newsfirstkannada.com

ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI

Share :

Published July 12, 2024 at 2:07pm

    ಕೊಹ್ಲಿಯನ್ನ ಸೈಡ್​ಲೈನ್ ಮಾಡಿದ್ರಾ ಬಿಗ್​ಬಾಸ್​ಗಳು?

    ಹೊಸ ಕೋಚ್​ ಆಯ್ಕೆಯಲ್ಲಿ ಕಿಂಗ್​ ಕೊಹ್ಲಿ ಸೈಡ್​ಲೈನ್​?

    ಕೊಹ್ಲಿ ಅಭಿಪ್ರಾಯ ಪಡೆಯದೇ ಗಂಭೀರ್​ ನೇಮಕ

ಕಿಂಗ್ ಕೊಹ್ಲಿ ಹಾಕಿದ ಗೆರೆಯನ್ನ ಬಿಸಿಸಿಐ ದಾಟದ ಕಾಲವೊಂದಿತ್ತು. ಅಂದ್ರೆ ವಿರಾಟ್ ಮಾತಿಗೆ ಅಷ್ಟೊಂದು ಮನ್ನಣೆ ಕೊಡ್ತಿತ್ತು. ಕೊಹ್ಲಿ ಟಿ20 ಕ್ರಿಕೆಟ್​ಗೆ ಗುಡ್​​​ಬೈ ಹೇಳಿದ್ದೇ ತಡ ಬಿಗ್​​ಬಾಸ್​ಗಳು ವರಸೆ ಬದಲಿಸಿದ್ದಾರೆ. ಕೊಹ್ಲಿ ನಾಮಬಲದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಬೆಳೆದ ಬಿಸಿಸಿಐ, ಇದೀಗ ಜಗಮೆಚ್ಚಿದ ವಿರಾಟ್​ರನ್ನೇ ಸೈಡ್​​ಲೈನ್​ ಮಾಡಿದೆ.

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ಅಗ್ರಜ. ಈ ರಣವಿಕ್ರಮನ ಪ್ರಖ್ಯಾತಿಗೆ ಜಗತ್ತೇ ತಲೆಬಾಗಿದೆ. ಭಾರತೀಯ ಕ್ರಿಕೆಟ್ ಮಟ್ಟಿಗೆ ಕೊಹ್ಲಿ ಮೋಸ್ಟ್​​ ಪವರ್​​ಫುಲ್ ಕ್ರಿಕೆಟರ್​. ಈ ಮೊದಲು ಬಿಸಿಸಿಐಗೆ ಈ ಗ್ಲೋಬನ್​ ಐಕಾನ್​​​​​​ ಹೇಳಿದ್ದೇ ವೇದವಾಕ್ಯ. ಹೊಸ ಕ್ಯಾಪ್ಟನ್​​​​, ಹೊಸ ಕೋಚ್​ ಆಯ್ಕೆ ಸೇರಿದಂತೆ ಅನೇಕ ನಿರ್ಧಾರಗಳಲ್ಲಿ ಬಿಸಿಸಿಐ ವಿರಾಟ್ ಅಭಿಪ್ರಾಯ ತೆಗೆದುಕೊಳ್ತಿತ್ತು. ಜಂಟಲ್​ಮನ್​ ಗೇಮ್​​ನಲ್ಲಿ ಕಿಂಗ್ ಕೊಹ್ಲಿ ಖದರ್​ ಕಮ್ಮಿ ಆಗ್ತಿದ್ದಂತೆ ಬಿಗ್​​ಬಾಸ್​ಗಳು ಸೆಂಚುರಿ ಸಾಮ್ರಾಟನನ್ನು ತೆರೆಮರೆಗೆ ಸರಿಸುವ ಪ್ರಯತ್ನಕ್ಕೆ ಕೈ ಹಾಕಿದಂತಿದೆ.

