ವಿರಾಟ್ ಮತ್ತೆ ಮತ್ತೆ ಕೇಳುವ ಹಾಡು ಯಾವುದು ಗೊತ್ತಾ..? ಶಾಕ್ ಆಗ್ತೀರಿ ಎಂದ ಕೊಹ್ಲಿ

author-image
Bheemappa
Updated On
ವಿರಾಟ್ ಮತ್ತೆ ಮತ್ತೆ ಕೇಳುವ ಹಾಡು ಯಾವುದು ಗೊತ್ತಾ..? ಶಾಕ್ ಆಗ್ತೀರಿ ಎಂದ ಕೊಹ್ಲಿ
Advertisment
  • ವಿರಾಟ್ ಕೇಳುವ ಹಾಡು ಹಿಂದಿ, ತೆಲುಗು, ಸಿನಿಮಾದ ಸಾಂಗ್ ಅಲ್ಲ
  • ಕನ್ನಡ ಹಾಡು ಅಲ್ಲವೇ ಅಲ್ಲ, ವಿರಾಟ್ ಕೇಳುವ ಆ ಸುಂದರ ಹಾಡು?
  • ವಿರಾಟ್ ಕೊಹ್ಲಿ ಮತ್ತೆ ಮತ್ತೆ ಕೇಳುವ ಆ ಅದ್ಭುತ ಸಾಂಗ್ ಯಾವುದು?

ಕಳೆದ ಚಾಂಪಿಯನ್​ ಟ್ರೋಫಿಯಿಂದಲೂ ಉತ್ತಮ ಫಾರ್ಮ್​​ನಲ್ಲಿರುವ ವಿರಾಟ್ ಕೊಹ್ಲಿ ಐಪಿಎಲ್​ನಲ್ಲೂ ಅದೇ ಬ್ಯಾಟಿಂಗ್​​ನಿಂದ ಆರ್ಭಟಿಸುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ಆಗಿರುವ ಕಿಂಗ್ ಕೊಹ್ಲಿ, ಐಪಿಎಲ್​ ಪಂದ್ಯಗಳಲ್ಲಿ ಬ್ಯುಸಿ ಇದ್ದರೂ ಸಿನಿಮಾ ಹಾಡುಗಳನ್ನು ಕೇಳುತ್ತಿರುತ್ತಾರೆ. ಆದ್ರೆ ಕಿಂಗ್ ಕೊಹ್ಲಿ ಮತ್ತೆ ಮತ್ತೆ ಕೇಳುವಂತಹ ಆ ಸುಮಧುರ ಹಾಡು ಯಾವುದು?.

ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಸ್ಟಾರ್​ ಬ್ಯಾಟರ್ ಆಗಿದ್ದು ಕಳೆದ 18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿ ಆಡುತ್ತಿರುವುದು ವಿಶೇಷವಾಗಿದೆ. ಕೊಹ್ಲಿ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್​ಪೋರ್ಟ್​, ವಿಮಾನದಲ್ಲಿ ಪ್ರಯಾಣ ಮಾಡುವಾಗ ಅದೊಂದು ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್​ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್​​ಫೋನ್​ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ.

ಇದನ್ನೂ ಓದಿ: ರಿಂಕು ಸಿಂಗ್​​ ಕೆನ್ನೆಗೆ ಕುಲ್​ದೀಪ್​ ಯಾದವ್ ಹೊಡೆದಿದ್ದು ಯಾಕೆ..? ಸ್ಪಷ್ಟನೆ ನೀಡಿದ KKR

publive-image

ವಿರಾಟ್ ಕೊಹ್ಲಿ ಅಭ್ಯಾಸ ಮಾಡುವಾಗ ಹೆಚ್ಚಾಗಿ ಕೇಳುವ ಹಾಡು ಎಂದರೆ ಅದು ತಮಿಳು ಸಿನಿಮಾದ ಹಾಡು. ಅದೇ 2023ರಲ್ಲಿ ರಿಲೀಸ್ ಆಗಿರುವ ನಟ ಸಿಲಂಬರಸನ್ ಅಥವಾ ಸಿಂಬು ಅಭಿನಯದ ಪಾಥು ಥಾಲಾ (Pathu Thala) ಮೂವಿಯ ನೀ ಸಿಂಗಮ್​ ಧಾನ (Nee Singam Dhan) ಎನ್ನುವ ಹಾಡನ್ನು ವಿರಾಟ್​ ಕೊಹ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಇದನ್ನು ಲೈವ್​ನಲ್ಲೇ ಕೊಹ್ಲಿ ತಮ್ಮ ಮೊಬೈಲ್​ನಲ್ಲಿ ಪ್ಲೇ ಮಾಡಿ ತೋರಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಿಮ್ಮ ಫೇವರಿಟ್ ಸಾಂಗ್ ಯಾವುದು ಎಂದು ಕೊಹ್ಲಿ ಅವರನ್ನು ಕೇಳಲಾಗಿರುತ್ತದೆ. ಆಗ ವಿರಾಟ್ ಕೊಹ್ಲಿ, ನಾನು ಮತ್ತೆ ಮತ್ತೆ ಕೇಳುವ ಹಾಡನ್ನು ನೀವು ಕೇಳಿದ್ರೆ ಶಾಕ್ ಆಗ್ತೀರಾ ಎಂದು ತಮ್ಮ ಮೊಬೈಲ್​ನಲ್ಲಿ, ನೀ ಸಿಂಗಮ್​ ಧಾನ ಹಾಡನ್ನು ಪ್ಲೇ ಮಾಡಿದ್ದಾರೆ. ಇನ್ನು ಈ ಹಾಡನ್ನು ಮೂವಿಯಲ್ಲಿ ಸಿಂಗರ್​ ಸಿದ್​​ ಶ್ರೀರಾಮ್ ಹಾಡಿದ್ದು ಇದಕ್ಕೆ ಎ.ಆರ್ ರೆಹಮಾನ್ ಅವರು ಮ್ಯೂಸಿಕ್ ಕಾಂಪೋಸ್ ಮಾಡಿದ್ದಾರೆ.


">May 1, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment