Advertisment

ಸಾಲು ಸಾಲು ವೈಫಲ್ಯ, ಗುರುವಿನ ಮೊರೆ ಹೋದ ಕೊಹ್ಲಿ! ವಿರಾಟ್ ಬಗ್ಗೆ ಅವರು ಹೇಳಿದ್ದೇನು?

author-image
Gopal Kulkarni
Updated On
ಸಾಲು ಸಾಲು ವೈಫಲ್ಯ, ಗುರುವಿನ ಮೊರೆ ಹೋದ ಕೊಹ್ಲಿ! ವಿರಾಟ್ ಬಗ್ಗೆ ಅವರು ಹೇಳಿದ್ದೇನು?
Advertisment
  • ಸಂಕಷ್ಟದಲ್ಲಿ ಕರಿಯರ್​​​.. ಗುರುವಿಗೆ ಶರಣಾದ ಕೊಹ್ಲಿ.!
  • ವೃಂದಾವನಕ್ಕೆ ಪತ್ನಿ, ಮಕ್ಕಳ ಸಮೇತ ವಿರಾಟ್​ ಭೇಟಿ.!
  • ಪ್ರೇಮಾನಂದ ಮಹಾರಾಜರ​ ಆಶೀರ್ವಾದ ಪಡೆದ ‘ವಿರುಷ್ಕಾ’

ಚಾಣಾಕ್ಯ ನಾಯಕರ ರಣತಂತ್ರ ಬೇದಿಸಿ, ಘಟಾನುಘಟಿ ಬೌಲರ್​​ಗಳನ್ನ ಚಿಂದಿ ಉಡಾಯಿಸಿ ರಾಜನಂತೆ ಮರೆದಾಡಿದ್ದ ಕಿಂಗ್​ ಕೊಹ್ಲಿಯ ಹಳೆ ಖದರ್​ ಮಾಯವಾಗಿದೆ. ಸಾಲು ಸಾಲು ಫ್ಲಾಪ್​ ಶೋ... ಟೀಕೆಗಳ ಸುರಿಮಳೆ.. ರಿಟೈರ್​ಮೆಂಟ್​ ನೀಡುವಂತೆ ಆಗ್ರಹ.. ಡ್ರಾಪ್​ ಮಾಡಬೇಕು ಅನ್ನೋ ಕೂಗು.. ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​​ ವಿರಾಟ್​​ ಕೊಹ್ಲಿಯನ್ನ ಸುತ್ತ್ತುವರೆದಿವೆ. ಈ ಸಮಸ್ಯೆಗಳಿಂದ ಬೇಸತ್ತಿರೋ ಕೊಹ್ಲಿ ಇದೀಗ ನೆಮ್ಮದಿ ಬಯಸಿ ಪರಮ ಗುರುವಿಗೆ ಶರಣಾಗಿದ್ದಾರೆ.

Advertisment

ಸಂಕಷ್ಟಕ್ಕೆ ಸಿಲುಕಿದ ಕರಿಯರ್​​​.. ಗುರುವಿಗೆ ಶರಣಾದ ಕೊಹ್ಲಿ.!
ವಿರಾಟ್​ ಕೊಹ್ಲಿ ಕರಿಯರ್​ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಇದೇ ವೈಫಲ್ಯ ಮುಂದುವರೆದ್ರೆ ಕರಿಯರ್​ ಅಂತ್ಯವಾಗೋ ಎಲ್ಲಾ ಸಾಧ್ಯತೆಗಳಿವೆ. ಕಳಪೆ ಫಾರ್ಮ್​ನಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ರೋ ಸಕ್ಸಸ್​ ಅನ್ನೋದು ಸಿಗ್ತಿಲ್ಲ. ಇದ್ರಿಂದ ನೊಂದು ಬೆಂದಿರುವ ಕೊಹ್ಲಿ, ಇದೀಗ ಗುರುವಿಗೆ ಶರಣಾಗಿದ್ದಾರೆ.

