪ್ಲೆಸಿ, ಅದಕ್ಕೂ ಹಿಂದೆ ಕ್ರಿಸ್​ಗೇಲ್​, ಎಬಿ ಡಿವಿಲಿಯರ್ಸ್​. ಎಲ್ಲರ ಜೊತೆಗಿನ ಭಾಂದವ್ಯವೂ ಕೊಹ್ಲಿ ಮತ್ತು ಕೆಮಿಸ್ಟ್ರಿಯ ಕಥೆ ಹೇಳ್ತಿವೆ. ಆಫ್​ ಫೀಲ್ಡ್​ ಮಾತ್ರವಲ್ಲ.. ಆನ್​ ಫೀಲ್ಡ್​ನಲ್ಲೂ ಈ ಕೆಮಿಸ್ಟ್ರಿ ಸಖತ್​ ವರ್ಕೌಟ್​ ಆಗ್ತಿದೆ.

ಇದನ್ನೂ ಓದಿ: ಅಭಿಷೇಕ್ ಶರ್ಮಾಗೆ ಚಮಕ್ ಕೊಟ್ಟ ಮುಂಬೈ ಕ್ಯಾಪ್ಟನ್​.. ಯಂಗ್ ಬ್ಯಾಟರ್​ನ ಅರ್ಧಶತಕ ಮಿಸ್​ ​

publive-image

ಕಿಂಗ್​ ಕೊಹ್ಲಿ -​ ಸೂಪರ್ ಸಾಲ್ಟ್.. ಫ್ಯಾನ್ಸ್​​ಗೆ ಹಬ್ಬ

ಈ ಸೀಸನ್​ನಲ್ಲಿ ಆರ್​​ಸಿಬಿ ಸೇರಿರೋ ಫಿಲ್​ ಸಾಲ್ಟ್​ ಭರ್ಜರಿ ಆಟವಾಡ್ತಿದ್ದಾರೆ. ಅದ್ರಲ್ಲೂ ಸಾಲ್ಟ್​ - ಕೊಹ್ಲಿಯ ಜೊತೆಯಾಟ ಫ್ಯಾನ್ಸ್​ಗೆ ಸಖತ್​ ಎಂಟರ್​ಟೈನ್​ಮೆಂಟ್​ ನೀಡ್ತಿದೆ. ಅಗ್ರೆಸ್ಸಿವ್​ ಆರಂಭ ನೀಡ್ತಿರೋ ಇವ್ರು 6 ಇನ್ನಿಂಗ್ಸ್​ಗಳಿಂದ 305 ರನ್​ ಕೊಳ್ಳೆ ಹೊಡೆದಿದ್ದಾರೆ. ಇವರಿಬ್ಬರ ಜೊತೆಯಾಟದ ಸರಾಸರಿ ಎಷ್ಟು ಗೊತ್ತಾ? 50.83!

ಇದನ್ನೂ ಓದಿ: ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್​​ ಕೊಟ್ಟ SRH.. ಎಷ್ಟು ರನ್?

publive-image

ಫಾಫ್​ ಜೊತೆ ಕೊಹ್ಲಿ

2023,2024ರಲ್ಲಿ ಫಾಫ್​ ಡುಪ್ಲೆಸಿ ಆರ್​​ಸಿಬಿ ಕ್ಯಾಪ್ಟನ್​ ಆಗಿದ್ರು. ಆಗ ಕೊಹ್ಲಿ-ಡುಪ್ಲೆಸಿ ಆರ್​​ಸಿಬಿಯ ಗೆಲುವಿಗಾಗಿ ಜೋಡೆತ್ತುಗಳಂತೆ ಹೋರಾಡಿದ್ರು. 41 ಇನ್ನಿಂಗ್ಸ್​ಗಳಲ್ಲಿ ಒಟ್ಟಾಗಿ ಬ್ಯಾಟ್​ ಬೀಸಿದ್ದ ಕೊಹ್ಲಿ-ಡುಪ್ಲೆಸಿ 49.56ರ ಸರಾಸರಿಯಲ್ಲಿ 2032 ರನ್​ಗಳ ಜೊತೆಯಾಟವಾಡಿದ್ರು. ಈ ಪೈಕಿ 6 ಶತಕದ ಜೊತೆಯಾಟವಾದ್ರೆ 9 ಅರ್ಧಶತಕದ ಜೊತೆಯಾಟಗಳಾಗಿವೆ.

ABD ಜೊತೆಗಿನ ಸಂಬಂಧ

ಆರ್​​ಸಿಬಿಯ ಆಪತ್ಭಾಂದವ ಎಬಿಡಿ, ಕಿಂಗ್​ ಕೊಹ್ಲಿ.. ಈ ದಿಗ್ಗಜರ ಭಾಂದವ್ಯ ವೆರಿ ವೆರಿ ಸ್ಪೆಷಲ್​.. ಇವರಿಬ್ಬರೂ ಒಟ್ಟಾಗಿ ಗೆಲ್ಲಿಸಿದ ಪಂದ್ಯಗಳು ಅದೆಷ್ಟೋ. ಇವರಿಬ್ಬರನ್ನ ಬಂಧ ಕೇವಲ ಕ್ರಿಕೆಟ್​​ ಸೀಮಿತವಾಗಿದ್ದಲ್ಲ. ಕ್ರಿಕೆಟ್​ನ ಬೌಂಡರಿಯ ಹೊರಗೂ ವೆರಿ ವೆರಿ ಸ್ಪೆಷಲ್​ ಬಾಂಡ್​ ಇವರಿಬ್ಬರದ್ದು. ಆರ್​​ಸಿಬಿಯ ಕಂಡ ಈ ಭಲೇ ಜೋಡಿ ಇಂದಿಗೂ ಅಭಿಮಾನಿಗಳ ಹಾಟ್​ ಫೇವರಿಟ್.

ದೈತ್ಯನ ಜೊತೆ ಸೂಪರ್​ ಡೂಪರ್​ ಆಟ

ಕೆರಿಬಿಯನ್​ ದೈತ್ಯ ಕ್ರಿಸ್​ ಗೇಲ್​-ವಿರಾಟ್​ ಕೊಹ್ಲಿಯ ಪಾರ್ಟ್​ನರ್​ಶಿಪ್​​ಗಳನ್ನ ಮರೆಯೋಕೆ ಸಾದ್ಯವಿಲ್ಲ. ಇಬ್ಬರೂ ಕ್ರಿಸ್​​ ಕಚ್ಚಿ ನಿಂತ್ರು ಅಂದ್ರೆ ಎದುರಾಳಿ ಬೌಲರ್​ಗಳ ಕಥೆ ಮುಗೀತು ಅಂತಲೇ ಅರ್ಥ. ವಿಸ್ಫೋಟಕ ಆಟವಾಡ್ತಿದ್ದ ಈ ಜೋಡಿ ಬೌಲರ್​ಗಳ ಮೇಲೆ ದಂಡಯಾತ್ರೆಯನ್ನೇ ನಡೆಸಿಬಿಡ್ತಿದ್ರು. ಆಡಿದ್ದ 59 ಇನ್ನಿಂಗ್ಸ್​ಗಳಲ್ಲೇ ಈ ಜೋಡಿ 2787 ರನ್​ಗಳ ಕೊಳ್ಳೆ ಹೊಡೆದಿತ್ತು. ಇದ್ರಲ್ಲಿ 9 ಸೆಂಚುರಿ ಪಾರ್ಟನರ್​ಶಿಪ್​ ಆದ್ರೆ 12 ಅರ್ಧಶತಕದ ಜೊತೆಯಾಟ.

ಇದನ್ನೂ ಓದಿ: ಬಲಿಷ್ಠ ಹೈದ್ರಾಬಾದ್​ ಟೀಮ್​ಗೆ ಮುಂಬೈ ಶಾಕ್​.. ಬಿಗ್​​ ಬ್ಯಾಟರ್​ಗಳಿದ್ರೂ ಸೋತ SRH

publive-image

ಆಟಗಾರರು ಯಾರೆ ಆಗಿರಲಿ ಅವರ ಜೊತೆ ಸಲೀಸಾಗಿ ಹೊಂದಿಕೊಂಡು ವಿರಾಟ್​ ಕೊಹ್ಲಿ ಸಾಲಿಡ್​ ಆಟವನ್ನ ಆಡ್ತಾರೆ ಅನ್ನೊದಕ್ಕೆ ಇದಕ್ಕಿಂದ ಬೆಸ್ಟ್​ ಎಕ್ಸಾಂಪಲ್​ ಬೇಕಿಲ್ಲ. ಇತಿಹಾಸದ ಕಥೆ ಬಿಟ್​​ ಬಿಡಣ. ಸದ್ಯ ಫಿಲ್​ ಸಾಲ್ಟ್​ - ವಿರಾಟ್​ ಕೊಹ್ಲಿಯ ಕೆಮಿಸ್ಟ್ರಿ ಸಖತ್​ ಆಗಿ ವರ್ಕೌಟ್​​ ಆಗ್ತಿದೆ. ಇದೇ ಆಟವನ್ನ ಕೊಹ್ಲಿ-ಸಾಲ್ಟ್​ ಮುಂದುವರೆಸಿ ಎದುರಾಳಿಗಳು ಬೌಲರ್​​ಗಳು ನೀರು ಕುಡಿದು, ಕುಡಿದು ಸುಸ್ತಾಗೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಪ್ಯಾಂಟ್ ಚೆಕ್ ಮಾಡಿದ ಸೂರ್ಯಕುಮಾರ್.. ಪಂದ್ಯದ ಮಧ್ಯೆ ಏನಾಯಿತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment