newsfirstkannada.com

ಈ ವಿಚಾರಗಳಿಂದ ವಿರಾಟ್​​​ಗೆ ದಿಗ್ಗಜ ಸ್ಥಾನ ಒಲಿದು ಬಂತು.. ಕೊಹ್ಲಿ ಇಡೀ ವಿಶ್ವವನ್ನೇ ಗೆದ್ದಿದ್ದು ಹೇಗೆ..?

Share :

Published March 30, 2024 at 12:29pm

  ವಿರಾಟ್​ನ ಗ್ರೇಟೆಸ್ಟ್​ ಕ್ರಿಕೆಟರ್ ಆಗಿ ಮಾಡಿದ್ದು ಏನು?

  ಕೊಹ್ಲಿಯ ಯಶಸ್ಸಿನ ಹಿಂದಿರೋ ಸೀಕ್ರೆಟ್​ಗಳೇನು?

  ವಿರಾಟ್ ಕೊಹ್ಲಿ ಯಾಕೆ ​ ಗ್ರೇಟೆಸ್ಟ್​ ಕ್ರಿಕೆಟರ್..?

ವಿರಾಟ್​ ಕೊಹ್ಲಿ ಒಬ್ಬ ಗ್ರೇಟ್​​ ಪ್ಲೇಯರ್​ ಅನ್ನಿಸಿಕೊಂಡಿರೋದು ಹೇಗೆ? ಕ್ರಿಕೆಟ್​​ ಮೈದಾನದಲ್ಲಿ ಆರ್ಭಟಿಸಿ ಇಡೀ ವಿಶ್ವವನ್ನೇ ಗೆದ್ದಿದ್ದು ಹೇಗೆ? ಸಾಮಾನ್ಯ ಕೊಹ್ಲಿ, ಇಂದು ಕಿಂಗ್​ ಕೊಹ್ಲಿ ಆಗಿರೋದ ಹೇಗೆ? ಈ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಬಂದೇ ಬಂದಿರುತ್ತೆ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ. ಈ ಹೆಸರಲ್ಲಿ ಅದೇನೋ ಒಂದು ಪವರ್ ಇದೆ. ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಸಾಕು ಸ್ಟೇಡಿಯಂನಲ್ಲಿ ಕೊಹ್ಲಿ, ಕೊಹ್ಲಿ ಅನ್ನೋ ಚಾಂಟ್ ಮುಗಿಲು ಮುಟ್ಟುತ್ತೆ. ಇದಕ್ಕೆ ಕಾರಣ ಕಿಂಗ್ ಕೊಹ್ಲಿಯ ಇನ್​​ಕ್ರೆಡಿಬಲ್ ಅಚೀವ್​​ಮೆಂಟ್​​. ಈ ಅಸಾಮಾನ್ಯ ಸಾಧನೆಗಳು ದಿಗ್ಗಜ ಸಾಲಿಗೆ ತಂದು ನಿಲ್ಲಿಸಿದೆ. ಕೊಹ್ಲಿಯನ್ನು ಗ್ರೇಟೆಸ್ಟ್​ ಕ್ರಿಕೆಟರ್ ಆಗಿ ಹೊರಹೊಮ್ಮುವಂತೆ ಮಾಡಿದ್ದು ಮಾತ್ರ ಕಿಂಗ್​​ ಕೊಹ್ಲಿ ರೂಢಿಸಿಕೊಂಡ ಈ ಅಂಶಗಳು.

ಶ್ರೇಷ್ಟ ಚೇಸ್​ ಮಾಸ್ಟರ್ ಆ್ಯಂಡ್ ಗ್ರೇಟ್​​ ಫಿನಿಷರ್..!
ಕೊಹ್ಲಿ ಸರ್ವ ಶ್ರೇಷ್ಟ ಚೇಸ್​ ಮಾಸ್ಟರ್ ಆ್ಯಂಡ್ ಮ್ಯಾಚ್ ಫಿನಿಷರ್. ಮ್ಯಾಚ್​ ಸಿಚ್ಯುವೇಶನ್​​ಗೆ ತಕ್ಕಂತೆ ಇನ್ನಿಂಗ್ಸ್​ ಬಿಲ್ಡ್​​ ಮಾಡೋ ಕೊಹ್ಲಿ, ಎದುರಾಳಿಗಾಳ ಲೆಕ್ಕಾಚಾರವನ್ನೇ ತಲೆ ಕೆಳಗಾಗಿಸ್ತಾರೆ. ಗೆಲುವಿಗೆ ಟೊಂಕ ಕಟ್ಟಿ ನಿಂತರೆ ಗುರಿ ಮುಟ್ಟೋವರೆಗೂ ಬಿಡಲ್ಲ.

ಪಂದ್ಯವನ್ನ ಗೆಲ್ಲಲೇಬೇಕು ಎಂಬ ಛಲ ಮತ್ತು ಹಠ
ತಂಡವನ್ನು ಗೆಲ್ಲಿಸಬೇಕು ಎಂಬ ಛಲ, ಹಠ, ತುಡಿತ ಎಲ್ಲರಿಗಿಂತ ಕೊಹ್ಲಿಯಲ್ಲಿ ಸ್ವಲ್ಪ ಹೆಚ್ಚೇ ಇದೆ ಅಂದ್ರೆ ತಪ್ಪಾಗಲ್ಲ. ಮೈದಾನಕ್ಕಿಳಿದ ಮೇಲೆ ಕೊಹ್ಲಿಗೆ ತಂಡವನ್ನ ಗೆಲ್ಲಿಸಬೇಕು ಅನ್ನೋ ಹಠವೇ ಮೋಟಿವೇಷನ್​​ ಆಗಿ ಬದಲಾಗುತ್ತೆ. ಈ ಗೆಲುವಿನ ಗುರಿಯೇ ಅಖಾಡದಲ್ಲಿ ಕೊಹ್ಲಿಯನ್ನ ಕೆರಳಿಸುತ್ತೆ.. ರಣಾಂಗಣದಲ್ಲಿ ಕೊಹ್ಲಿ ಅಕ್ಷರಶಃ ವಾರಿಯರ್​ ಆಗಿ ಬದಲಾಗ್ತಾರೆ. ಅಷ್ಟೇ ಅಲ್ಲ. ತಂಡವನ್ನ ಗೈಡ್​ ಮಾಡುವ ಪರಿಯೂ ವಿರಾಟ್​ ಕೊಹ್ಲಿ ಎಂಬ ಗ್ರೇಟೆಸ್ಟ್​ ಕ್ರಿಕೆಟರ್​ ಆಗಿ ರೂಪಿಸಿದೆ.

ಇಂಡಿಯನ್ ಟೀಮ್​ನಲ್ಲಿ ಫಿಟ್ನೆಸ್ ಕಲ್ಚರ್
ವಿರಾಟ್​ ಕೊಹ್ಲಿಯ ಸಾಧನೆ ಹಿಂದಿನ ಕಾರಣವೇ ಫಿಟ್ನೆಸ್. ಸದಾ ಫಿಟ್ನೆಸ್​ ಮೇಲೆ ಗಮನ ಹರಿಸುವ ವಿರಾಟ್, ತಾವಷ್ಟೇ ಅಲ್ಲ. ಇಡೀ ಟೀಮ್ ಇಂಡಿಯಾದಲ್ಲೇ ಫಿಟ್ನೆಸ್ ಕ್ರಾಂತಿ ಮಾಡಿದ್ದರು. ಕ್ರಿಕೆಟರ್​​​​​​​​​​​​​​​​​​​​​​​​​​​​​ಗಳನ್ನ ಅಥ್ಲೆಟ್​​ಗಳಾನ್ನಾಗಿ ಮಾಡಿದ ಖ್ಯಾತಿ ಕಿಂಗ್ ಕೊಹ್ಲಿಗೆ ಸೇರುತ್ತೆ.

ಕೊಹ್ಲಿಯ ಕಮಿಟ್ಮೆಂಟ್..!

ಕಮಿಟ್ಮೆಂಟ್​​ಗೆ ಮತ್ತೊಂದು ಹೆಸರೇ ವಿರಾಟ್​ ಕೊಹ್ಲಿ. ತಂಡದ ಗೆಲುವಿಗಾಗಿ ಏನಾನ್ನಾದರೂ ಮಾಡುವ ವಿರಾಟ್​​​ನ ರನ್ನಿಂಗ್ ಬಿಟ್​​ವಿನ್​​ದಿ ವಿಕೆಟ್ ಮೀರಿಸುವವರಿಲ್ಲ. ಈ ಓಟದಲ್ಲಿ ವಿರಾಟ್​ ಕೊಹ್ಲಿಯ ಕಮಿಟ್ಮೆಂಟ್, ಎನರ್ಜಿ ಕಾಣಿಸುತ್ತೆ. ಇನ್ನಿಂಗ್ಸ್​ ಮುಗಿಯುವ ತನಕ ದಣಿವರಿಯದ ವೀರನಂತೆ ಕಾಣುತ್ತಾರೆ. ಇದಕ್ಕೆ ಕಾರಣ ಕಿಂಗ್​​ ಕೊಹ್ಲಿಯ ಹಿಂದೆ ಕಠಿಣ ಪರಿಶ್ರಮ ಹಾಗೂ ತ್ಯಾವೇ ಆಗಿದೆ.

ವಿರಾಟ್ ಕೊಹ್ಲಿ ವಿಕೆಟ್ ಮಧ್ಯೆ ಓಡುವಾಗ ಅಪಾರ ಛಲ ​​​​​​​​​​​​​ ಹಾಗೂ ಎನರ್ಜಿ ಇರುತ್ತದೆ. ಬೆಸ್ಟ್ ಆಗಿರುವುದು ಆತನ ಹೆಬ್ಬಯಕೆ. ಹಾಗಾಗಿಯೇ ಆತ ಬೆಸ್ಟ್​. ಅದಕ್ಕಾಗಿ ಫೀಲ್ಡ್​ಗೆ ಬರುವ ಮುಂಚೆಯೇ ಜಿಮ್​ನಲ್ಲಿ ವರ್ಕೌಟ್ ಹಾಗೂ ಡಯಟ್ ಸ್ಟಾರ್ಟ್ ಆಗುತ್ತೆ. ಇದು ವಿರಾಟ್​ಕೊಹ್ಲಿ ಅಡಿಯಲ್ಲಿ ಆಡಿದ ಇತರೆ ಆಟಗಾರರು ಅನುಸರಿಸುವಂತೆ ಮಾಡಿದೆ-ಕೆವಿನ್ ಪೀಟರ್ಸನ್​​​, ಕ್ರಿಕೆಟರ್

ಬೌಲರ್​ಗಳ ಗೇಮ್​ಪ್ಲಾನ್ ಚಿದ್ರಗೊಳಿಸುವ ವೀರ
ಬೌಲರ್ ಯಾರೇ ಆಗಲಿ ವಿರಾಟ್​, ವೀರಾವೇಶ ಮಾತ್ರ ನಿಲ್ಲಲ್ಲ. ಅವರ ಗೇಮ್​ಪ್ಲಾನ್​ಗಳಲ್ಲಿ ಕ್ಷಣಾರ್ಧದಲ್ಲಿ ಚಿಂದಿ ಉಡಾಯಿಸುವ ವಿರಾಟ್, ಬೌಲರ್​ಗಳ ಮೇಲೆ ಪಾರುಪತ್ಯ ಸಾಧಿಸ್ತಾರೆ. ಈ ಕಲೆಯೂ ವಿರಾಟ್​ ಸಕ್ಸಸ್ ಹಿಂದಿನ ಮತ್ತೊಂದು ಸೀಕ್ರೆಟ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಬೌಲರ್​​ಗಳನ್ನ ಲೆನ್ತ್​ ಅನ್ನೇ ದಿಕ್ಕೆಡೆಸುವ ವಿರಾಟ್, ಸೆಟ್ಲ್ಡ್​ ಬೌಲರ್​ಗಳನ್ನೇ ಯಾವ ಲೆನ್ತ್​ನಲ್ಲಿ ಬೌಲಿಂಗ್ ಮಾಡೋದಪ್ಪ ಎಂದು ಯೋಚಿಸುವಂತೆ ಮಾಡುವ ಕಲೆಗಾರಿಕೆ ಇದೆ.

ಈ ಅಂಶಗಳೇ ವಿರಾಟ್​ ಕೊಹ್ಲಿಯನ್ನ ಲೆಜೆಂಡ್​ ಪಟ್ಟಕ್ಕೇರಿಸಿವೆ. ಗೇಟೆಸ್ಟ್​ ಬ್ಯಾಟ್ಸ್​ಮನ್ ಆಗಿ ಮಾಡಿದೆ. ಅಸಂಖ್ಯ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಖಾಯಂ ಸ್ಥಾನವೂ ಸಿಗುವಂತೆ ಮಾಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಿಚಾರಗಳಿಂದ ವಿರಾಟ್​​​ಗೆ ದಿಗ್ಗಜ ಸ್ಥಾನ ಒಲಿದು ಬಂತು.. ಕೊಹ್ಲಿ ಇಡೀ ವಿಶ್ವವನ್ನೇ ಗೆದ್ದಿದ್ದು ಹೇಗೆ..?

https://newsfirstlive.com/wp-content/uploads/2024/03/KOHLI-5-1.jpg

Load More