ವೈಕುಂಠ ಏಕಾದಶಿಯಾದ ನಿನ್ನೆ ಬೆಳ್ಳಂಬೆಳಿಗ್ಗೆ ಪತ್ನಿ ಅನುಷ್ಕಾ ಶರ್ಮಾ, ಮಕ್ಕಳಾದ ವಮಿಕಾ ಹಾಗೂ ಅಕಾಯ್​ ಜೊತೆಗೂಡಿ ಉತ್ತರ ಪ್ರದೇಶದ ವೃಂದಾವನಕ್ಕೆ ಬೇಟಿ ನೀಡಿದ್ರು. ವೃಂದಾವನದಲ್ಲಿ ಗುರು ಪ್ರೇಮಾನಂದ ಮಹಾರಾಜರ ಶಿರಸಾಷ್ಟಾಂಗ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

ಕೊಹ್ಲಿಯ ಕಷ್ಟ ಕಂಡು ಗುರುಗಳ ಕಣ್ಣಲ್ಲಿ ನೀರು.!
ಈ ಬಾರಿಯ ಕೊಹ್ಲಿಯ ಭೇಟಿ ಎಷ್ಟು ಭಾವುಕವಾಗಿತ್ತಂದ್ರೆ, ಕರಿಯರ್​ ಉಳಿಸಿಕೊಡಿ ಎಂಬ ಮುಖಭಾವದಲ್ಲಿದ್ದ ಕೊಹ್ಲಿಯನ್ನ ಕಂಡು ಗುರುಗಳೇ ಭಾವುಕರಾಗಿಬಿಟ್ರು.

Advertisment

ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದ ಬೆನ್ನಲ್ಲೇ ಕೊಹ್ಲಿ ಧನ್ಯನಾದೆ ಎಂಬ ಭಾವದಲ್ಲಿ ಮೌನಕ್ಕೆ ಜಾರಿದ್ರು. ಆಗ ಮಾತನಾಡಿದ ಅನುಷ್ಕಾ ಶರ್ಮಾ, ಗುರುಗಳು ನಡೆಸಿಕೊಡೋ ಸತ್ಸಂಗ ಕಾರ್ಯಕ್ರಮ ಏಕಾಂತಿಕ್​ ವರ್ತಲಾಪ್​ನಲ್ಲಿ ಪವಾಡದ ರೀತಿ ತಮ್ಮ ಸಮಸ್ಯೆ ಪರಿಹಾರವಾದ ಕತೆ ಹೇಳಿದ್ರು.

ಈ ಹಿಂದೆ ನಾವು ಬಂದಿದ್ದಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ವು. ನಿಮ್ಮ ಬಳಿ ಆ ಪ್ರಶ್ನೆಗಳನ್ನ ಕೇಳಬೇಕು ಎಂದುಕೊಂಡಿದ್ದೆ. ಆದ್ರೆ, ಅಲ್ಲಿ ಯಾರೆಲ್ಲಾ ಕುಳಿತಿದ್ರೂ, ಅವರೆಲ್ಲರೂ ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನ ಕೇಳ್ತಿದ್ರು. ಈಗ ಮತ್ತೆ ಭೇಟಿ ನೀಡಬೇಕು ಎಂದು ನಾನು ಅಂದುಕೊಂಡಾಗ ಮನಸ್ಸಲ್ಲೇ ಮಾತನಾಡಿಕೊಳ್ತಿದ್ದೆ. ನಿಮ್ಮ ಹಲವು ಪ್ರಶ್ನೆಗಳನ್ನ ಅಂದು ಕೊಂಡಿದ್ದೆ. ಆದ್ರೆ ಮರುದಿನ ‘ಏಕಾಂತಿಕ್​ ವರ್ತಲಾಪ್​’ ನೋಡಿದಾಗ ಆ ಪ್ರಶ್ನೆಗಳನ್ನೂ ಬೇರೆಯವರು ಕೇಳಿದ್ರು.

ಈತ ಗೆದ್ರೆ ದೇಶ ಸಂಭ್ರಮಿಸುತ್ತದೆ.. ಸಾಧನೆ ಅಂದ್ರೆ ಇದು.!
ವಿರಾಟ್​ ಕೊಹ್ಲಿ ಬಗ್ಗೆ ಮಾತನಾಡಿದ ಗುರುಗಳು ಕೊಹ್ಲಿಯನ್ನ ಹಾಡಿಹೊಗಳಿದ್ರು. ಕೊಹ್ಲಿ ಸಾಧನೆ ಈ ದೇಶದ ಸಾಧನೆ ಎಂದು ಬಣ್ಣಿಸಿದ್ರು.
ನಾವು ಸಾಧನೆಯನ್ನ ಮಾಡಿ ಜನರಿಗೆ ಸಂತೋಷವನ್ನ ನೀಡುತ್ತಿದ್ದೇವೆ. ಈತ ಇಡೀ ಭಾರತಕ್ಕೆ ಒಂದು ಆಟದ ಮೂಲಕ ಸಂತೋಷವನ್ನ ನೀಡುತ್ತಿದ್ದಾನೆ. ಈತ ಗೆದ್ರೆ ಇಡೀ ಭಾರತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಇಡೀ ಭಾರತದಲ್ಲಿ ಆನಂದ ನೆಲೆಸುತ್ತದೆ. ದೇವರು ಆಶೀರ್ವದಿಸಿದರೆ ಈತನೊಂದಿಗೆ ಇಡೀ ಭಾರತ ಸಂಭ್ರಮಿಸುತ್ತದೆ. ವಿಜಯ ಪ್ರಾಪ್ತಿಯಾದ್ರೆ, ಭಾರತದ ಚಿಕ್ಕ ಚಿಕ್ಕ ಮಕ್ಕಳು ಕೂಡ ಆನಂದಿತರಾಗ್ತಾರೆ ಎಂದು ಗುರುಗಳು ಹೇಳಿದರು.

Advertisment

publive-image

ಕೊಹ್ಲಿ ಸಮಸ್ಯೆಗೆ ಪರಿಹಾರ ತಿಳಿಸಿದ ಗುರುಗಳು.!
ಸತತ ವೈಫಲ್ಯ, ಇನ್​​ಕನ್ಸಿಸ್ಟೆಂಟ್​ ಆಟದಿಂದ ಕೊಹ್ಲಿ ಸದ್ಯ ನರಳಾಡ್ತಿದ್ದಾರೆ. ಈ ಸಮಸ್ಯೆಗೆ ಅಭ್ಯಾಸವೊಂದೇ ಪರಿಹಾರ ಎಂದ ಪ್ರೇಮಾನಂದ ಮಹಾರಾಜರು ಅಭ್ಯಾಸವೇ ನಿನ್ನ ಸಾಧನೆ ಎಂದು ಕೊಹ್ಲಿಗೆ ಕಿವಿಮಾತು ಹೇಳಿದ್ದಾರೆ.
- ಅಭ್ಯಾಸ ನಡೆಸಬೇಕು. ಅಭ್ಯಾಸವೇ ಈತನ ಪ್ರಾರ್ಥನೆ. ಅಭ್ಯಾಸಕ್ಕೆ ಒತ್ತು ನೀಡಿ ಚನ್ನಾಗಿ ಆಡಿದ್ರೆ, ಭಾರತಕ್ಕೆ ಆನಂದ ಸಿಗುತ್ತೆ. ಈತನ ಗೆಲುವಿಗೆ. ಏನೇ ಕಾರಣಗಳಿರಲಿ. ಅಭ್ಯಾಸಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಅಭ್ಯಾಸದಲ್ಲಿ ಕಡಿಮೆಯಾಗಬಾರದು. ಆಗಾಗ ಭಗವಂತನ ನಾಮ ಸ್ಮರಣೆ ಮಾಡಬೇಕು. ಇದೇ ಈತನಿಗೆ ಸಾಧನೆ ಎಂದು ಪ್ರೇಮಾನಂದ್​ಜೀ ಹೇಳಿದರು.

ಇದನ್ನೂ ಓದಿ:ಯುವರಾಜ್ ಸಿಂಗ್ ಕರಿಯರ್ ಮುಗಿಸಿದ್ದೇ ಕೊಹ್ಲಿನಾ? ಹೀಗಂತ ಹೇಳಿದ್ದು ಯಾರು ಗೊತ್ತಾ?

ಸದ್ಯ ವೈಫಲ್ಯದ ಸುಳಿಗೆ ಸಿಲುಕಿರೋ ಕೊಹ್ಲಿಗೆ ದಿಕ್ಕೇ ತೋಚದಂತಾಗಿದೆ. WHAT NEXT ಎಂಬ ಪ್ರಶ್ನೆ ಕಾಡ್ತಿದೆ. ಚಿಂತಾಕ್ರಾಂತವಾಗಿರೋ ಕೊಹ್ಲಿಯ ಮುಖಭಾವವೇ ಇದನ್ನೆಲ್ಲಾ ಹೇಳ್ತಿದೆ. ಮುಂದೇನು ಮಾಡಬೇಕು ಎಂಬ ತೊಳಲಾಟಕ್ಕೆ ಸಿಲುಕಿರೋ ಕೊಹ್ಲಿಗೆ ಗುರುಗಳು ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ.

Advertisment

ನಾವು ಆ ಸಮಯದಲ್ಲಿ ಭಗವಂತನ ಚಿಂತನೆ ಮಾಡಬೇಕು. ಧೈರ್ಯವನ್ನ ಪಡೆದುಕೊಳ್ಳಬೇಕು. ಹೌದು..! ಅದು ತುಂಬಾ ಕಠಿಣ. ಸೋಲಿನಲ್ಲಿ ಯಾರಾದ್ರೂ ಧೈರ್ಯದಿಂದ ನಗು ಮುಖದೊಂದಿಗೆ ಇರೋದು ದೊಡ್ಡ ಮಾತು. ಎಲ್ಲಿ ಸೋಲು ಎದುರಾಗುತ್ತೋ ಅಲ್ಲೇ ಅದನ್ನ ಬಿಟ್ಟು ನಗುತ್ತಾ ಮುಂದೆ ಸಾಗಬೇಕು. ಸೋಲು ಯಾವಾಗಲೂ ಇರಲ್ಲ. ಬೆಳಗ್ಗೆ ಅನ್ನೋದು ಇಲ್ಲ ಅಂದ್ರೆ ರಾತ್ರಿ ಹೇಗೆ ಇರೋಕೆ ಸಾಧ್ಯ. ಆಗ ಧೈರ್ಯದಿಂದ ಭಗವಂತನೆ ಪ್ರಾರ್ಥನೆ ಮಾಡಬೇಕು. ಆದ್ರೆ, ಅದು ತುಂಬಾ ಕಠಿಣ. ಯಶಸ್ಸು ಸಿಕ್ಕಾಗ ಸನ್ಮಾನಗಳು ಸಿಗುತ್ತವೆ. ಸೋಲಿನಲ್ಲಿ ಸನ್ಮಾನ ಸಿಗಲ್ಲ.

publive-image

ಇದನ್ನೂ ಓದಿ:ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟರ್​​ ಚಹಾಲ್​​ ಹೆಂಡತಿ ಡೇಟಿಂಗ್​​; ಯಾರದು?

ವಿರಾಟ್​ ಕೊಹ್ಲಿ ಪ್ರೇಮಾನಂದ ಮಹಾರಾಜರ ಪರಮ ಭಕ್ತ. ಈ ಹಿಂದೆ 2023ರ ಜನವರಿಯಲ್ಲೂ ಸಂಕಷ್ಟ ಎದುರಾದಾಗ ಗುರುವಿನ ಬಳಿ ಬಂದು ನಮಸ್ಕರಿಸಿ ಆಶೀರ್ವಾದ ಪಡೆದಿದ್ರು. ಆ ಬಳಿಕ ಕೊಹ್ಲಿಯ ಕರಿಯರ್​ ಗ್ರಾಫ್​ ಏರಿತ್ತು. ಏಕದಿನ ವಿಶ್ವಕಪ್​ನಲ್ಲಿ ಆರ್ಭಟಿಸಿದ್ರು. ಇದೀಗ ಮತ್ತೆ ಕಷ್ಟ ಎದುರಾಗಿದೆ. ಸಕ್ಸಸ್​​ಗಾಗಿ ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಕೊಹ್ಲಿ, ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಆಶೀರ್ವಾದ ಪಡೆದಿದ್ದಾರೆ. ಕೊಹ್ಲಿಗೆ ಸಕ್ಸಸ್​ ಸಿಗುತ್ತಾ.? ಭವಿಷ್ಯ ಭದ್ರವಾಗುತ್ತಾ.? ಕಾಲವೇ ಉತ್ತರಿಸಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment