ಟಿ20 ವಿಶ್ವಕಪ್ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ
ವಿಶ್ವಕಪ್ ಆಡಲು ನ್ಯೂಯಾರ್ಕ್ಗೆ ಹಾರಿದ 2ನೇ ಬ್ಯಾಚ್
15 ಪಂದ್ಯಕ್ಕೆ ಸುಸ್ತಾದ ಈ ಆಟಗಾರ, ಭಾರೀ ಚರ್ಚೆ
ಐಪಿಎಲ್ ರಂಜನೆಯಲ್ಲಿ ಮಿಂದೆದ್ದ ಕ್ರಿಕೆಟ್ ಲೋಕದ ಚಿತ್ತ ಇದೀಗ ವಿಶ್ವಕಪ್ ಟೂರ್ನಿಯತ್ತ ಶಿಫ್ಟ್ ಆಗಿದೆ. ವಿಶ್ವಕಪ್ ಟೂರ್ನಿಯನ್ನಾಡಲು ನ್ಯೂಯಾರ್ಕ್ಗೆ ಟೀಮ್ ಇಂಡಿಯಾದ 2ನೇ ಬ್ಯಾಚ್ ಕೂಡ ಹಾರಿದೆ. ಆದರೆ ಕಿಂಗ್ ಕೊಹ್ಲಿ ಮಾತ್ರ ಕಣ್ಮರೆಯಾಗಿದ್ದಾರೆ. ವಿಶ್ವಕಪ್ಗೂ ಮುನ್ನ ತಂಡ ಕೂಡಿಕೊಳ್ಳಬೇಕಿದ್ದ ಕೊಹ್ಲಿ, ವಿಶ್ರಾಂತಿಯ ಮೊರೆ ಹೋಗಿದ್ದಾರೆ. ವಿರಾಟ್ ವಿಶ್ರಾಂತಿ ಟೀಮ್ ಇಂಡಿಯಾಗೆ ಹಿನ್ನಡೆಯಾಗಿ ಪರಿಣಮಿಸಿದೆ.
T20 ವಿಶ್ವಕಪ್ ಸಮರಕ್ಕೆ ಕೌಂಟ್ಡೌನ್
ಐಪಿಎಲ್ ಕ್ರಿಕೆಟ್ ಜಾತ್ರೆ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ, ಯುಎಸ್ಎಗೆ ಹಾರಿದೆ. ರೋಹಿತ್ ಶರ್ಮಾ ನೇತೃತ್ವದ ಮೊದಲ ಬ್ಯಾಚ್ನಲ್ಲಿ ಕೆಲ ಆಟಗಾರರು ಭಾನುವಾರವೇ ಯುಎಸ್ಎ ತಲುಪಿದ್ರು. ಇದೀಗ 2ನೇ ಬ್ಯಾಚ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಿನ್ನೆ ಫ್ಲೈಟ್ ಏರಿದ್ದಾರೆ. ಯುಜುವೇಂದ್ರ ಚಹಲ್, ಯಶಸ್ವಿ ಜೈಸ್ವಾಲ್, ಆವೇಶ್ ಖಾನ್ ಪ್ರಯಾಣ ಬೆಳೆಸಿದ್ದಾರೆ. ಇದೇ ತಂಡದೊಂದಿಗೆ ಹಾರಬೇಕಿದ್ದ ಕಿಂಗ್ ಕೊಹ್ಲಿ ಮಾತ್ರ ಕಣ್ಮರೆಯಾಗಿದ್ದಾರೆ.
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ಐಪಿಎಲ್ ಆಡಿ ದಣಿದ ಕೊಹ್ಲಿಗೆ ಬೇಕಂತೆ ಬ್ರೇಕ್
ಸೆಕೆಂಡ್ ಬ್ಯಾಚ್ನೊಂದಿಗೆ ವಿರಾಟ್ ಕೊಹ್ಲಿ ಪ್ರಯಾಣಿಸ್ತಾರೆ ಎನ್ನಲಾಗಿತ್ತು. ಆದ್ರೀಗ ಕೊಹ್ಲಿ ಭಾರತದಲ್ಲೇ ಉಳಿದುಕೊಂಡಿದ್ದಾರೆ. ಮೂಲಗಳ ಪ್ರಕಾರ ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಿಸಿಸಿಐ ಬಳಿ ವಿಶ್ರಾಂತಿಗೆ ಮನವಿ ಮಾಡಿದ್ರಂತೆ. ಇದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ನೀಡಿದ್ದು, ಬಾಂಗ್ಲಾದೇಶ ವಿರುದ್ಧ ಮೊದಲ ಅಭ್ಯಾಸ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ ಆಗಿದೆ.
ಒಬ್ಬರಿಗೊಂದು ನ್ಯಾಯ? ಇನ್ನೊಬ್ಬರಿಗೆ ಒಂದು ನ್ಯಾಯ?
ಐಪಿಎಲ್ ಸೀಸನ್ 17ರಲ್ಲಿ ವಿರಾಟ್ ಕೊಹ್ಲಿ ಆಡಿದ್ದು 15 ಪಂದ್ಯ. ಸದ್ಯ ಯುಎಸ್ಎಗೆ ಹಾರಿರುವ ಕೆಲ ಕ್ರಿಕೆಟರ್ಸ್ ಕೂಡ ಐಪಿಎಲ್ನಲ್ಲಿ ಎಲ್ಲಾ ಪಂದ್ಯಗಳನ್ನ ಆಡಿದವರಿದ್ದಾರೆ. 2ನೇ ಬ್ಯಾಚ್ನಲ್ಲಿ ಪ್ರಯಾಣಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ಇನ್ನೊಂದು ಪಂದ್ಯ ಹೆಚ್ಚೇ ಆಡಿದ್ದಾರೆ. ವಿರಾಟ್ ಕೊಹ್ಲಿಗೆ ಮಾತ್ರ ವಿಶ್ರಾಂತಿ ನೀಡಲಾಗಿದೆ. ಅವರ್ಯಾರಿಗೂ ಸಿಗದ ಎಕ್ಸ್ಕ್ಯೂಸ್ ವಿರಾಟ್ ಕೊಹ್ಲಿಗೆ ಮಾತ್ರ ಯಾಕೆ ಅನ್ನೂ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿದೆ.
ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?
15 ಪಂದ್ಯಕ್ಕೆ ಸುಸ್ತಾದ್ರಾ ಕೊಹ್ಲಿ?
ವಿಶ್ವಕಪ್ ಆಡಲು ನ್ಯೂಯಾರ್ಕ್ಗೆ ಹಾರಿರುವ ಕೆಲ ಕ್ರಿಕೆಟರ್ಸ್ ಸತತ ಕ್ರಿಕೆಟ್ನಿಂದ ದಣಿದಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಐಪಿಎಲ್ಗೂ ಮುನ್ನ ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನಾಡಿದ್ರು. ಆ ಬಳಿಕ ಐಪಿಎಲ್ನ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನಾಡಿದ್ರು. ಇಂಗ್ಲೆಂಡ್ ಸರಣಿ ವೇಳೆಯೂ ಸುದೀರ್ಘ ವಿಶ್ರಾಂತಿ ಪಡೆದ ವಿರಾಟ್ ಕೊಹ್ಲಿ, ಆ ಬಳಿಕ ಐಪಿಎಲ್ನಲ್ಲಿ ಆಡಿದ್ದು 15 ಪಂದ್ಯ ಮಾತ್ರ. ಅಷ್ಟಕ್ಕೇ ಕೊಹ್ಲಿ, ಸುಸ್ತಾದ್ರಾ ಅನ್ನೋದೂ ಬಹುತೇಕರ ಪ್ರಶ್ನೆಯಾಗಿದೆ.
ತಂಡಕ್ಕಿತ್ತು ಅನುಭವಿ ವಿರಾಟ್ ಕೊಹ್ಲಿಯ ಅಗತ್ಯತೆ
ಐಸಿಸಿ ಟಿ20 ವಿಶ್ವಕಪ್ನಂತಹ ಬಿಗ್ ಸ್ಟೇಜ್ನಲ್ಲಿ ವಿರಾಟ್ ಕೊಹ್ಲಿಯ ಅಗತ್ಯತೆ ತಂಡಕ್ಕೆ ಹೆಚ್ಚಿತ್ತು. ಅನುಭವಿಯಾಗಿರೋ ಕೊಹ್ಲಿ ಪಾಠದ ಅಗತ್ಯತೆ ತಂಡದಲ್ಲಿರೋ ಯುವ ಆಟಗಾರರಿಗಿತ್ತು. ಟೀಮ್ ಬಾಂಡಿಂಗ್ ದೃಷ್ಟಿಯಿಂದಲೂ ಎಲ್ಲಾ ಆಟಗಾರರು ಆದಷ್ಟು ಬೇಗ ರೀ ಗ್ರೂಪ್ ಆಗಬೇಕಿತ್ತು. ಸೀನಿಯರ್ ಆಟಗಾರನಾಗಿ ಕೊಹ್ಲಿ ಮುಂದೆ ನಿಂತು ಉಳಿದ ಆಟಗಾರರಿಗೆ ಮಾದರಿಯಾಗಬೇಕಿತ್ತು. ಆದ್ರೆ ಹಿಂದುಳಿದಿದ್ದು ಬೇಸರದ ವಿಚಾರವಾಗಿದೆ.
ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!
ಕೊಹ್ಲಿ ಐಪಿಎಲ್ನಲ್ಲಿ ದರ್ಬಾರ್ ನಡೆಸಿದ್ದಾರೆ. ಸಾಲಿಡ್ ಫಾರ್ಮ್ನಲ್ಲಿ ರನ್ಗಳಿಸಿದ್ದಾರೆ. ಆದರೆ ಯುಎಸ್ಎನಲ್ಲಿ ಈ ಹಿಂದೆ ಆಡಿದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಫ್ಲಾಪ್ ಶೋ ಕೊಟ್ಟಿದ್ದಾರೆ. ಎರಡೂ ಬಾರಿಯ ಪ್ರವಾಸದಲ್ಲಿ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿಗೆ ಅಲ್ಲಿನ ಕಂಡೀಷನ್ಸ್ಗೆ ಹೊಂದಿಕೊಳ್ಳೋದು ತುಂಬಾ ಇಂಪಾರ್ಟೆಂಟ್ ಆಗಿತ್ತು. ಆದ್ರೆ, ಮಹತ್ವದ ಟೂರ್ನಿಗೂ ಮುನ್ನ ವಿಶ್ರಾಂತಿ ಮೊರೆ ಹೋಗಿರೋದು ಸಿದ್ಧತೆಯ ದೃಷ್ಟಿಯಿಂದ ಸ್ವತಃ ಕೊಹ್ಲಿಗೆ ಹಿನ್ನಡೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್