newsfirstkannada.com

ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?

Share :

Published May 29, 2024 at 10:01am

Update May 29, 2024 at 10:02am

    ಟಿ20 ವಿಶ್ವಕಪ್​ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ

    ವಿಶ್ವಕಪ್ ಆಡಲು ನ್ಯೂಯಾರ್ಕ್​ಗೆ ಹಾರಿದ 2ನೇ ಬ್ಯಾಚ್

    15 ಪಂದ್ಯಕ್ಕೆ ಸುಸ್ತಾದ ಈ ಆಟಗಾರ, ಭಾರೀ ಚರ್ಚೆ

ಐಪಿಎಲ್​​ ರಂಜನೆಯಲ್ಲಿ ಮಿಂದೆದ್ದ ಕ್ರಿಕೆಟ್​ ಲೋಕದ ಚಿತ್ತ ಇದೀಗ ವಿಶ್ವಕಪ್​ ಟೂರ್ನಿಯತ್ತ ಶಿಫ್ಟ್​ ಆಗಿದೆ. ವಿಶ್ವಕಪ್​ ಟೂರ್ನಿಯನ್ನಾಡಲು ನ್ಯೂಯಾರ್ಕ್​​ಗೆ ಟೀಮ್​​ ಇಂಡಿಯಾದ 2ನೇ ಬ್ಯಾಚ್​ ಕೂಡ​ ಹಾರಿದೆ. ಆದರೆ ಕಿಂಗ್​ ಕೊಹ್ಲಿ ಮಾತ್ರ ಕಣ್ಮರೆಯಾಗಿದ್ದಾರೆ. ವಿಶ್ವಕಪ್​​ಗೂ ಮುನ್ನ ತಂಡ ಕೂಡಿಕೊಳ್ಳಬೇಕಿದ್ದ ಕೊಹ್ಲಿ, ವಿಶ್ರಾಂತಿಯ ಮೊರೆ ಹೋಗಿದ್ದಾರೆ. ವಿರಾಟ್​ ವಿಶ್ರಾಂತಿ ಟೀಮ್​ ಇಂಡಿಯಾಗೆ ಹಿನ್ನಡೆಯಾಗಿ ಪರಿಣಮಿಸಿದೆ.

T20 ವಿಶ್ವಕಪ್​ ಸಮರಕ್ಕೆ ಕೌಂಟ್​ಡೌನ್​​
ಐಪಿಎಲ್​ ಕ್ರಿಕೆಟ್​ ಜಾತ್ರೆ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ, ಯುಎಸ್​​ಎಗೆ ಹಾರಿದೆ. ರೋಹಿತ್​ ಶರ್ಮಾ ನೇತೃತ್ವದ ಮೊದಲ ಬ್ಯಾಚ್​​ನಲ್ಲಿ ಕೆಲ ಆಟಗಾರರು ಭಾನುವಾರವೇ ಯುಎಸ್​​ಎ ತಲುಪಿದ್ರು. ಇದೀಗ 2ನೇ ಬ್ಯಾಚ್​ನಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರರು ನಿನ್ನೆ ಫ್ಲೈಟ್​ ಏರಿದ್ದಾರೆ. ಯುಜುವೇಂದ್ರ ಚಹಲ್​, ಯಶಸ್ವಿ ಜೈಸ್ವಾಲ್​, ಆವೇಶ್​ ಖಾನ್​ ಪ್ರಯಾಣ ಬೆಳೆಸಿದ್ದಾರೆ. ಇದೇ ತಂಡದೊಂದಿಗೆ ಹಾರಬೇಕಿದ್ದ ಕಿಂಗ್​ ಕೊಹ್ಲಿ ಮಾತ್ರ ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ಐಪಿಎಲ್​​ ಆಡಿ ದಣಿದ ಕೊಹ್ಲಿಗೆ ಬೇಕಂತೆ ಬ್ರೇಕ್
ಸೆಕೆಂಡ್​ ಬ್ಯಾಚ್​ನೊಂದಿಗೆ ವಿರಾಟ್​ ಕೊಹ್ಲಿ ಪ್ರಯಾಣಿಸ್ತಾರೆ ಎನ್ನಲಾಗಿತ್ತು. ಆದ್ರೀಗ ಕೊಹ್ಲಿ ಭಾರತದಲ್ಲೇ ಉಳಿದುಕೊಂಡಿದ್ದಾರೆ. ಮೂಲಗಳ ಪ್ರಕಾರ ಐಪಿಎಲ್​ ಟೂರ್ನಿ ಮುಗಿದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಬಿಸಿಸಿಐ ಬಳಿ ವಿಶ್ರಾಂತಿಗೆ ಮನವಿ ಮಾಡಿದ್ರಂತೆ. ಇದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ನೀಡಿದ್ದು, ಬಾಂಗ್ಲಾದೇಶ ವಿರುದ್ಧ ಮೊದಲ ಅಭ್ಯಾಸ ಪಂದ್ಯದಿಂದ ವಿರಾಟ್​ ಕೊಹ್ಲಿ ಹೊರಗುಳಿಯಲಿದ್ದಾರೆ ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ ಆಗಿದೆ.

