/newsfirstlive-kannada/media/post_attachments/wp-content/uploads/2024/05/Virat-Kohli-RCB-1.jpg)
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​​-ಗವಾಸ್ಕರ್​​ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಇದಕ್ಕೆ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಅಂತಹ ಸ್ಟಾರ್​ ಕ್ರಿಕೆಟಿಗರು ನೀಡಿದ ಕಳಪೆ ಪ್ರದರ್ಶನ. ಅದರಲ್ಲೂ ಟೀಮ್​ ಇಂಡಿಯಾ ಸೋಲಿಗೆ ಕೊಹ್ಲಿ ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಫೇವರಿಟ್​ ಫಾರ್ಮೆಟ್​​ನಿಂದ ಡ್ರಾಪ್ ಆಗೋ ಆತಂಕ ಕೊಹ್ಲಿಗೆ ಎದುರಾಗಿದೆ. ಕೊಹ್ಲಿಯ ಆಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗ್ತಿದ್ದು, ಡೊಮೆಸ್ಟಿಕ್​ ಕ್ರಿಕೆಟ್​ ಆಡಬೇಕು ಎಂಬ ಕೂಗು ಹೆಚ್ಚಾಗಿದೆ. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಕೊಹ್ಲಿ, ಕರಿಯರ್​ ಉಳಿವಿಗೆ ಸ್ಮಾರ್ಟ್​ ಮೂವ್​ ಮಾಡಿದ್ದಾರೆ.
ಕೊಹ್ಲಿಯಿಂದ ಮಹತ್ವದ ನಿರ್ಧಾರ
ಕಳಪೆ ಫಾರ್ಮ್​​ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ವಿರಾಟ್​ ಇದೀಗ ಅಜಿಂಕ್ಯಾ ರಹಾನೆ, ಚೇತೇಶ್ವರ್​ ಪೂಜಾರ ಹಾದಿ ತುಳಿಯಲು ಮುಂದಾಗಿದ್ದಾರಂತೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಫೇಲ್​ ಆಗಿರೋ ಕೊಹ್ಲಿ, ಜೂನ್​ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್​​​ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ರೆ, ಟೆಸ್ಟ್​ ಕರಿಯರ್​​ ಅಂತ್ಯವಾಗುವ ಸಾಧ್ಯತೆಯಿದೆ. ಹೀಗಾಗಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಕೌಂಟಿ ಕ್ರಿಕೆಟ್​ ಆಡಲು ಕೊಹ್ಲಿ ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
/newsfirstlive-kannada/media/post_attachments/wp-content/uploads/2024/05/RCB_VIRAT_KARTHIK.jpg)
ಈ ಹಿಂದೆ ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿದ್ದ ಚೇತೇಶ್ವರ್​ ಫೂಜಾರ, ಅಜಿಂಕ್ಯಾ ರಹಾನೆ ಕೂಡ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ್ರು. ಇಂಗ್ಲೆಂಡ್​ನಲ್ಲಿ ಕ್ಲಬ್​ಗಳ ಪರ ಕಣಕ್ಕಿಳಿದಿದ್ದ ರಹಾನೆ, ಪೂಜಾರ ಫಾರ್ಮ್​ ಕಂಡುಕೊಂಡು, ಬಳಿಕ ಟೀಮ್​ ಇಂಡಿಯಾಗೆ ವಾಪಸ್ ಆಗಿದ್ದರು. ಇದೀಗ ವಿರಾಟ್​ ಕೂಡ ಇದೇ ಹಾದಿ ತುಳಿಯಲು ಮುಂದಾದಂತಿದೆ. ಟೆಸ್ಟ್​ ಸರಣಿಗೆ ಸಿದ್ಧತೆಯ ಭಾಗವಾಗಿ ಮೊಟ್ಟ ಮೊದಲ ಬಾರಿಗೆ ಕೌಂಟಿ ತಂಡವೊಂದರ ಪರ ಕಣಕ್ಕಿಳಿಯಲು ರೆಡಿಯಾದಂತಿದೆ.
ಕೊಹ್ಲಿ ಐಪಿಎಲ್​ ಆಡೋದು ಡೌಟ್​
ಕೊಹ್ಲಿ ಕೌಂಟಿ ಕ್ರಿಕೆಟ್​ ಆಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ಆದರೆ, ಪ್ರಾಕ್ಟಿಕಲಿ ಇದು ಸಾಧ್ಯ ಆಗುತ್ತ ಎಂಬ ಪ್ರಶ್ನೆ ಹುಟ್ಟಿದೆ. ಕೊಹ್ಲಿ ಕೌಂಟಿ ಕ್ರಿಕೆಟ್​ ಆಡಲು ಮುಂದಾದ್ರೆ, ಐಪಿಎಲ್​ನ ಕೆಲ ಪಂದ್ಯಗಳಿಂದ ಹೊರಗುಳಿಯಬೇಕು ಎನ್ನಲಾಗುತ್ತದೆ. ಪ್ರಾಕ್ಟಿಕಲಿ ಐಪಿಎಲ್​ ಟೂರ್ನಿಯನ್ನ ಸ್ಕಿಪ್​ ಮಾಡಿದ್ರೆ ಮಾತ್ರ ಕೊಹ್ಲಿಗೆ ಕೌಂಟಿ ಕ್ರಿಕೆಟ್​ ಆಡೋಕೆ ಸಾಧ್ಯವಾಗಲಿದೆ. ಕರಿಯರ್​ ಉಳಿವಿಗಾಗಿ ಕೊಹ್ಲಿ ಐಪಿಎಲ್​ ಬಿಡ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.
ಐಪಿಎಲ್​ ಫೈನಲ್​ ಪಂದ್ಯ ಮೇ 25ಕ್ಕೆ ನಡೆಯಲಿದೆ. ಇಂಗ್ಲೆಂಡ್​​ ಟೆಸ್ಟ್​ ಸರಣಿಯ ಮೊದಲ ಪಂದ್ಯ ಜೂನ್​ 20ರಿಂದ ಆರಂಭವಾಗಲಿದೆ. ಈ ಅಂತರದ ನಡುವೆ ಯಾವುದೇ ಕೌಂಟಿ ಪಂದ್ಯವನ್ನ ಕೂಡ ಇಂಗ್ಲೆಂಡ್​ ಕ್ರಿಕೆಟ್​​ ಬೋರ್ಡ್​​ ಶೆಡ್ಯೂಲ್​ ಮಾಡಿಲ್ಲ. 8ನೇ ರೌಂಡ್​ನ ಪಂದ್ಯಗಳು ಮೇ 13ರಿಂದ ಆರಂಭವಾದ್ರೆ, 9ನೇ ರೌಂಡ್​ನ ಪಂದ್ಯಗಳು ಜೂನ್​ 25ರಿಂದ ನಡೆಯಲಿವೆ. ಹೀಗಾಗಿ ಆರ್​​ಸಿಬಿ ಫ್ಲೇ ಆಫ್​ಗೆ ಪ್ರವೇಶಿಸಿದ್ರೆ, ಕೊಹ್ಲಿ ಕೌಂಟಿ ಕ್ರಿಕೆಟ್ ಆಡೋದು ಡೌಟೇ. ಹೀಗಾಗಿ ಕೊಹ್ಲಿ ಕೌಂಟಿ ಆಡ್ತಾರಾ? ಐಪಿಎಲ್​ ಆಡ್ತಾರಾ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ:ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗೌತಮ್​​ ಗಂಭೀರ್; ದೇವಿಗೆ ವಿಶೇಷ ಪೂಜೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us