/newsfirstlive-kannada/media/post_attachments/wp-content/uploads/2024/10/Virat-Kohli-1-1.jpg)
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಬರೋಬ್ಬರಿ 12 ವರ್ಷಗಳ ನಂತರ ರಣಜಿ ಆಡಲು ಮುಂದಾಗಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಇನ್ನು, ನಾಳೆ ಅಲ್ಲ ನಾಡಿದ್ದು ಜನವರಿ 30ನೇ ತಾರೀಕಿನಿಂದ ದೆಹಲಿ ಮತ್ತು ರೈಲ್ವೇಸ್ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ಅರುಣ್ ಜೇಟ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ.
ಕೊಹ್ಲಿಗೆ ಕ್ಯಾಪ್ಟನ್ಸಿ
ರಣಜಿ ಟ್ರೋಫಿಯಲ್ಲಿ ದೆಹಲಿ ತಂಡವನ್ನು ಲೀಡ್ ಮಾಡಿ ಎಂದು ವಿರಾಟ್ ಕೊಹ್ಲಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಬಿಗ್ ಆಫರ್ ನೀಡಿದೆ. ಇದಕ್ಕೆ ವಿರಾಟ್ ಕೊಹ್ಲಿ ನೋಡೋಣ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ರೈಲ್ವೇಸ್ ತಂಡದ ವಿರುದ್ಧ ನಡೆಯಲಿರೋ ರಣಜಿ ಪಂದ್ಯದಲ್ಲಿ ದೆಹಲಿಯನ್ನು ಕೊಹ್ಲಿ ಲೀಡ್ ಮಾಡುವ ಸಾಧ್ಯತೆ ಇದೆ.
ಇನ್ನೊಂದೆಡೆ ಕೊಹ್ಲಿ ನಾಯಕತ್ವ ವಹಿಸಲು ನಿರಾಕರಿಸಿದ್ದು, ಯುವ ಬ್ಯಾಟರ್ ಆಯುಷ್ ಬದೋನಿ ಅವರೇ ದೆಹಲಿ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾದಲ್ಲಿ 25 ವರ್ಷದ ಆಟಗಾರನ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ.
ಕೊಹ್ಲಿ 12 ವರ್ಷಗಳ ನಂತರ ರಣಜಿ ಟ್ರೋಫಿ ಟೂರ್ನಿ ಅಖಾಡಕ್ಕಿಳಿದಿದ್ದಾರೆ. ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಂದ ಕೊಹ್ಲಿ ತರಬೇತಿ ಪಡೆಯುತ್ತಿದ್ದಾರೆ.
ದೆಹಲಿ ತಂಡ ಹೀಗಿದೆ!
ಆಯುಷ್ ಬದೋನಿ, ವಿರಾಟ್ ಕೊಹ್ಲಿ, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), ಸನತ್ ಸಾಂಗ್ವಾನ್, ಅರ್ಪಿತ್ ರಾಣಾ, ಮಯಾಂಕ್ ಗುಸೇನ್, ಶಿವಂ ಶರ್ಮಾ, ಸುಮಿತ್ ಮಾಥುರ್, ವಂಶ್ ಬೇಡಿ (ವಿಕೆಟ್ ಕೀಪರ್), ಮಣಿ ಗ್ರೇವಾಲ್, ಹರ್ಷ್ ತ್ಯಾಗಿ, ಸಿದ್ಧಾಂತ್ ಶರ್ಮಾ, ನವದೀಪ್ ಸೈನಿ. , ಯಶ್ ಧುಲ್, ಗಗನ್ ವಾಟ್ಸ್, ಜಾಂಟಿ ಸಿಧು, ಹಿಮ್ಮತ್ ಸಿಂಗ್, ವೈಭವ್ ಕಂಡ್ಪಾಲ್, ರಾಹುಲ್ ಗೆಹ್ಲೋಟ್ ಮತ್ತು ಜಿತೇಶ್ ಸಿಂಗ್.
ಇದನ್ನೂ ಓದಿ:RCB ಅಭಿಮಾನಿಗಳ ಕೆರಳಿಸಿದ ಮಾಜಿ ಕ್ರಿಕೆಟಿಗ.. ಇವರ ವಿವಾದದ ಲಿಸ್ಟ್ ಇಲ್ಲಿದೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