ಒಬ್ಬರಿಗೊಂದು ನ್ಯಾಯ? ಇನ್ನೊಬ್ಬರಿಗೆ ಒಂದು ನ್ಯಾಯ?
ಐಪಿಎಲ್​ ಸೀಸನ್​ 17ರಲ್ಲಿ ವಿರಾಟ್​ ಕೊಹ್ಲಿ ಆಡಿದ್ದು 15 ಪಂದ್ಯ. ಸದ್ಯ ಯುಎಸ್​​ಎಗೆ ಹಾರಿರುವ ಕೆಲ ಕ್ರಿಕೆಟರ್ಸ್​ ಕೂಡ ಐಪಿಎಲ್​ನಲ್ಲಿ ಎಲ್ಲಾ ಪಂದ್ಯಗಳನ್ನ ಆಡಿದವರಿದ್ದಾರೆ. 2ನೇ ಬ್ಯಾಚ್​ನಲ್ಲಿ ಪ್ರಯಾಣಿಸಿದ ರಾಜಸ್ಥಾನ್​​ ರಾಯಲ್ಸ್ ​ತಂಡದ ಆಟಗಾರರು ಇನ್ನೊಂದು ಪಂದ್ಯ ಹೆಚ್ಚೇ ಆಡಿದ್ದಾರೆ. ವಿರಾಟ್​ ಕೊಹ್ಲಿಗೆ ಮಾತ್ರ ವಿಶ್ರಾಂತಿ ನೀಡಲಾಗಿದೆ. ಅವರ್ಯಾರಿಗೂ ಸಿಗದ ಎಕ್ಸ್​​ಕ್ಯೂಸ್​​ ವಿರಾಟ್​ ಕೊಹ್ಲಿಗೆ ಮಾತ್ರ ಯಾಕೆ ಅನ್ನೂ ಪ್ರಶ್ನೆ ಸದ್ಯ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗ್ತಿದೆ.

ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?

15 ಪಂದ್ಯಕ್ಕೆ ಸುಸ್ತಾದ್ರಾ ಕೊಹ್ಲಿ?
ವಿಶ್ವಕಪ್​ ಆಡಲು ನ್ಯೂಯಾರ್ಕ್​ಗೆ ಹಾರಿರುವ ಕೆಲ ಕ್ರಿಕೆಟರ್ಸ್​ ಸತತ ಕ್ರಿಕೆಟ್​ನಿಂದ ದಣಿದಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ, ಜಸ್​​ಪ್ರಿತ್​ ಬೂಮ್ರಾ, ರವೀಂದ್ರ ಜಡೇಜಾ ಐಪಿಎಲ್​ಗೂ ಮುನ್ನ ಇಂಡೋ-ಇಂಗ್ಲೆಂಡ್​ ಟೆಸ್ಟ್​​ ಸರಣಿಯನ್ನಾಡಿದ್ರು. ಆ ಬಳಿಕ ಐಪಿಎಲ್​​ನ ಲೀಗ್​ ಹಂತದ ಎಲ್ಲಾ ಪಂದ್ಯಗಳನ್ನಾಡಿದ್ರು. ಇಂಗ್ಲೆಂಡ್​ ಸರಣಿ ವೇಳೆಯೂ ಸುದೀರ್ಘ ವಿಶ್ರಾಂತಿ ಪಡೆದ ವಿರಾಟ್​​ ಕೊಹ್ಲಿ, ಆ ಬಳಿಕ ಐಪಿಎಲ್​ನಲ್ಲಿ ಆಡಿದ್ದು 15 ಪಂದ್ಯ ಮಾತ್ರ. ಅಷ್ಟಕ್ಕೇ ಕೊಹ್ಲಿ, ಸುಸ್ತಾದ್ರಾ ಅನ್ನೋದೂ ಬಹುತೇಕರ ಪ್ರಶ್ನೆಯಾಗಿದೆ.

ತಂಡಕ್ಕಿತ್ತು ಅನುಭವಿ ವಿರಾಟ್​ ಕೊಹ್ಲಿಯ ಅಗತ್ಯತೆ
ಐಸಿಸಿ ಟಿ20 ವಿಶ್ವಕಪ್​ನಂತಹ ಬಿಗ್​ ಸ್ಟೇಜ್​ನಲ್ಲಿ ವಿರಾಟ್​ ಕೊಹ್ಲಿಯ ಅಗತ್ಯತೆ ತಂಡಕ್ಕೆ ಹೆಚ್ಚಿತ್ತು. ಅನುಭವಿಯಾಗಿರೋ ಕೊಹ್ಲಿ ಪಾಠದ ಅಗತ್ಯತೆ ತಂಡದಲ್ಲಿರೋ ಯುವ ಆಟಗಾರರಿಗಿತ್ತು. ಟೀಮ್​ ಬಾಂಡಿಂಗ್​ ದೃಷ್ಟಿಯಿಂದಲೂ ಎಲ್ಲಾ ಆಟಗಾರರು ಆದಷ್ಟು ಬೇಗ ರೀ ಗ್ರೂಪ್​ ಆಗಬೇಕಿತ್ತು. ಸೀನಿಯರ್​ ಆಟಗಾರನಾಗಿ ಕೊಹ್ಲಿ ಮುಂದೆ ನಿಂತು ಉಳಿದ ಆಟಗಾರರಿಗೆ ಮಾದರಿಯಾಗಬೇಕಿತ್ತು. ಆದ್ರೆ ಹಿಂದುಳಿದಿದ್ದು ಬೇಸರದ ವಿಚಾರವಾಗಿದೆ.

ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

ಕೊಹ್ಲಿ ಐಪಿಎಲ್​ನಲ್ಲಿ ದರ್ಬಾರ್​ ನಡೆಸಿದ್ದಾರೆ. ಸಾಲಿಡ್​ ಫಾರ್ಮ್​ನಲ್ಲಿ ರನ್​ಗಳಿಸಿದ್ದಾರೆ. ಆದರೆ ಯುಎಸ್​ಎನಲ್ಲಿ ಈ ಹಿಂದೆ ಆಡಿದ ಪಂದ್ಯಗಳಲ್ಲಿ ವಿರಾಟ್​​ ಕೊಹ್ಲಿ ಫ್ಲಾಪ್​ ಶೋ ಕೊಟ್ಟಿದ್ದಾರೆ. ಎರಡೂ ಬಾರಿಯ ಪ್ರವಾಸದಲ್ಲಿ ವೈಫಲ್ಯ ಕಂಡಿರುವ ವಿರಾಟ್​​ ಕೊಹ್ಲಿಗೆ ಅಲ್ಲಿನ ಕಂಡೀಷನ್ಸ್​​ಗೆ ಹೊಂದಿಕೊಳ್ಳೋದು ತುಂಬಾ ಇಂಪಾರ್ಟೆಂಟ್​ ಆಗಿತ್ತು. ಆದ್ರೆ, ಮಹತ್ವದ ಟೂರ್ನಿಗೂ ಮುನ್ನ ವಿಶ್ರಾಂತಿ ಮೊರೆ ಹೋಗಿರೋದು ಸಿದ್ಧತೆಯ ದೃಷ್ಟಿಯಿಂದ ಸ್ವತಃ ಕೊಹ್ಲಿಗೆ ಹಿನ್ನಡೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?

https://newsfirstlive.com/wp-content/uploads/2024/05/BCCI-2.jpg

Load More