ಇದನ್ನೂ ಓದಿ:ಭರತನಾಟ್ಯ ಪ್ರವೀಣೆ.. ಸ್ವಿಮ್ಮಿಂಗ್, ಚಾರಣ ಅಂದ್ರೆ ಪಂಚಪ್ರಾಣ.. ರಾಧಿಕಾ ಮರ್ಚಂಟ್ ಹಿನ್ನೆಲೆ ಏನು?

ಭಾರತೀಯ ಕ್ರಿಕೆಟ್​ನಲ್ಲಿ ಕಮ್ಮಿಯಾಯ್ತಾ ಕೊಹ್ಲಿ ಖದರ್​​..!
ಟೀಮ್ ಇಂಡಿಯಾದಲ್ಲಿ ಗೌತಮ್ ಗಂಭೀರ್​​ ಯುಗಾರಂಭವಾಗಿದೆ. ರಾಹುಲ್​ ದ್ರಾವಿಡ್​ ಉತ್ತರಾಧಿಕಾರಿಯಾಗಿ ಗಂಭೀರ್​ ನೇಮಕಗೊಂಡಿದ್ದಾರೆ. ಭಾರತಕ್ಕೆ ಹೊಸ ಕೋಚ್​​​​ ಎಂಟ್ರಿಕೊಟ್ಟ ಬೆನ್ನಲ್ಲೆ ಮಾಜಿ ಕ್ಯಾಪ್ಟನ್​ ಕೊಹ್ಲಿಗೆ ತಂಡದಲ್ಲಿ ಬೆಲೆಯೇ ಇಲ್ಲದಂತಾಗಿದೆ. ದಶಕಕ್ಕೂ ಅಧಿಕ ಕಾಲ ಕೊಹ್ಲಿ ಹಿಂದೆ ಬೇತಾಳನಂತೆ ಬಿದ್ದಿದ್ದ ಬಿಸಿಸಿಐ, ಇದೀಗ ಮಾಡ್ರನ್ ಕ್ರಿಕೆಟ್​ ದೊರೆಯನ್ನು ಲೆಕ್ಕಕ್ಕೆ ತೆಗೆದುಕೊಳ್ತಿಲ್ಲ.

ಹೊಸ ಕೋಚ್​ ಆಯ್ಕೆಯಲ್ಲಿ ಕೊಹ್ಲಿ ಸೈಡ್​ಲೈನ್​..!
ಇದೇ ನೋಡಿ ಅಸಲಿ ಮ್ಯಾಟರ್​​. ಜುಲೈ 9 ರಂದು ಬಿಸಿಸಿಐ ಟೀಮ್ ಇಂಡಿಯಾ ನೂತನ ಹೆಡ್​​​ಕೋಚ್​ ಆಗಿ ಗೌತಮ್ ಗಂಭೀರ್​​ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿತ್ತು. ಗಂಭೀರ್​​ ನೇಮಕದ ವೇಳೆ ಬಿಸಿಸಿಐ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿಯ ಅಭಿಪ್ರಾಯವನ್ನೇ ಕೇಳಿಲ್ವಂತೆ. ಅವರ ಜೊತೆ ಈ ವಿಚಾರವಾಗಿ ಸ್ವಲ್ಪವೂ ಚರ್ಚಿಸದೇ ಗಂಭೀರ್ ಹೆಸರನ್ನು ಅನೌನ್ಸ್ ಮಾಡಲಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಕ್ಯಾಪ್ಟನ್​​ ಅಥವಾ ಕೋಚ್​​​​​​​​​​​​ ನೇಮಕದ ವೇಳೆ ತಂಡದ ಹಿರಿಯ ಆಟಗಾರರ ಅಭಿಪ್ರಾಯ ಪಡೆಯುವ ಪದ್ಧತಿ ಇದೆ. ವಿರಾಟ್ ಕೊಹ್ಲಿ ಕೂಡ ತಂಡದ ಮೋಸ್ಟ್​ ಸೀನಿಯರ್​​ ಪ್ಲೇಯರ್​​. ಕ್ಯಾಪ್ಟನ್ ರೋಹಿತ್​​​ ಶರ್ಮಾರಷ್ಟೇ ಅನುಭವಿ ಕ್ರಿಕೆಟಿಗ. ಇಂಥಾ ಕೊಹ್ಲಿ ಬಳಿ ಬಿಸಿಸಿಐ, ಸೌಜನ್ಯಕ್ಕೂ ಸಲಹೆ ಕೇಳುವ ಮನಸ್ಸು ಮಾಡಿಲ್ಲ. ಸಂಪೂರ್ಣವಾಗಿ ನಿರ್ಲಕ್ಷಿಸಿ ನ್ಯೂ ಕೋಚ್​​​​​ ನೇಮಕ ಮಾಡಲಾಗಿದೆ.

ಇದನ್ನೂ ಓದಿ:ಮಿಸ್ಟ್ರಿ ಗರ್ಲ್​ ಜೊತೆ ಹಾರ್ದಿಕ್​ ಪಾಂಡ್ಯ ಡೇಟಿಂಗ್​​​? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!

ಗಂಭೀರ್​​ ಆಯ್ಕೆಯಲ್ಲಿ ಹಾರ್ದಿಕ್​​​ ಮಾತಿಗೆ ಮನ್ನಣೆ
ಗೌತಮ್​ ಗಂಭೀರ್​​ರನ್ನ ಟೀಮ್ ಇಂಡಿಯಾದ ಕೋಚ್​​​​ ಮಾಡೋಕು ಮುಂಚೆ ಹಾರ್ದಿಕ್​ ಪಾಂಡ್ಯ ಜೊತೆ ಬಿಸಿಸಿಐ ಮಾತುಕತೆ ನಡೆಸಿದೆ. ಪಾಂಡ್ಯ ಅಭಿಪ್ರಾಯ ಪಡೆದ ಬಳಿಕವೇ ಗೌತಿ, ದ್ರಾವಿಡ್​ ಉತ್ತರಾಧಿಕಾರಿ ಪಟ್ಟಕ್ಕೇರಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹಾರ್ದಿಕ್​​​ ಮಾತಿಗೆ ಮನ್ನಣೆ ಕೊಟ್ಟ ಬಿಸಿಸಿಐ, ಕೊಹ್ಲಿಯನ್ನ ಕಡೆಗಣಿಸಿದೆ.

ಕೊಹ್ಲಿ ತಂಡದ ಎಲ್ಲರಂತೆ ಸಾಮಾನ್ಯ ಆಟಗಾರ ಅಲ್ಲ. ಅವರೊಬ್ಬ ಲೆಜೆಂಡ್ರಿ ಕ್ರಿಕೆಟರ್​​. 17 ವರ್ಷಗಳ ಕಾಲ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಯಕನಾಗಿ ಹಲವು ವರ್ಷಗಳ ಕಾಲ ತಂಡವನ್ನ ಮುನ್ನಡೆಸಿದ್ದಾರೆ. ತಂಡ ಕಟ್ಟಿರೋದ್ರಲ್ಲಿ ವಿರಾಟ್ ಶ್ರಮ ಅಪಾರ. ಇಂತಹ ಅಪಾರ ಅನುಭವವುಳ್ಳ ಆಟಗಾರನನ್ನ ಹೊಸ ಕೋಚ್ ಆಯ್ಕೆಯಲ್ಲಿ ಸೈಡ್​ಲೈನ್ ಮಾಡಿದ್ದು ನಿಜಕ್ಕೂ ಯಾರು ಒಪ್ಪುವಂತಹದ್ದಲ್ಲ.

ಇದನ್ನೂ ಓದಿ:ಅಪರ್ಣಾ ತಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದ ಮೂರು ಸೂತ್ರಗಳು.. ಆ ಮುತ್ತಿನಂಥ ಮಾತುಗಳು ಏನು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI

https://newsfirstlive.com/wp-content/uploads/2024/07/KOHLI-24.jpg

Load More